ಜೈಪುರ:ಇನ್ನೇನು ಮದುವೆಯಾಗಿ ವಧುವನ್ನು ಮನೆಗೆ ಕರೆದುಕೊಂಡು ಹೋಗಬೇಕಿತ್ತು.ಅಷ್ಟರಲ್ಲೇ ಈ ವ್ಯಕ್ತಿಯ ಬಾಳಲ್ಲಿ ಆಗಿದ್ದು ಮಾತ್ರ ವಿಧಿಯಾಟ.
ಹೌದು… ಒಂದು ರಾತ್ರಿ ಕಳೆದಿದ್ದರೆ ಈ ವ್ಯಕ್ತಿ ಮದುವೆಯಾಗುತ್ತಿ ಎಲ್ಲರಂತೆ ತನ್ನ ಮಡದಿಯೊಂದಿಗೆ ಸಂತೋಷವಾಗಿರುತ್ತಿದ್ದ. ಈತ ಮಾಡಿದ ತಪ್ಪಿನಿಂದಾಗಿ ಈಕೆಯನ್ನು ವರಿಸಬೇಕಿದ ವಧು ಬೇರೆಯವರ ಕೈ ಹಿಡಿದಿದ್ದಾಳೆ.
ಈ ಘಟನೆ ನಡೆದಿರುವುದು ರಾಜಸ್ಥಾನದ ಚುರು ಜಿಲ್ಲೆಯಲ್ಲಿ. ಮೇ 15 ರಂದು ಮದುವೆಯ ಕಾರ್ಯಗಳು ನಡೆಯುತ್ತಿದ್ದವು. ಇತ್ತ ನೆಂಟರಿಷ್ಟರು ಎಲ್ಲರೂ ಮಂಟಪದಲ್ಲಿ ನೆರೆದಿದ್ದರು.
ವರನ ಕಡೆಯವರು ಎಲ್ಲರೂ ನೆರೆದಿದ್ದರು. ಮದುವೆ ಎಂದರೆ ವರನ ಸ್ನೇಹಿತರು ಬರುವುದು ಕಡ್ಡಾಯವಾಗಿರುತ್ತೆ. ಇಲ್ಲೂ ಹಾಗೆ ವರನ ಸ್ನೇಹಿತರು ಮದುವೆ ಮಂಟಪಕ್ಕೆ ಬಂದಿದ್ದಾರೆ. ತನ್ನ ಸ್ನೇಹಿತರು ಬಂದಿದ್ದಾರೆ ಎಂಬ ಖುಷಿಗೆ ವರ ಮದುವೆಯನ್ನೇ ಮರೆತುಬಿಡುವಷ್ಟು ಮಗ್ನನಾಗಿ ಡಿಜೆ ಹಾಡಿಗೆ ಸಖತ್​ ಡ್ಯಾನ್ಸ್​ ಮಾಡಿದ್ದಾನೆ.
ಅರೆ.. ಏನಿದು ಡ್ಯಾನ್ಸ್​ ಮಾಡಿದ್ದೇ ತಪ್ಪಾಯಿತಾ ಎಂಬ ಪ್ರಶ್ನೆ ಮೂಡುವುದು ಸಹಜ.. ಹೌದು ಇಲ್ಲಿ ಈತನ ಡ್ಯಾನ್ಸ್ ಮಾಡಿರುವುದೇ ವಧುವಿನ ಕಡೆಯವರಿಗೆ ಕೋಪ ಬರಲು ಕಾರಣವಾಗಿದೆ. ಈತ ಡ್ಯಾನ್ಸ್​ ಮಾಡಿ ಸುಮ್ಮನೆ ಮಂಟಪಕ್ಕೆ ಬಂದಿದ್ದರೆ ಏನೂ ಆಗುತ್ತಿರಲಿಲ್ಲ. ರಾತ್ರಿಯಿಡೀ ಡ್ಯಾನ್ಸ್​ ಮಾಡುತ್ತಾ ಕಾಲ ಕಳೆದಿದ್ದರಿಂದ ಇತ್ತ ವಧು ಕಾದು ಕಾದು ಬೇರೆಯವನನ್ನು ಇದೇ ಮಂಟಪದಲ್ಲಿ ವರಿಸಿದ್ದಾಳೆ.
ಜೀವನದಲ್ಲಿ ಅತಿ ಮುಖ್ಯವಾದ ಮದುವೆ ದಿನದಂದೇ ಈ ರೀತಿ ಮಾಡಿರುವ ಈತ, ನಾಳೆ ಮದುವೆಯಾಗಿ ಇನ್ನಷ್ಟು ಬೇಜವಾಬ್ದಾರಿಯಾಗಿ ವರ್ತಿಸಬಹುದು ಎಂದು ಕೋಪಗೊಂಡ ವಧುವಿನ ಕಡೆಯವರು,ಅಲ್ಲೇ ಮಂಟಪದಲ್ಲೇ ಮತ್ತೊಬ್ಬನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಇದರಿಂದ ತೀವ್ರ ನಿರಾಸೆಯಾದ ವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.(ಏಜೆನ್ಸೀಸ್​)
ದುಬಾರಿ ಉಡುಗೊರೆ ಕೊಟ್ಟ ಮೈಸೂರಿನ ಹೊಸ ಬಾಯ್​ಫ್ರೆಂಡ್​​ ಪರಿಚಯಿಸಿದ ರಾಖಿ ಸಾವಂತ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
