ಉತ್ತರಪ್ರದೇಶ:ಮದುವೆಯ ವೇದಿಕೆಯಲ್ಲಿ ವರನೊಬ್ಬ ವರದಕ್ಷಿಣೆ ನೀಡದ ವಧುವನ್ನು ತಳ್ಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಉತ್ತರ ಪ್ರದೇಶದ ಕನುಜ್ ಜಿಲ್ಲೆಯಲ್ಲಿ ನಡೆದಿದೆ.
ವರದಕ್ಷಿಣೆಯಲ್ಲಿ ಏರ್ ಕಂಡಿಷನರ್ ನೀಡಲು ವಧುವಿನ ಮನೆಯವರು ನಿರಾಕರಿಸಿದ್ದಾರೆ ಎಂದು ವರನಿಗೆ ತಿಳಿಯುವವರೆಗೂ ಮದುವೆಯು ಸರಾಗವಾಗಿ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ವರನು ಕೋಪದ ಭರದಲ್ಲಿ ಹಾರ ಬದಲಿಸುವ ವೇಳೆ ವಧುವನ್ನು ವೇದಿಕೆಯಿಂದ ತಳ್ಳಿದ್ದಾನೆ. ವೇದಿಕೆಯಿಂದ ಬಿದ್ದ ವಧು ಪ್ರಜ್ಞೆ ತಪ್ಪಿದಳು. ಸ್ವಲ್ಪ ಸಮಯದ ನಂತರ ಘಟನೆಯ ಬಗ್ಗೆ ವಧು-ವರನ ಕುಟುಂಬಸ್ಥರ ನಡುವೆ ಗಲಾಟೆಯಾಗಿದೆ. ಎರಡೂ ಕಡೆಯ ಅತಿಥಿಗಳು ಗಾಯಗೊಂಡಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು, ಆದರೆ ವಧುವಿನ ಕಡೆಯವರ ಮನವೊಲಿಸಲು ಸಾಧ್ಯವಾಗಲಿಲ್ಲ. ನಂತರ ಎರಡೂ ಕಡೆಯವರು ಪಂಚಾಯಿತಿಗೆ ತೆರಳಿ ಮದುವೆಗೆ ಮುರಿದುಕೊಳ್ಳಲು ತೀರ್ಮಾನಿಸಲಾಯಿತು.
“ಈ ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದೆ. ಎರಡೂ ಕುಟುಂಬಗಳು ಪರಸ್ಪರ ಒಪ್ಪಂದಕ್ಕೆ ಬಂದು ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಕಲಿ ಮದ್ಯ ಸೇವಿಸಿ 13 ಮಂದಿ ಮೃತ್ಯು; 9 ಜನ ಅರೆಸ್ಟ್​​, ನಾಲ್ವರು ಪೊಲೀಸರ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
