ನವದೆಹಲಿ:ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್​ಟಿ) ತನ್ನ ಅರ್ಧ ದಶಕದ ಪ್ರಯಾಣವನ್ನು ಹಲವು ಹಿಟ್​ಗಳು ಮತ್ತು ಕೆಲವು ಮಿಸ್​ಗಳೊಂದಿಗೆ ಜೂನ್ 30ರಂದು ಪೂರ್ಣಗೊಳಿಸಿತು.
ತೆರಿಗೆ ಸಂಗ್ರಹಣೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದರೊಂದಿಗೆ ಹಾಗೂ ಪ್ರತಿ ತಿಂಗಳು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹಿಸುವ ಮೂಲಕ ಒಂದು ಮಾದರಿ ಬದಲಾವಣೆಯನ್ನೇ ಜಿಎಸ್​ಟಿ ಮಾಡಿದೆ. ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮತ್ತು ಸ್ಥಳೀಯ ತೆರಿಗೆಗಳನ್ನು ಒಟ್ಟುಗೂಡಿಸಿ ಜಿಎಸ್​ಟಿಯನ್ನು 2017ರ ಜುಲೈ 1ರ ಮಧ್ಯರಾತ್ರಿಯಂದು ರಾಷ್ಟ್ರವ್ಯಾಪಿಯಾಗಿ ಜಾರಿಗೆ ತರಲಾಯಿತು.
ಜಿಎಸ್​ಟಿ ಅಡಿಯಲ್ಲಿ ನಾಲ್ಕು ಹಂತದ ತೆರಿಗೆ ದರಗಳಿವೆ. ಅಗತ್ಯ ವಸ್ತುಗಳ ಮೇಲೆ ಶೇ 5ರಷ್ಟು ದರವಿದ್ದರೆ, ಕಾರಿನಂತಹ ಸರಕಿನ ಮೇಲೆ ಶೇ. 28ರಷ್ಟು ತೆರಿಗೆ ಹಾಕಲಾಗುತ್ತದೆ. ಇನ್ನಿತರ ವಸ್ತುಗಳ ಮೇಲೆ ಶೇ. 12 ಮತ್ತು 18 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಜಿಎಸ್​ಟಿ ಜಾರಿಯ ಪೂರ್ವದಲ್ಲಿ, ವ್ಯಾಟ್, ಅಬಕಾರಿ, ಸಿಎಸ್​ಟಿ ವಿಧಿಸುತ್ತಿದ್ದ ಪರಿಣಾಮವಾಗಿ ಗ್ರಾಹಕರು ಸರಾಸರಿಯಾಗಿ ಶೇ. 31ರಷ್ಟು ತೆರಿಗೆ ಪಾವತಿಸುವ ಪರಿಸ್ಥಿತಿ ಇತ್ತು. ಜಿಎಸ್​ಟಿಯು ಹಣಕಾಸಿನ ಒಕ್ಕೂಟದ ಅಭೂತಪೂರ್ವ ನಿರ್ವಹಣೆಯ ಪ್ರತೀಕವಾಗಿದೆ.
ಏಕೆಂದರೆ, ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳು ಸೇರಿ ಜಿಎಸ್​ಟಿ ಮಂಡಳಿ ರಚಿಸಿಕೊಂಡಿದ್ದು, ಸುದೀರ್ಘ ಸಮಾಲೋಚನೆಗಳ ಮೂಲಕ ಈ ಹೊಸ ತೆರಿಗೆ ಪದ್ಧತಿಯ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುತ್ತಿವೆ. ಜಿಎಸ್​ಟಿ ಮಂಡಳಿ ಇದುವರೆಗೆ 47 ಬಾರಿ ಸಭೆ ನಡೆಸಿದೆ. ಪ್ರತಿ ತಿಂಗಳಿಗೆ 1 ಲಕ್ಷ ಕೋಟಿ ರೂ. ಇರುವ ಜಿಎಸ್​ಟಿ ಸಂಗ್ರಹವನ್ನು 1.4 ಲಕ್ಷ ಕೋಟಿ ರೂ.ಗೆ ಕೊಂಡೊಯ್ಯಲು ಯೋಜನೆ ರೂಪಿಸಿದೆ.
ಇನ್ನಷ್ಟು ಸರಳತೆ ಅಗತ್ಯ:ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ), ‘ಬಹು ತೆರಿಗೆ ಮತ್ತು ಕರಗಳನ್ನು ಜಿಎಸ್​ಟಿ ಒಳಗೊಳ್ಳುವ ಮೂಲಕ ಹೊರೆ ಕಡಿಮೆ ಮಾಡಿದೆ. ಪ್ರಾದೇಶಿಕ ಅಸಮತೋಲನ ಮತ್ತು ಅಂತಾರಾಜ್ಯ ಅಡೆತಡೆಗಳನ್ನು ತೆಗೆದುಹಾಕಿದೆ. ಪಾರದರ್ಶಕತೆ ಮತ್ತು ಒಟ್ಟಾರೆ ಆದಾಯ ಸಂಗ್ರಹವನ್ನು ಗಣನೀಯವಾಗಿ ಹೆಚ್ಚಿಸಿದೆ’ ಎಂದು ಟ್ವೀಟ್ ಮಾಡಿದೆ. ಜಿಎಸ್​ಟಿ ಆಡಳಿತ ಚುರುಕಿನಿಂದ ಮುನ್ನಡೆದಿದ್ದರೂ, ಸಂಪೂರ್ಣ ಸಾಮರ್ಥ್ಯ ಅಳವಡಿಸಿಕೊಳ್ಳಲು ಮತ್ತು ಇನ್ನಷ್ಟು ಉತ್ತಮ-ಸರಳ ತೆರಿಗೆ ರೂಪಿಸಲು ಕ್ರಮಿಸಬೇಕಾದ ದಾರಿ ಸಾಕಷ್ಟಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಪರಿಣತರು ಏನಂತಾರೆ?:ಕಳೆದ ಐದು ವರ್ಷಗಳಲ್ಲಿ, ಸಕಾಲಿಕ ಸ್ಪಷ್ಟೀಕರಣ ಮತ್ತು ತಿದ್ದುಪಡಿಗಳ ಮೂಲಕ ತೆರಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತಗ್ಗಿಸಲಾಗಿದೆ. ಆದರೂ, ಅನಧಿಕೃತ ಮತ್ತು ಶೋಕಾಸ್ ನೋಟಿಸ್​ಗಳಿಗೆ ಸಂಬಂಧಿಸಿದಂತೆ ತೆರಿಗೆದಾರರು ಎದುರಿಸುತ್ತಿರುವ ಕೆಲವು ಸಂಕಷ್ಟಗಳನ್ನು ಜಿಎಸ್​ಟಿ ಮಂಡಳಿಯು ತ್ವರಿತವಾಗಿ ಪರಿಹರಿಸಬೇಕು. ಪೆಟ್ರೋಲ್, ಡೀಸೆಲ್, ವಿದ್ಯುತ್ ಮುಂತಾದ ಇಂಧನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದು ದೇಶಾದ್ಯಂತ ಏಕರೂಪ ತೆರಿಗೆಯನ್ನು ವಿಸ್ತರಿಸಬೇಕು ಎಂದು ಪರಿಣತರು ಹೇಳುತ್ತಾರೆ.
ನಾಯಿ ಕಚ್ಚಿದಕ್ಕೆ ಲಸಿಕೆ ಪಡೆದ ವಿದ್ಯಾರ್ಥಿನಿ, ಚಿಕಿತ್ಸೆ ಫಲಿಸದೆ ರೇಬೀಸ್ ಸೋಂಕಿಗೆ ಬಲಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 4 =
Remember me
