ಜೈಪುರ:ಕರೊನಾ ಸೋಂಕಿನ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಇದ್ದು, ಅಗತ್ಯ ಮುನ್ನೆಚ್ಚರಿಕೆಯನ್ನು ಪಾಲಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚರಿಸುತ್ತಲೇ ಬಂದಿವೆ. ಆದರೆ ಜನರ ನಿರ್ಲಕ್ಷ್ಯದಿಂದಾಗಿ ಸಾವಿರಾರು ಜನರು ಪ್ರಾಣ ಬಿಡುವಂತಾಗಿದೆ. ಅದೇ ರೀತಿ ಮುನ್ನೆಚ್ಚರಿಕೆ ಪಾಲಿಸದೆ ಹಸೆಮಣೆ ಏರಿದ ವರನೊಬ್ಬ ಮದುವೆಯಾಗಿ ಒಂಬತ್ತೇ ದಿನಗಳಲ್ಲಿ ಸೋಂಕಿಗೆ ಬಲಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಜಲೋರ್​ನ ಬರತ್​ ನಗರದ ಶೈತಾನ್ ಸಿಂಗ್​ಗೆ ರಾಯ್‌ಪುರಿಯ ನಿವಾಸಿ ಈಶ್ವರಿ ಸಿಂಗ್ ದಿಯೋರಾ ಜತೆ ಏಪ್ರಿಲ್​ 30ಕ್ಕೆ ಮದುವೆ ನಿಶ್ಚಯಿಸಲಾಗಿತ್ತು. ಕರೊನಾ ಹೆಚ್ಚಾದರೂ ಹೆದರದ ಕುಟುಂಬಸ್ಥರು 30ರಂದು ಈ ಜೋಡಿಗೆ ಮದುವೆ ಮಾಡಿದ್ದಾರೆ. ಕರೊನಾ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಮಾಡಿ ಸಂಭ್ರಮದಿಂದ ವಧುವನ್ನು ಮನೆ ತುಂಬಿಸಿಕೊಳ್ಳಲಾಗಿದೆ.
ಮದುವೆಯಾದ ಮಾರನೇ ದಿನವೇ ಶೈತಾನ್​ ಸಿಂಗ್​ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ಜಲೋರ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನ ಶುಗರ್​ ಲೆವೆಲ್​ 600ನ್ನು ದಾಟಿದೆ. ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದಾಗಿ ಆತನನ್ನು ಅಲ್ಲಿಂದ ಕರೆದೊಯ್ದು ಸಿರೋಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅಲ್ಲಿಂದ ಕರೆದೊಯ್ದು ಪಾಲನ್‌ಪುರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಲ್ಲಿಯೂ ಆತನ ಆರೋಗ್ಯ ಸುಧಾರಿಸಿಲ್ಲ. ಸತತ ಒಂಬತ್ತು ದಿನಗಳ ಚಿಕಿತ್ಸೆ ನಂತರ ಮೇ 9ಕ್ಕೆ ಆತ ಕೊನೆಯುಸಿರೆಳೆದಿದ್ದಾನೆ. ಸಂತೋಷದಿಂದ ಗಂಡನ ಮನೆಗೆ ಬಂದಿದ್ದ ಈಶ್ವರಿ ಒಂಬತ್ತೇ ದಿನಗಳಲ್ಲಿ ಗಂಡನನ್ನು ಕಳೆದುಕೊಂಡಿದ್ದಾಳೆ. (ಏಜೆನ್ಸೀಸ್)
ಅಜ್ಜಿಯ ಅಜ್ಜಿಯೂ ಇಲ್ಲಿದ್ದಾರೆ! ಒಂದೇ ಚಿತ್ರದಲ್ಲಿದೆ ಐದು ತಲೆಮಾರು!

ನಾಯಿಯನ್ನು ನಾಯಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದು ಹಲ್ಲೆ ಮಾಡಿದ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 2 =
Remember me
