ನವದೆಹಲಿ:ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರು. ಭಾರತದ ಎಲ್ಲ ಭಾಗಗಳಲ್ಲಿ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಯ ಸಂಪ್ರದಾಯಗಳಿವೆ. ಅದರಲ್ಲೂ ಮದುವೆ ಅಂತಾ ಬಂದಾಗ ಒಂದೊಂದು ಕಡೆಯಲ್ಲೂ ಒಂದೊಂದು ರೀತಿಯ ಆಚರಣೆ ಇರುತ್ತದೆ. ಕೆಲವೊಂದು ಸರಳ ಎನಿಸಿದರೆ, ಇನ್ನೊಂದಿಷ್ಟು ವಿಚಿತ್ರ ಎನಿಸದೇ ಇರದು.
ಇದೀಗ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಅದಕ್ಕೆ ಕಾರಣ ವಿಚಿತ್ರ ಆಚರಣೆ. ಮದ್ಯ ಸೇವನೆ, ಧೂಮಪಾನ ಚಟ ಇರುವವರಿಗೆ ಹೆಣ್ಣನ್ನು ಕೊಡುವುದಿಲ್ಲ ಎಂಬ ಮಾತುಗಳನ್ನು ಕೇಳಿದ್ದೇವೆ. ಆದರೆ, ಇಲ್ಲಿ ಅತ್ತೆ-ಮಾವನೇ ವರನ ಬಾಯಿಗೆ ಸಿಗರೇಟ್​ ಇಟ್ಟು ಬೆಂಕಿ ಹಚ್ಚುವ ಮೂಲಕ ಅದ್ಧೂರಿ ಸ್ವಾಗತವನ್ನು ಕೋರಿದ್ದಾರೆ. ಅಲ್ಲದೆ, ಪಾನ್​ ಮಸಾಲವನ್ನೂ ನೀಡಿದ್ದಾರೆ.
ಇಂತಹ ಸಂಪ್ರದಾಯ ಈ ಹಿಂದೆ ಚಾಲ್ತಿಯಲ್ಲಿತ್ತು ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇಂತಹ ಆಚರಣೆ ಈ ಕೂಡಲೇ ನಿಲ್ಲಿಸಿ ಎಂದಿದ್ದಾರೆ.
ಇನ್​ಸ್ಟಾಗ್ರಾಂ ಪೇಜ್​ ಒಂದರಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ವಿಡಿಯೋದಲ್ಲಿ ವರ ಸೋಫಾ ಮೇಲೆ ಕುಳಿತಿರುತ್ತಾನೆ. ಈ ವೇಳೆ ಅತ್ತೆ ವರನ ಬಾಯಿಗೆ ಸಿಗರೇಟ್​​​ ಇಡುತ್ತಾರೆ. ಬಳಿಕ ಮಾವ ಬೆಂಕಿ ಕಡ್ಡಿಯಿಂದ ಸಿಗರೇಟ್​ ಹಚ್ಚತ್ತಾರೆ. ಆದರೆ, ವರ ಸಿಗರೇಟ್​ ಸೇದುವುದಿಲ್ಲ. ಬದಲಾಗಿ ಅದನ್ನು ವಾಪಸ್​ ತೆಗೆದು ಮಾವನ ಕೈಯಲ್ಲೇ ಕೊಡುತ್ತಾನೆ. ಬಳಿಕ ಸಂಪ್ರದಾಯದಂತೆ ವರನು ಇಬ್ಬರಿಗೂ ಸ್ವಲ್ಪ ಹಣವನ್ನು ಹಸ್ತಾಂತರಿಸುತ್ತಾನೆ.
ಇದೀಗ ಈ ವೀಡಿಯೋ ವೈರಲ್ ಆಗಿದ್ದು, ಸಂಪ್ರದಾಯದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಘಟನೆಯ ನಿಖರವಾದ ಸ್ಥಳವನ್ನು ತಕ್ಷಣವೇ ಕಂಡುಹಿಡಿಯಲು ಆಗದಿದ್ದರೂ, ಈ ಆಚರಣೆಯು ಗುಜರಾತ್‌ನಲ್ಲಿ ನಡೆದಿದೆ ಎಂದು ಹಲವರು ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಮೆಂಟ್​ ಮಾಡಿ ತಿಳಿಸಿ.(ಏಜೆನ್ಸೀಸ್​)

A post shared by Joohi K Patel (@joohiie)

ಲಿವ್ ಇನ್ ಸಂಗಾತಿ ಹತ್ಯೆಗೈದು ಶವವನ್ನು ಫ್ರಿಜ್​ನಲ್ಲಿಟ್ಟ ಕೇಸ್​: ಕೊಲೆಗೂ ಮುನ್ನ ಕುಣಿದು ಕುಪ್ಪಳಿಸಿದ್ದ ಆರೋಪಿ

ಎಲಾನ್​ ಮಸ್ಕ್ ನಾಯಿ ಫ್ಲೋಕಿ ಟ್ವಿಟರ್ ಸಿಇಒ! ಪರೋಕ್ಷವಾಗಿ ಪರಾಗ್​ಗೆ ಟಾಂಗ್​

ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ತೈಲ ದರ ಇಳಿಕೆಗೆ ಸರ್ಕಾರದ ಚಿಂತನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 4 =
Remember me
