ನವದೆಹಲಿ:ಕುದುರೆ ಜೂಜು, ಕ್ಯಾಸಿನೊ, ಆನ್​ಲೈನ್ ಗೇಮ್ಳ ಮೇಲೆ ವಿಧಿಸಲಾಗುವ ಶೇ.28ರಷ್ಟು ತೆರಿಗೆಯ ವಿಚಾರದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಕೊಂಚ ಉದಾರತೆ ತೋರಿದೆ. ಈ ತೆರಿಗೆಯು ನಿಗದಿಯಂತೆ ಅಕ್ಟೋಬರ್ 1ರಿಂದ ಜಾರಿಯಾಗಲಿದ್ದು, ಆರು ತಿಂಗಳ ನಂತರ ಅಥವಾ 2024ರ ಏಪ್ರಿಲ್​ನಲ್ಲಿ ನಡೆಯಲಿರುವ ಜಿಎಸ್​ಟಿ ಸಭೆಯಲ್ಲಿ ಮರುಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಮಂಡಳಿ ಭರವಸೆ ನೀಡಿದೆ.
ಬಾಜಿ ಕಟ್ಟಿ ಆಡುವವರು ಆರಂಭಿಕ ಹಂತದಲ್ಲಿ ಹೂಡುವ ಮೊತ್ತದ ಮುಖಬೆಲೆಯ ಮೇಲೆ ಜಿಎಸ್​ಟಿ ಅನ್ವಯವಾಗಲಿದೆ ಎಂದು ಮಂಡಳಿ ತಿಳಿಸಿದೆ. ಈ ಸಂಬಂಧ ಜಿಎಸ್​ಟಿ ಕಾಯ್ದೆಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಯೇ ತಿದ್ದುಪಡಿ ಮಂಡನೆಯಾಗಲಿದ್ದು, ಬಳಿಕ ಆಯಾ ರಾಜ್ಯಗಳು ವಿಧಾನಸಭೆಯಲ್ಲಿ ಇದನ್ನು ಅಂಗೀಕರಿ ಸಬೇಕಾಗುತ್ತದೆ. ಆದರೆ ಮಂಡಳಿಯ ಈ ನಿರ್ಧಾರಕ್ಕೆ ಕೆಲ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಬುಧವಾರ ವರ್ಚುವಲ್ ವೇದಿಕೆಯಲ್ಲಿ ನಡೆದ ಜಿಎಸ್​ಟಿ ಮಂಡಳಿಯ 51ನೇ ಸಭೆಯಲ್ಲಿ ಶೇ.28ರ ತೆರಿಗೆಗೆ ದೆಹಲಿ, ಗೋವಾ, ಸಿಕ್ಕಿಂ ಸೇರಿ ಅನೇಕ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತ ಪಡಿಸಿದವು. ನಿರ್ಧಾರ ಮರುಪರಿಶೀಲಿಸುವಂತೆ ಆಗ್ರಹಿಸಿದವು. ಆದರೆ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉತ್ತರಪ್ರದೇಶ ಸರ್ಕಾರಗಳು ಶೇ.28ರ ದರದ ತೆರಿಗೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದವು.
ಆನ್​ಲೈನ್ ಗೇಮಿಂಗ್ ತೆರಿಗೆ ಕುರಿತು ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಕಾನೂನು ಸಮಿತಿ ನಿಯಮಾವಳಿಯ ಕರಡನ್ನು ಸಿದ್ಧಪಡಿಸಿದೆ. ಆನ್​ಲೈನ್ ಗೇಮಿಂಗ್ ಪೂರೈಕೆಯ ಮೌಲ್ಯವು ಆಟಗಾರ ತೊಡಗಿಸುವ ಹಣ ಅಥವಾ ವರ್ಚುವಲ್ ಸ್ವತ್ತಿನ ಠೇವಣಿಯ ಮೊತ್ತಕ್ಕೆ ಇರಬೇಕೆಂಬ ನಿಯಮವನ್ನು ಈ ಸಮಿತಿ ಶಿಫಾರಸು ಮಾಡಿದೆ. ಕ್ಯಾಸಿನೊಗಳಲ್ಲಿ ಇದು ಟೋಕನ್, ಚಿಪ್, ಕಾಯಿನ್ ಅಥವಾ ಟಿಕೆಟ್ ಖರೀದಿಯ ಮೊತ್ತಕ್ಕೆ ಅನ್ವಯವಾಗಬೇಕು ಎಂದು ಸಲಹೆ ನೀಡಿದೆ. ಈ ಅಂಶಗಳ ಬಗ್ಗೆ ಸಭೆಯಲ್ಲಿ ರ್ಚಚಿಸಲಾಯಿತು ಎಂದು ಸಭೆಯ ನಂತರ ಸುದ್ದಿಗಾರರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ತೆರಿಗೆಯ ಅನ್ವಯದ ಬಗ್ಗೆ ಉದಾಹರಣೆ ನೀಡಿದ ಸಚಿವೆ, ಆಟಗಾರನು ಮೊದಲು ಹೂಡುವ ಮೊತ್ತವನ್ನು ತೆರಿಗೆಗೆ ಪರಿಗಣಿಸಲಾಗುತ್ತದೆ. 1,000 ರೂ. ಬಾಜಿಕಟ್ಟಿ 300 ರೂ. ಗೆದ್ದರೆ, ಮುಂದಿನ ಹಂತದಲ್ಲಿ 1,300 ರೂ. ಬಾಜಿ ಕಟ್ಟಿ ಗೆಲ್ಲುವ ಮೊತ್ತಕ್ಕೆ ಮತ್ತೆ ತೆರಿಗೆ ಇರುವುದಿಲ್ಲ ಎಂದು ವಿವರಿಸಿದರು.
ಆರಂಭಿಕ ಹಂತದ ಹೂಡಿಕೆಗೆ ಮಾತ್ರ ಜಿಎಸ್​ಟಿ ವಿಧಿಸುವ ಮಂಡಳಿಯ ನಿರ್ಧಾರವನ್ನು ಅಖಿಲ ಭಾರತ ಗೇಮಿಂಗ್ ಒಕ್ಕೂಟ (ಎಐಜಿಎಫ್) ಸ್ವಾಗತಿಸಿದೆ.
ಆನ್​ಲೈನ್ ಗೇಮಿಂಗ್ ಮೇಲಿನ ಶೇ. 28 ಜಿಎಸ್​ಟಿ ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿದೆ. ಆದರೆ, ಆರು ತಿಂಗಳ ಬಳಿಕ ಮರುಪರಿಶೀಲಿಸಲು ಸಭೆ ಒಪ್ಪಿಗೆ ನೀಡಿದೆ.
| ನಿರ್ಮಲಾ ಸೀತಾರಾಮನ್, ಕೇಂದ್ರ ವಿತ್ತ ಸಚಿವೆ ಮತ್ತು ಜಿಎಸ್​ಟಿ ಮಂಡಳಿ ಅಧ್ಯಕ್ಷೆ
ಆನ್​ಲೈನ್ ಗೇಮಿಂಗ್, ಆನ್​ಲೈನ್ ಮನಿ ಗೇಮಿಂಗ್, ಹಣ ಪಾವತಿಗೆ ಬಳಸುವ ವರ್ಚುವಲ್ ಡಿಜಿಟಲ್ ಅಸೆಟ್ ಹಾಗೂ ಆನ್​ಲೈನ್ ಗೇಮಿಂಗ್ ವಿಚಾರದಲ್ಲಿ ಯಾರು ಪೂರೈಕೆದಾರರು ಎನ್ನುವುದನ್ನು ಈ ತಿದ್ದುಪಡಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ.
ನೋಂದಣಿ ಅಗತ್ಯ:ವಿದೇಶಿ ಆನ್​ಲೈನ್ ಗೇಮಿಂಗ್​ಗಳು ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ಪಾವತಿಸಿದರಷ್ಟೇ ಭಾರತದಲ್ಲಿ ಕಾರ್ಯನಿರ್ವಹಿಸಬಹುದು. ಇಲ್ಲದಿದ್ದರೆ ಅವುಗಳ ವಿರುದ್ಧ ಐಟಿ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದರು. ಪ್ರತಿಯೊಂದು ಆಟದ ಮುಖಬೆಲೆಗೆ ಬದಲಾಗಿ, ಒಟ್ಟಾರೆ ಆಟದ ಆದಾಯಕ್ಕೆ (ಜಿಜಿಆರ್) ತೆರಿಗೆ ಅನ್ವಯಿಸುವುದು ಸೂಕ್ತ ಎಂದು ಗೋವಾ ಹಾಗೂ ಸಿಕ್ಕಿಂ ಸರ್ಕಾರಗಳು ಒತ್ತಾಯಿಸಿದವು ಎಂದು ಹೇಳಿದರು.
ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

‘ಇಂಡಿಯಾ’ಗೆ ಕರ್ನಾಟಕದಿಂದ ಕನಿಷ್ಠ 20 ಲೋಕಸಭಾ ಸೀಟುಗಳನ್ನು ಗೆಲ್ಲಿಸಿ ಕೊಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eleven =
Remember me
