ಕೊಟ್ಟಾಯಂ:ಮದ್ವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ತರ ಘಟ್ಟ. ನೂರಾರು ಕನಸಿನ ಬುತ್ತಿಯೊಂದಿಗೆ ವಧು-ವರರು ದಾಂಪತ್ಯಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದ್ವೆ ಹೀಗೆ ನಡೆಯಬೇಕು ಎಂದು ಯೋಜನೆ ರೂಪಿಸಿರುತ್ತಾರೆ. ಆದರೆ, ನಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುವಂತೆ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆದುಬಿಡುತ್ತವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ ಕೇರಳದಲ್ಲಿ ಒಂದು ಘಟನೆ ನಡೆದಿದೆ.
ನಾಳೆ ಮದುವೆ ನಡೆಯಬೇಕು ಅನ್ನುವಷ್ಟರಲ್ಲಿ ಮದುವೆಯ ಹಿಂದಿನ ದಿನದಂದು ವರ ನಾಪತ್ತೆಯಾದ ಸಂಗತಿ ವಧುವಿನ ಕುಟುಂಬವನ್ನು ಆಘಾತಕ್ಕೆ ದೂಡಿತು. ಆದರೆ, ನಂತರ ನಡೆದಿದ್ದು ಮದುವೆಗೆ ಬಂದಿದ್ದ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು.
ವರ ನಾಪತ್ತೆಯಾಗಿದ್ದ ಮರು ದಿನವೇ ಅದೇ ಮುಹೂರ್ತದಲ್ಲಿ ಮದುವೆಗೆ ಬಂದಿದ್ದ ಯುವ ಅತಿಥಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತನನ್ನು ಮದುವೆಯಾಗುವ ಮೂಲಕ ವರನ ಕುಟುಂಬಕ್ಕೆ ವಧುವಿನ ಕುಟುಂಬ ಶಾಕ್​ ನೀಡಿದೆ. ಈ ಘಟನೆ ಕೇರಳದ ಕೊಟ್ಟಾಯಂ ಥಲಯೋಲಪರಂಬುವಿನಲ್ಲಿ ನಡೆದಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತ ಸುಮೀರ್ ಅವರು ಕೊಟ್ಟೂರಿನ ಫಾತಿಮಾ ಶಹನಾಝ್ ಅವರನ್ನು ವಿವಾಹವಾದರು. ಮದುವೆಯ ಎಲ್ಲ ಸಿದ್ಧತೆಗಳು ಮುಗಿದಾಗ ಥಲಯೋಲಪರಂಬುವಿನ ವರ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿತು. ಅದರ ಬೆನ್ನಲ್ಲೇ ಮದುವೆಗೆ ಬಂದಿದ್ದ ಸುಮೀರ್, ವಧುವನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಾನೆ. ಬಳಿಕ ಎರಡು ಮನೆಯವರು ಒಪ್ಪಿ ನದ್ವತ್ ನಗರದ ಕೆಕೆಪಿಜೆ ಸಭಾಂಗಣದಲ್ಲಿ ಮೌಲ್ವಿ ನೇತೃತ್ವದಲ್ಲಿ ವಿವಾಹ ನೆರವೇರಿಸಿದರು.(ಏಜೆನ್ಸೀಸ್​)
ರಾತ್ರಿ ವೇಳೆ ಯುವತಿ ಬೆತ್ತಲೆಯಾಗಿ ಓಡಾಡುವ ಪ್ರಕರಣ: ಪೊಲೀಸ್​ ತನಿಖೆಯಲ್ಲಿ ಅಸಲಿ ಸಂಗತಿ ಬಯಲು

ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿಗೆ ಕಾಂಗ್ರೆಸ್​ನಿಂದ ಪ್ರಶ್ನೆಗಳ ಸುರಿಮಳೆ: ಇದು ಮೋದಿ ಗ್ಯಾರೆಂಟಿ ಎಂದು ವ್ಯಂಗ್ಯ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಮರಾಠಿ ಭಾಷಿಕರಿಗೆ ಒಲಿದ ಮೇಯರ್ – ಉಪಮೇಯರ್ ಹುದ್ದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − four =
Remember me
