ಬೆಂಗಳೂರು:ಕರೊನಾದಿಂದಾಗಿ ಜನ ಜೀವನ ಏರುಪೇರಾಗಿದೆ. ಈ ಸಮಯದಲ್ಲಿ ಮದುವೆ ನಿಶ್ಚಯಿಸಿಕೊಂಡವರಂತೂ ನೂರು ಬಾರಿ ಯೋಚಿಸಿ ಆಮಂತ್ರಣ ನೀಡುವಂತಾಗಿದೆ. ಮದುವೆಗೆ ಇಷ್ಟೇ ಜನ ಬರಬೇಕೆಂಬ ನಿಯಮವಿರುವದರಿಂದಾಗಿ ಆಡಂಭರವಿಲ್ಲದೆ, ಕೇವಲ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗುವಂತಾಗಿದೆ. ಅದೇ ರೀತಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಮದುವೆಯಲ್ಲಿ ತಾನೇ ಓಲಗದವರೊಂದಿಗೆ ಸೇರಿ ಬ್ಯಾಂಡ್​ ಬಾರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮದುಮಗ ಕೊರಳಿಗೆ ಬ್ಯಾಂಡ್​ ಹಾಕಿಕೊಂಡು ಬಾರಿಸುತ್ತಿದ್ದಾನೆ. ವಧು ಅಲ್ಲೇ ವರನ ಪಕ್ಕದಲ್ಲೇ ನಿಂತು ನೋಡುತ್ತಿದ್ದಾಳೆ. ಇದರ 30 ಸೆಕೆಂಡಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ವೈರಲ್​ ಆಗಿದೆ. ಈ ವರನಿಗೆ ಅನೇಕರು ಆತ್ಮನಿರ್ಭರ ವರ ಎಂದು ಕರೆದಿದ್ದರೆ ಇನ್ನು ಕೆಲವರು ಲಾಕ್​ಡೌನ್​ ಸಮಯದಲ್ಲಿ ಮದುವೆಯಾದರೆ ಹೀಗೇ ಆಗುವುದು ಎಂದು ಕಾಲೆಳೆದಿದ್ದಾರೆ.
ಈಗ ಮದುವೆಯಾದರೆ ನಿಮಗೂ ಇದೇ ಸ್ಥಿತಿ..!ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿದೆ. ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಮದುವೆಯಾಗುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಸಮಯದಲ್ಲಿ ನೀವೇನಾದರೂ ಮದುವೆಯಾದರೆ ಈ ವರನಂತೆ ನೀವೇ ಓಲಗದವರೊಂದಿಗೆ ಸೇರಿಕೊಂಡು ಬ್ಯಾಂಡ್​ ಬಾರಿಸಬೇಕಾಗಬಹುದು.pic.twitter.com/IQULkaBHLl
— Vijayavani (@VVani4U)May 13, 2021

ವಿಡಿಯೋದಲ್ಲಿರುವ ಜೋಡಿ ಎಲ್ಲಿಯದು, ಅವರ ಹೆಸರೇನು ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ಈ ಸಮಯಕ್ಕೆ ತಕ್ಕಂತ ವಿಡಿಯೋ ಇದಾಗಿರುವುದರಿಂದಾಗಿ ಹೆಚ್ಚಿನ ಜನರು ಆಸಕ್ತಿಯಿಂದ ವಿಡಿಯೋವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್​)
ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
