ತ್ರಿಶ್ಶೂರ್(ಕೇರಳ): ಕೇರಳ ಮೂಲದ ಯುವಕ ಆತ.ಚೀನಾದ ಯಿವು ಎಂಬಲ್ಲಿ ಅಕೌಂಟೆಂಟ್ ಆಗಿದ್ದ.ಈ ಪಟ್ಟಣ ವುಹಾನ್ ನಿಂದ 1,500 ಕಿ.ಮೀ.ಅಂತರದಲ್ಲಿದೆ. ಆತನ ಮದುವೆಗೆ ಇನ್ನು ಎರಡು ವಾರ ಉಳಿದಿತ್ತು.ಕಡಂಗೋಡ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆತನ ಮದುವೆ ಫೆ.3ರಂದು ನಿಶ್ಚಯವಾಗಿತ್ತು.
ಇದಕ್ಕಾಗಿ ಖುಷಿ ಸಂಭ್ರಮದೊಂದಿಗೆ ಆತ ಚೀನಾದಿಂದ ವಿಮಾನವೇರಿ ಕೇರಳಕ್ಕೆ ಜನವರಿ 19ಕ್ಕೆ ಆಗಮಿಸಿದ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದ ಆತನಿಗೆ ಮದುವೆ ಆಗುತ್ತಿರುವ ಖುಷಿ ಸಂಭ್ರಮ ಉಳಿಯಲಿಲ್ಲ.ಕಾರಣ ಕೊರೊನಾ ವೈರಸ್​ ಸೋಂಕು.
ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಚೀನಾದಿಂದ ಬರುವವರ ಬಗ್ಗೆ ನಿಗಾ ವಹಿಸಲಾಗಿದ್ದು,ಸರ್ಕಾರದ ಆರೋಗ್ಯ ಮಾರ್ಗ ಸೂಚಿ ಅನ್ವಯ ಚೀನಾದಿಂದ ಬರುವವರ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಯಿತಿ ನೀಡಬೇಕು ಎಂಬ ಆದೇಶವಿತ್ತು. ಅವರು ಆರೋಗ್ಯ ಅಧಿಕಾರಿಗಳನ್ನು ಕಂಡು ಆರೋಗ್ಯ ತಪಾಸಣೆ ಮಾಡಿಸಬೇಕಾಗಿತ್ತು. ಅಲ್ಲದೆ, ಮುಂದಿನ 28 ದಿನಗಳ ಕಾಲ ಮನೆಯಲ್ಲೇ ದಿಗ್ಬಂಧನಕ್ಕೆ ಒಳಗಾಗಬೇಕಾಗಿತ್ತು.
ಜನವರಿ 19ರಂದು ಬಂದ ಈ ಯುವಕನ ಮದುವೆ ಫೆಬ್ರವರಿ 3ಕ್ಕೆ ಇರುವ ವಿಚಾರ ಬಹಿರಂಗವಾಗುತ್ತಲೇ, ಆರೋಗ್ಯ ಅಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿ ಮದುವೆ ನಡೆಸದಂತೆ ತಡೆಹಿಡಿಯಲು ಹೇಳಿದರು. ಇದರಂತೆ, ಆ ಯುವಕನ ಮತ್ತು ಯುವತಿಯ ಮನೆಯವರನ್ನು ಭೇಟಿ ಮಾಡಿದ ಅಧಿಕಾರಿಗಳು ಮದುವೆ ಆಚರಣೆ ತಡೆಯುವಲ್ಲಿ ಸಫಲರಾದರು.
ಆದರೆ, ಫೆಬ್ರವರಿ 3ನೇ ತಾರೀಕಿನಂದು ನಿಶ್ಚಿಯವಾಗಿದ್ದ ಪ್ರಕಾರ ಮದುವೆಯ ಬದಲು ರಿಸೆಪ್ಶನ್ ನಡೆಯಿತು. ಅಲ್ಲಿ ವರನ ತಾಯಿ ವೇದಿಕೆಗೆ ಆಗಮಿಸಿ ವಧುವಿಗೆ ಹೂಹಾರ ಹಾಕಿ ಅತಿಥಿಗಳ ಎದುರು ನಿಲ್ಲಿಸಿದ ಬಳಿಕ ರಿಸೆಪ್ಶನ್​ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವರ ಇರಲಿಲ್ಲ.
ಕೇರಳದಲ್ಲಿ ಇದುವರೆಗೆ ತ್ರಿಶ್ಶೂರು, ಆಲಪ್ಪುಳ, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಂದು ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ಬಿಟ್ಟರೆ ಹೊಸ ಪ್ರಕರಣಗಳು ದಾಖಲಾಗಿಲ್ಲ. ಕನಿಷ್ಠ 2,321 ಜನ ಮನೆಯಲ್ಲೇ ತೀವ್ರ ನಿಗಾದಲ್ಲಿದ್ದಾರೆ. ಇನ್ನೂ 100 ಜನ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್​ಗಳಲ್ಲಿ ವಿಶೇಷ ನಿಗಾದಲ್ಲಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + six =
Remember me
