ಉತ್ತರಪ್ರದೇಶ:ಯೋಗಿ ಆದಿತ್ಯನಾಥ್ ಅಂದಾಗ ನೆನಪಾಗುವುದು ಬುಲ್ಡೋಜರ್! ಯಾಕಂದ್ರೆ ಉತ್ತರಪ್ರದೇಶದಲ್ಲಿ ಯಾರು ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೋ, ಅವರ ಮನೆಗೆ ಬುಲ್ಡೋಜರ್ ಕಳುಹಿಸಿ ಮನೆಯನ್ನೇ ನೆಲಸಮಗೊಳಿಸುತ್ತಿದ್ದರು. ಯೋಗಿ ಆದಿತ್ಯನಾಥ್​​ ಅವರ ಈ ನಡೆ ದೇಶದಾದ್ಯಂತ ಸದ್ದು ಮಾಡಿತ್ತು.
ಇದೀಗ ಉತ್ತರಪ್ರದೇಶದಲ್ಲಿ ಮದುವೆ ಗಂಡಿಗೆ ಬುಲ್ಡೋಜರ್ ಉಡುಗೊರೆ ಸಿಕ್ಕಿದೆ. ಅರ್ರೇ… ವರನಿಗೆ ಕಾರು, ಮನೆ ಗಿಫ್ಟ್ ನೀಡಿರುವುದು ಕೇಳಿದ್ದೇವೆ. ಇದ್ಯಾಕೆ ಬುಲ್ಡೋಜರ್ ಗಿಫ್ಟ್​ ನೀಡಿದ್ರು ಅಂತ ಯೋಚಿಸುತ್ತಿದ್ದರೆ ಉತ್ತರ, ಮದುವೆ ಹುಡುಗನ ಹೆಸರು ಯೋಗೇಂದ್ರ. ಈತನನ್ನು ಎಲ್ಲರೂ ಕರೆಯುವುದು ಯೋಗಿ ಎಂದು. ಇದೀಗ ತನ್ನ ಹೆಸೆರು ಯೋಗಿ ಎಂದಿರುವುದರಿಂದ ತನ್ನ ಮದುವೆ ದಿನದಂದು ಬುಲ್ಡೋಜರ್ ಉಡುಗೊರೆಯಾಗಿ ಪಡೆದಿದ್ದಾನೆ.
UP के हमीरपुर में सेना के जवान को दहेज में मिला 'बुलडोजर', दूल्हे को दहेज में 'बुलडोजर' मिलने से बाराती हुए दंग, Video वायरलpic.twitter.com/sI3hhCCEkY— Priya singh (@priyarajputlive)December 17, 2022
UP के हमीरपुर में सेना के जवान को दहेज में मिला 'बुलडोजर', दूल्हे को दहेज में 'बुलडोजर' मिलने से बाराती हुए दंग, Video वायरलpic.twitter.com/sI3hhCCEkY
ಡಿಸೆಂಬರ್ 15ರಂದು ಹಮೀರ್​​ಪುರ್ ಜಿಲ್ಲೆಯಲ್ಲಿ ಯೋಗಿ ಹಾಗೂ ನೇಹಾ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವಧುವಿನ ತಂದೆ ನಿವೃತ್ತ ಸೈನಿಕ ಪರಶುರಾಮ್ ತಮ್ಮ ಅಳಿಯನಿಗಾಗಿ ಬುಲ್ಡೋಜರ್​ನ್ನು ಮದುವೆ ಮಂಟಪಕ್ಕೆ ತಂದು ಉಡುಗೊರೆ ನೀಡಿದ್ದಾರೆ.
ಇದೀಗ ಬುಲ್ಡೋಜರನ್ನು ಉಡುಗೊರೆಯಾಗಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ಅಳಿಯನಿಗೆ ವರದಕ್ಷಿಣೆಯಾಗಿ ಮಾವ ಬುಲ್ಡೋಜರ್ ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವರ ಯೋಗಿ, ನನ್ನ ಪತ್ನಿ ಯುಪಿಎಸ್​ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾಳೆ. ಅವಳ ಓದಿಗೆ ಸಹಾಯವಾಗುವಂತಹ ಪುಸ್ತಕ ಖರೀದಿಸಲು ಬುಲ್ಡೋಜರ್ ಕೆಲಸದಿಂದ ಬರುವ ಹಣ ಖರ್ಚು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + ten =
Remember me
