ನವದೆಹಲಿ:ಕರೊನಾ ಪರಿಸ್ಥಿತಿ ನಡುವೆಯೂ ಡಿಸೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ 1.15 ಲಕ್ಷ ಕೋಟಿ ರೂ. ದಾಖಲಾಗಿದೆ. ದೇಶದಲ್ಲಿ ಜಿಎಸ್​ಟಿ ಜಾರಿಯಾದ ಬಳಿಕ ತಿಂಗಳೊಂದರಲ್ಲಿ ಕಂಡುಬಂದ ಅತ್ಯಧಿಕ ತೆರಿಗೆ ಸಂಗ್ರಹ ಇದಾಗಿದೆ. ದೇಶದ ವಿತ್ತ ವ್ಯವಸ್ಥೆ ಸುಧಾರಣೆಯ ಪಥದಲ್ಲಿ ಸಾಗುತ್ತಿದೆ ಎಂಬುದರ ಸೂಚಕ ಇದು ಎಂದು ವಿಶ್ಲೇಷಿಸಲಾಗಿದೆ.
ಕಳೆದ ಮೂರು ತಿಂಗಳಿಂದ ಸತತವಾಗಿ ತೆರಿಗೆ ಸಂಗ್ರಹ ಪ್ರಮಾಣ 1 ಲಕ್ಷ ಕೋಟಿ ರೂ. ದಾಟುತ್ತಿದೆ. ಕರೊನಾ ಮಹಾಮಾರಿ ಹಾಗೂ ಲಾಕ್​ಡೌನ್ ಪರಿಣಾಮ ನೆಲಕಚ್ಚಿದ್ದ ಆರ್ಥಿಕತೆಯನ್ನು ಸುಧಾರಿಸುವ ಸಂಬಂಧ ಕೇಂದ್ರ ಸರ್ಕಾರ ಕೈಗೊಂಡ ಕ್ಷಿಪ್ರ ಕ್ರಮಗಳು ಹಾಗೂ ಜಿಎಸ್​ಟಿ ವಂಚಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಇಲಾಖೆ ಹೇಳಿದೆ. 2017ರ ಜುಲೈ 1ರಂದು ಜಿಎಸ್​ಟಿ ಜಾರಿಗೆ ಬಂದ ನಂತರ 2019ರ ಏಪ್ರಿಲ್​ನಲ್ಲಿ ರೂ. 1,13,866 ಕೋಟಿ ತೆರಿಗೆ ಸಂಗ್ರಹವಾಗಿದ್ದು ಈವರೆಗಿನ ಅತ್ಯಧಿಕ ಪ್ರಮಾಣವಾಗಿದೆ. ದೇಶಾದ್ಯಂತ ಕರೊನಾ ಲಾಕ್​ಡೌನ್ ಬಳಿಕ ಕಳೆದ ಏಪ್ರಿಲ್​ನಲ್ಲಿ ಜಿಎಸ್​ಟಿ ಸಂಗ್ರಹ 32, 172 ಕೋಟಿಗೆ ಕುಸಿದಿತ್ತು.
ರಾಜ್ಯಕ್ಕೆ ಮೂರನೇ ಸ್ಥಾನ
ಕರೊನಾಘಾತದ ಬಳಿಕ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದಲ್ಲಿ ಗಮನಾರ್ಹ ಬೆಳವಣಿಗೆ ಕಾಣಿಸಿದ್ದು, 2019ರ ಡಿಸೆಂಬರ್​ಗೆ ಹೋಲಿಸಿದರೆ ಶೇ. 8 ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ 17,699 ಕೋಟಿ ರೂ. ಸಂಗ್ರಹವಾಗಿದ್ದರೆ, ಗುಜರಾತ್​ನಲ್ಲಿ 7469 ಕೋಟಿ ರೂ. ಮತ್ತು ಕರ್ನಾಟಕದಲ್ಲಿ 7459 ಕೋಟಿ ಸಂಗ್ರಹಿಸಲಾಗಿದೆ. ಈ ಮೂಲಕ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದಲ್ಲಿ 6886 ಕೋಟಿ ಸಂಗ್ರಹಿಸಲಾಗಿತ್ತು. ಅನ್​ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿದ್ದು, ಉತ್ಪಾದನಾ ವಲಯ ಸಹಜತೆಯತ್ತ ಮರಳಿದೆ.
ಕಳೆದ 6 ತಿಂಗಳ ಜಿಎಸ್​ಟಿ ಸಂಗ್ರಹ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 12 =
Remember me
