ಲಖನೌ:ಮದುವೆಯಾಗಿ ಹೆಂಡತಿಯನ್ನು ಮನೆ ತುಂಬಿಸಿಕೊಳ್ಳಲು ಕರೆದುಕೊಂಡು ಹೋಗಬೇಕು ಎನ್ನುವ ಸಂತಸದಲ್ಲಿದ್ದ ವರನಿಗೆ ಪೊಲೀಸರು ಮದುವೆ ಮಂಟಪದಲ್ಲೇ ಶಾಕ್​ ನೀಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿಟ್​ನಲ್ಲಿ ನಡೆದಿದೆ.
ಆ ವ್ಯಕ್ತಿ ಮದುವೆಗೆಂದು ಮಂಟಪದಲ್ಲಿ ಕುಳಿತಿದ್ದ. ಆ ವೇಳೆಗೆ ಅಲ್ಲಿಗೆ ಒಂದು ಹೆಂಗಸು ಪೊಲೀಸರೊಂದಿಗೆ ಬಂದಿದೆ. ಈಗ ಮದುವೆಯಾಗುತ್ತಿರುವ ವರ ನನ್ನ ಗಂಡ. ನಮಗೆ 2012ರಲ್ಲೇ ಮದುವೆಯಾಗಿದೆ. ಆದರೆ ಮದುವೆಯಾದ ಮೇಲೆ ನಮ್ಮಿಬ್ಬರ ನಡುವೆ ಜಗಳವಾಗುತ್ತಿರುತ್ತಿತ್ತು. ಅತ್ತೆ ಮಾವ ಕೂಡ ವರದಕ್ಷಿಣೆಗಾಗಿ ಕಾಡಿಸಲಾರಂಭಿಸಿದ್ದರು. ಅದಕ್ಕಾಗಿ ನಾನು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ನಡುವೆ ಅವರು ಎರಡನೇ ಮದುವೆಯಾಗುತ್ತಿದ್ದಾರೆ ಎಂದು ಆಕೆ ಪೊಲೀಸರಿಗೆ ದೂರು ನೀಡಿ ಕರೆದುಕೊಂಡು ಬಂದಿದ್ದಾಳೆ.
ಸ್ಥಳಕ್ಕೆ ಬಂದ ಪೊಲೀಸರು ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವ ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್)
ಎರಡು ಹೈ ಸ್ಪೀಡ್​ ರೈಲುಗಳ ರಭಸಕ್ಕೆ ಕುಸಿದು ಬಿತ್ತು ರೈಲ್ವೆ ನಿಲ್ದಾಣ!

ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 3 =
Remember me
