ಲಖನೌ:ಮದುವೆ ಮಂಟಪದಲ್ಲಿ ವಧುವಿಗೆ ಹಾರ ಬದಲಾಯಿಸುವ ಮುನ್ನ ವರದಕ್ಷಿಣೆ ಬೇಡಿಕೆ ಇಡುವ ಮೂಲಕ ವರನೊಬ್ಬ ಸಮಸ್ಯೆಯ ಸುಳಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ.
ಮಂಟಪದಲ್ಲೇ ವರ, ವರದಕ್ಷಿಣೆ ಬೇಡಿಕೆ ಇಟ್ಟಿದ್ದನ್ನು ಕೇಳಿ ಶಾಕ್​ ಆದ ವಧುವಿನ ಕಡೆಯವರು, ತೀವ್ರ ಆಕ್ರೋಶ ವ್ಯಕ್ತಪಡಿಸಿ, ವರ ಮತ್ತು ಆತನ ಸಂಬಂಧಿಕರನ್ನು ಒತ್ತೆಯಾಳಾಗಿರಿಸಿಕೊಂಡರು. ವರನನ್ನು ಮರಕ್ಕೆ ಕಟ್ಟಿಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದೆ.
ವರನನ್ನು ಅಮರಜಿತ್​ ವರ್ಮ ಎಂದು ಗುರುತಿಸಲಾಗಿದೆ. ಈತ ಜೌನ್​ಪುರದ ಸಕ್ರಾ ಗ್ರಾಮದ ನಿವಾಸಿ. ವರನ ಕಡೆಯವರು ಪಾನಮತ್ತ ಸ್ಥಿತಿಯಲ್ಲಿದ್ದರು ಮತ್ತು ವಧುವಿನ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿಬಂದಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಆಕ್ರೋಶಗೊಂಡ ವಧುವಿನ ಕುಟುಂಬ ಮರಕ್ಕೆ ಕಟ್ಟಿರುವ ವರನನ್ನು ನಿಂದಿಸುತ್ತಿರುವ ದೃಶ್ಯವಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಧು-ವರನ ಕಡೆಯವರನ್ನು ಪೊಲೀಸ್​ ಠಾಣೆಗೆ ಕರೆದೊಯ್ದು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಇಬ್ಬರ ನಡುವೆ ಸಂಧಾನ ಆಗಲೇ ಇಲ್ಲ.
प्रतापगढ की तस्वीरें देखिए
दूल्हे ने किया शादी से इंकार ,दूल्हे को बंधक बनाकर दी गई तालिबानी सज़ा#pratapgarhpic.twitter.com/OtqTdzNj5A
— Rahul Sisodia (@Sisodia19Rahul)June 15, 2023

ಸದ್ಯ ಮದುವೆ ಮುಂದೂಡಲಾಗಿದ್ದು, ಇಬ್ಬರ ನಡುವೆ ಮಾತುಕತೆ ಮುಗಿದ ಬಳಿಕ ಮತ್ತೆ ಮದುವೆ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಚಲಿಸುವ ರೈಲಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ

ಈ ಟಿಪ್ಸ್​ ಪಾಲಿಸಿದರೆ ತಾಮ್ರದ ಪಾತ್ರೆಗಳನ್ನು ಫಳ ಫಳ ಹೊಳೆಯುವಂತೆ ಮಾಡೋದು ಎಷ್ಟು ಸುಲಭ ನೋಡಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 14 =
Remember me
