ಕಾನ್ಪುರ:ಡ್ರೈವಿಂಗ್​ ಗೊತ್ತಿಲ್ಲದಿದ್ದರೂ ವರದಕ್ಷಿಣೆಯಾಗಿ ಕಾರು ಪಡೆದುಕೊಂಡ ವರನೊಬ್ಬ ಟೆಸ್ಟ್​ ಡ್ರೈವ್​ ಮಾಡುವಾಗ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸಂಬಂಧಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ವರನ ಸೋದರತ್ತೆ ದುರಂತ ಸಾವಿಗೀಡಾಗಿದ್ದು, ಇತರೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರಿ ನೌಕರನಾಗಿರುವ 24 ವರ್ಷದ ಅರುಣ್​ ಕುಮಾರ್, ಮದುವೆಗು ಮುನ್ನವೇ ವಧುವಿನ ಕಡೆಯವರಿಂದ ಕಾರನ್ನು ವರದಕ್ಷಿಣೆಯಾಗಿ ಪಡೆದಿದ್ದ. ಆದರೆ, ಅರುಣ್​ಗೆ ಡ್ರೈವಿಂಗ್​ ಗೊತ್ತಿರಲಿಲ್ಲ. ಹೀಗಿದ್ದರೂ ಟೆಸ್ಟ್​ ಡ್ರೈವ್​ ಮಾಡುವುದಾಗಿ ಕಾರನ್ನೇರಿದ್ದ. ಮೊದಲೇ ಡ್ರೈವಿಂಗ್​ ಗೊತ್ತಿಲ್ಲದಿದ್ದರಿಂದ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಸಂಬಂಧಿಕರು ನಿಂತಿದ್ದ ಗುಂಪಿನ ಕಡೆ ನುಗ್ಗಿಸಿದ್ದಾನೆ. ಇದರ ಪರಿಣಾಮ ಅರುಣ್​ ಅವರ ಸೋದರತ್ತೆ ಕಾರಿನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಪುಟ್ಟ ಹುಡುಗಿ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರುಣ್​ ಕುಮಾರ್​ ಅವರ ಮದುವೆ ಕೆಲವೇ ತಿಂಗಳುಗಳ ಹಿಂದೆ ನಿಶ್ಚಯವಾಗಿತ್ತು. ವರನ ಸಂಬಂಧಿಕರು ವರದಕ್ಷಿಣೆಯಾಗಿ ವಧುವಿನ ಕುಟುಂಬದ ಬಳಿ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಿಲಕಂ ಪದ್ಧತಿಯ ಸಮಯದಲ್ಲಿ ವಧುವಿನ ಕುಟುಂಬ ಅರುಣ್​ ಕುಮಾರ್​ಗೆ ಕಾರಿನ ಕೀ ಹಸ್ತಾಂತರ ಮಾಡಿದ್ದರು. ಈ ಸಮಾರಂಭದಲ್ಲಿ ಸಂಬಂಧಿಕರು ಒಂದೆಡೆ ಸೇರಿದ್ದಾಗ, ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಮೃತಳನ್ನು ಸರಳಾ ದೇವಿ (35) ಎಂದು ಗುರುತಿಸಲಾಗಿದೆ. ಅರುಣ್​ ಕುಮಾರ್​ನನ್ನು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಆತನ ವಿರುದ್ಧ ಸಾವಿಗೆ ಕಾರಣವಾದ ಅಜಾಗರೂಕ ಚಾಲನೆ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಇಸ್ರೇಲ್​ ಚುನಾವಣೆ: ಭರ್ಜರಿ ಗೆಲುವು ದಾಖಲಿಸಿದ ಬೆಂಜಮಿನ್ ನೆತನ್ಯಾಹು, ಪ್ರಧಾನಿ ಮೋದಿ ಅಭಿನಂದನೆ

ಚಿತ್ರದುರ್ಗದಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಅನುಮಾನಾಸ್ಪದ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
