ಅಹಮದಾಬಾದ್:ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಆಟ ಆಡುತ್ತಿದ್ದ 14 ತಿಂಗಳ ಮಗುವಿನ ಮೇಲೆ ಕಾರು ಹರಿದು ಮೃತಪಟ್ಟಿರುವ ಘಟನೆ ಶುಕ್ರವಾರ ಅಹಮದಾಬಾದ್​​ನ ನೆಹರುನಗರದದಲ್ಲಿ ನಡೆದಿದೆ.
ಇದನ್ನೂ ಓದಿ:ಲೋಕಸಮರಕ್ಕೆ ‘ಮೋದಿ ಗ್ಯಾರಂಟಿ​’ ಅಸ್ತ್ರ: ದೇಶದಲ್ಲಿ ಮೂರು ಹೊಸ ಬುಲೆಟ್​ ಟ್ರೈನ್​ ಯೋಜನೆ ಜಾರಿ!
ನೆಹರುನಗರದ ಕಲಾನಿಕೇತನ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ನಿರ್ವಹಿಸುವ ಮಹಾಬೀರ್ ಖಿಲ್ಲೋಹರ್ ಅವರ 14 ತಿಂಗಳ ಬಾಲಕಿ ಪಾರ್ಕಿಂಗ್ ಸ್ಥಳದಲ್ಲಿ ಆಟ ಆಡುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿ ಕಾರೊಂದು ಬಂದು ನಿಂತಿದೆ. ಪುಟ್ಟ ಮಗು ಆಟ ಆಡುತ್ತಾ ಮೆಲ್ಲನೆ ನಿಂತು ಕಾರಿನ ಎಡ ಚಕ್ರದ ಬಳಿ ಬಂದಿದೆ. ಈ ವೇಳೆ ಕಾರು ಮುಂದಕ್ಕೆ ಚಲಿಸಿದ್ದು ಮಗು ಕಾರಿನ ಚಕ್ರದ ಕೆಳಗಡೆ ಸಿಲುಕಿಕೊಂಡಿದೆ. ಈ ಭೀಕರ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಕಾರಿನ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾರಿಮಧ್ಯೆಯೆ ಮಗು ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಕಾರು ಚಾಲಕ ಲಿಡಿಯಾ ವಿರುದ್ಧ ಐಪಿಸಿ 279, 304A ಮತ್ತು 337 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು. ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಎಂ ಡಿವಿಷನ್ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಯುಬಿ ಧಖಾಡ ಅವರು ತಿಳಿಸಿದ್ದಾರೆ.
ರಿಂಕು, ಗಿಲ್​ ಔಟ್‌, ರಿಯಾನ್​ ಪರಾಗ್​ ಇನ್​: ಟಿ20 ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಕಟ್ಟಿದ ಮೊಹಮ್ಮದ್​ ಕೈಫ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
