ಭೋಪಾಲ್​:ಕೆಲವೊಮ್ಮೆ ಮದುವೆ ವೇಳೆ ವರದಕ್ಷಿಣೆ, ವಧು-ವರರ ಪ್ರೇಮಪ್ರಕರಣ ಇತ್ಯಾದಿ ಕಾರಣಕ್ಕೆ ಗಲಾಟೆಗಳಾಗುತ್ತವೆ. ಆದರೆ ಇಲ್ಲೊಂದು ಕಡೆ ವರ ಧರಿಸಿದ್ದ ದಿರಿಸಿನ ವಿಚಾರವಾಗಿ ಗಲಾಟೆಯಾಗಿದ್ದು, ಮದುವೆ ನಡೆಯುತ್ತಿದ್ದ ಸ್ಥಳವೇ ರಣಾಂಗಣವಾಗಿ ಮಾರ್ಪಟ್ಟಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಾಂಗ್​ಬೇಡ ಎಂಬ ಗ್ರಾಮದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ನಡೆದಿದೆ. ಬುಡಕಟ್ಟು ಸಮುದಾಯದ ಈ ಮದುವೆಯಲ್ಲಿ ವರ ಧಾರ್​ ನಿವಾಸಿ ಸುಂದರ್​ಲಾಲ್ ಎಂಬಾತ ಸಾಂಪ್ರದಾಯಿಕ ಧೋತಿ ಕುರ್ತಾ ಬದಲು ಶೇರ್ವಾಣಿ ತೊಟ್ಟು ಆಗಮಿಸಿದ್ದ.
ಸಂಪ್ರದಾಯದ ಪ್ರಕಾರ ಧೋತಿ ಕುರ್ತಾ ಧರಿಸುವ ಬದಲು ಶೇರ್ವಾಣಿ ತೊಟ್ಟಿದ್ದಕ್ಕೆ ವಧುವಿನ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕಲ್ಲುತೂರಾಟದೊಂದಿಗೆ ಹೊಯ್​ಕೈ ಸಂಭವಿಸಿದೆ. ಶನಿವಾರ ಮದುವೆ ಸಂದರ್ಭ ಈ ಗಲಾಟೆ ನಡೆದಿದ್ದು, ಎರಡೂ ಕಡೆಯವರು ಧಮ್ನೊಡ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಂದಹಾಗೆ ವಧುವಿನ ಮನೆಯವರಿಂದ ಈ ವಿಚಾರವಾಗಿ ಯಾವುದೇ ತಕರಾರು ಇರಲಿಲ್ಲ. ಅದು ಆ ಕಡೆಯವರ ಸಂಬಂಧಿಕರಿಂದ ಗಲಾಟೆ ಆಗಿದೆ ಎಂದು ವರ ಸುಂದರ್​ಲಾಲ್​ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ಕೊನೆಗೂ ಮದುವೆ ನೆರವೇರಿದೆ. ಆದರೆ ಇಂದು ಎರಡೂ ಕಡೆಯವರ ಮೇಲೆ ಕೇಸು ದಾಖಲಾಗಿದೆ.
ಒಂದು ಮುತ್ತಿನ ಕಥೆ: ಮದುವೆಯಂತೂ ತ್ವರಿತ, ಅದು ಬಿಂದುವಲ್ಲ ಹರಿತ!; ಖ್ಯಾತ ನಟನ ಸ್ಪಷ್ಟೀಕರಣ..
ಯುವನಾಯಕರನ್ನು ಸೆಳೆಯಲು ಕಾಂಗ್ರೆಸ್​ಗೆ ಹೊಸ ಶಿಫಾರಸು; ಏನದು ಹೊಸ ತಂತ್ರ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 11 =
Remember me
