ಮುಂಬೈ:ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೇಲ್ಮನವಿ ನ್ಯಾಯಮಂಡಳಿಯನ್ನು ಸ್ಥಾಪಿಸುವ ಕಾರ್ಯ ವೇಗ ಪಡೆದುಕೊಳ್ಳುತ್ತಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಸ್ಥಾಪನೆಯಾಗುವ ನಿರೀಕ್ಷೆಯಿದೆ.
“ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯು ಆದಷ್ಟು ಬೇಗನೇ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ವರ್ಷದ ಅಂತ್ಯದ ವೇಳೆಗೆ ಅಥವಾ 2025 ರ ಆರಂಭದಲ್ಲಿ ಮಾಡಲಾಗುವುದು” ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಮಧ್ಯದ ವೇಳೆಗೆ ಇದನ್ನು ಸ್ಥಾಪಿಸುವ ಆರಂಭಿಸಕ ಗುರಿ ಇತ್ತು. ಈಗ ಸ್ವಲ್ಪ ವಿಳಂಬವಾಗಬಹುದು ಎಂದೂ ಅವು ಹೇಳಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 6ರಂದು ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷರಾಗಿ ನ್ಯಾಯಮೂರ್ತಿ (ನಿವೃತ್ತ) ಸಂಜಯ ಕುಮಾರ್ ಮಿಶ್ರಾ ಅವರಿಗೆ ಸಮಗ್ರತೆ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದರು.
ಮೇಲ್ಮನವಿ ನ್ಯಾಯಾಧಿಕರಣಕ್ಕೆ ನ್ಯಾಯಾಂಗ ಮತ್ತು ತಾಂತ್ರಿಕ ಸದಸ್ಯರನ್ನು ನೇಮಿಸುವ ಪ್ರಕ್ರಿಯೆಯಲ್ಲಿಯೂ ಈಗ ಸರ್ಕಾರ ತೊಡಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಹಣಕಾಸು ಸಚಿವಾಲಯವು ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಒಟ್ಟು 96 ಹುದ್ದೆಗಳಿಗೆ ಅರ್ಜಿಗಳನ್ನು ಕೋರಿತ್ತು. ಒಟ್ಟಾರೆಯಾಗಿ, ನ್ಯಾಯಾಂಗ ಸದಸ್ಯರ ಹುದ್ದೆಗೆ 63 ಮತ್ತು ತಾಂತ್ರಿಕ ಸದಸ್ಯರಿಗೆ (ಕೇಂದ್ರ) 32 ಮತ್ತು ತಾಂತ್ರಿಕ ಸದಸ್ಯ (ರಾಜ್ಯ) 1 ಹುದ್ದೆಗಳು ಖಾಲಿ ಇವೆ.
ದೆಹಲಿಯಲ್ಲಿ ಒಂದು ಪ್ರಧಾನ ಪೀಠವನ್ನು ಮತ್ತು ರಾಜ್ಯಗಳಾದ್ಯಂತ ವಿವಿಧ ಸ್ಥಳಗಳಲ್ಲಿ 31 ರಾಜ್ಯ ಪೀಠಗಳನ್ನು ಈ ನ್ಯಾಯಮಂಡಳಿ ಹೊಂದಿರಲಿದೆ. ಉತ್ತರ ಪ್ರದೇಶವು ಮೂರು ಬೆಂಚ್‌ಗಳನ್ನು ಹೊಂದಿದರೆ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳು ತಲಾ ಎರಡು ಬೆಂಚ್‌ಗಳನ್ನು ಹೊಂದಲಿವೆ.
ಜುಲೈ 2017 ರಲ್ಲಿ ಜಿಎಸ್​ಟಿ ಪ್ರಾರಂಭವಾದ ಅಂದಾಜು ಆರು ವರ್ಷಗಳ ನಂತರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಿಎಸ್​​ಟಿ ಮೇಲ್ಮನವಿ ನ್ಯಾಯಮಂಡಳಿಯ ಪೀಠಗಳಿಗೆ ಕೇಂದ್ರವು ಸೂಚನೆ ನೀಡಿತ್ತು. ಕಂಪನಿಗಳು ಜಿಎಸ್​ಟಿ ಸಂಬಂಧಿತ ತಮ್ಮ ಪ್ರಕರಣಗಳನ್ನು ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಒಳಪಡಿಸುವಲ್ಲಿ ದೀರ್ಘ ವಿಳಂಬವನ್ನು ಎದುರಿಸುತ್ತಿವೆ. ಜಿಎಸ್​ಟಿ ವಿವಾದಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಪರಿಹರಿಸಲು ಈ ನ್ಯಾಯಮಂಡಳಿ ನೆರವಾಗಲಿದೆ ಎಂದು ಉದ್ದೇಶಿಸಲಾಗಿದೆ.
ದತ್ತಾಂಶಗಳ ಪ್ರಕಾರ, 2023ರ ಆಗಸ್ಟ್‌ ವೇಳೆಗೆ ಹೈಕೋರ್ಟ್​ನಲ್ಲಿ ಕೇಂದ್ರ ಜಿಎಸ್‌ಟಿಗೆ ಸಂಬಂಧಿಸಿದಂತೆ 14,000ಕ್ಕೂ ಹೆಚ್ಚು ಮೇಲ್ಮನವಿಗಳು ಬಾಕಿ ಉಳಿದಿದ್ದು, ಈ ಸಂಖ್ಯೆಗಳಲ್ಲಿ ಮತ್ತಷ್ಟು ಏರಿಕೆಯಾಗಿರುವುದನ್ನು ಕಾಣಬಹುದಾಗಿದೆ.

ಇಪಿಎಫ್​ಒ ಹಣ ವಾಪಸು ಪಡೆಯಲು ಸ್ವಯಂಚಾಲಿತ ವ್ಯವಸ್ಥೆ ಶುರು

ರಜನೀಕಾಂತ್ ಮಗಳು- ಅಳಿಯ ಇಬ್ಬರೂ ಬೇರೆಯವರ ಜತೆ ಡೇಟಿಂಗ್​ ಮಾಡಿ ಪರಸ್ಪರರಿಗೆ ಮೋಸ ಮಾಡಿದ್ದಾರೆ: ಗಾಯಕಿಯ ಆಘಾತಕಾರಿ ಹೇಳಿಕೆ

ಪ್ರೀತಿ ಜಿಂಟಾ ಹಾಗೂ ನನ್ನ ಗಂಡ ಡೇಟಿಂಗ್​ ನಡೆಸಿದ್ದರು… ನಾನು ಬಾಯ್​ಫ್ರೆಂಡ್​ ಸ್ನ್ಯಾಚರ್​ ಅಲ್ಲ.. ಹೀಗಿದೆ ನಟಿಯ ಸ್ಪಷ್ಟನೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve − 9 =
Remember me
