ನವದೆಹಲಿ:ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ 1.41 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದ್ದು, ಜಿಎಸ್​ಟಿ ಜಾರಿಯಾದಾಗಿನಿಂದ ಇಷ್ಟು ದೊಡ್ಡ ಮೊತ್ತದ ಸಂಗ್ರಹ ಇದೇ ಮೊದಲ ಬಾರಿಗೆ ಆಗಿದೆ. ಕೇಂದ್ರೀಯ ಜಿಎಸ್​ಟಿ 27,837 ಲಕ್ಷ ಕೋಟಿ ರೂಪಾಯಿ, ರಾಜ್ಯಗಳ ಜಿಎಸ್​ಟಿ 35,621 ಕೋಟಿ ರೂಪಾಯಿ ಮತ್ತು ಏಕೀಕೃತ ಜಿಎಸ್​ಟಿ 68,481 ಕೋಟಿ ರೂಪಾಯಿ (ಆಮದು ಶುಲ್ಕ 29,599 ಕೋಟಿ ರೂಪಾಯಿ ಸೇರಿ) 9,445 ಕೋಟಿ ರೂಪಾಯಿ (981 ಕೋಟಿ ರೂಪಾಯಿ ಆಮದು ಸೆಸ್ ಸೇರಿ) ಒಟ್ಟಾರೆ 1,41,384 ಕೋಟಿ ರೂಪಾಯಿ ಸರ್ಕಾರಗಳ ಬೊಕ್ಕಸ ಸೇರಿದೆ.
ಮಾರ್ಚ್​ನಲ್ಲಿ ಜಿಎಸ್​ಟಿ ಸಂಗ್ರಹಕ್ಕೆ (1.23 ಲಕ್ಷ ಕೋಟಿ ರೂಪಾಯಿ) ಹೋಲಿಸಿದರೆ ಏಪ್ರಿಲ್​ನ ಆಕರ ಶೇ. 14 ಹೆಚ್ಚಿದೆ. ದೇಶದೊಳಗಿನ ಸಾಗಣೆ ಕೂಡ ಶೇ. 21ರಷ್ಟು ಅಧಿಕವಾಗಿದೆ. ಕಳೆದ ವರ್ಷ ಏಪ್ರಿಲ್​ನಲ್ಲಿ ಕೋವಿಡ್ ಕಾರಣ ಲಾಕ್​ಡೌನ್ ಜಾರಿಯಲ್ಲಿದ್ದರಿಂದ ಕೇವಲ 32,172 ಕೋಟಿ ರೂಪಾಯಿ ಜಿಎಸ್​ಟಿ ಸಂದಾಯವಾಗಿತ್ತು. ಲಾಕ್​ಡೌನ್ ನಿಯಮ ಸಿಡಲಗೊಂಡಂತೆ ಜಿಎಸ್​ಟಿ ಸಂಗ್ರಹದಲ್ಲೂ ಏರಿಕೆ ಕಾಣಿಸಿತು. ಕಳೆದ ಅಕ್ಟೋಬರ್​ನಿಂದ ಜಿಎಸ್​ಟಿ ಸಂಗ್ರಹ ಪ್ರತಿ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ. ಇದು ಆರ್ಥಿಕತೆ ಚೇತರಿಕೆ ಹಾದಿಯಲ್ಲಿ ಸ್ಥಿರವಾಗಿ ಮುನ್ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಮಾರ್ಚ್ ತಿಂಗಳ ಆರ್ಥಿಕ ಚಟುವಟಿಕೆಯಿಂದ ಏಪ್ರಿಲ್​ನಲ್ಲಿ ತೆರಿಗೆ ಸಂಗ್ರಹ ಹೆಚ್ಚಿದೆ. ಆದರೆ, ಏಪ್ರಿಲ್​ನಲ್ಲಿ ಲಾಕ್​ಡೌನ್ ರೀತಿಯ ನಿರ್ಬಂಧಗಳು ಮತ್ತೆ ವಿಧಿಸಲ್ಪಟ್ಟಿರುವುದರಿಂದ ಮೇ ತಿಂಗಳ ಸಂಗ್ರಹದಲ್ಲಿ ಏರುಪೇರಾಗುವ ಎಲ್ಲ ಲಕ್ಷಣ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − twelve =
Remember me
