ನವದೆಹಲಿ :ಅತಿಹೆಚ್ಚು ರೇಟಿನ ತರಕಾರಿ ಯಾವುದು ? ನಾಟಿ ಬಟಾಣಿ ಇರಬಹುದು – ಏಕೆಂದರೆ ಒಮ್ಮೊಮ್ಮೆ ಕೆಜಿಗೆ 200 ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತೆ. ಆದರೆ ಅದನ್ನು ಕೆಜಿಗಟ್ಟಲೆ ಬೆಳೆದು ಮಾರಿದರೂ ಒಂದು ಲಕ್ಷ ರೂಪಾಯಿ ಸಂಪಾದಿಸೋದು ಬಹಳ ಕಷ್ಟದ ಮಾತು. ಇನ್ನು ಒಂದು ಕೆಜಿಗೇ ಒಂದು ಲಕ್ಷ ರೂಪಾಯಿ ಬೆಲೆ ಇರುವ ತರಕಾರಿ ಇದೆ ಅಂದ್ರೆ ನಂಬ್ತೀರಾ?!
ಹೌದು, ಇದೀಗ ಬಿಹಾರದಲ್ಲಿ ರೈತರೊಬ್ಬರು ಬೆಳೆಯುತ್ತಿರುವ ತರಕಾರಿ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ತರಕಾರಿ. ‘ಹಾಪ್ ಶೂಟ್ಸ್’ ಎಂಬ ಹೆಸರಿನ ಈ ತರಕಾರಿ ಬೆಲೆ ಕೆಜಿಗೆ ಕೇವಲ ಒಂದು ಲಕ್ಷ ! ಈ ಹಾಪ್ಸ್ ಭಾರತದ ಮಾರುಕಟ್ಟೆಗೆ ಅಪರೂಪದ ತರಕಾರಿ. ವಿಶೇಷ ಆರ್ಡರ್​ಗಳ ಮೇಲೆ ಮಾತ್ರ ಇದು ಲಭ್ಯವಾಗುತ್ತಿದ್ದು, ಡೆಲಿವರಿಗೆ ತುಂಬಾ ಸಮಯ ತೆಗೆದುಕೊಳ್ಳುವಂಥದ್ದಾಗಿತ್ತು.
ಇದನ್ನೂ ಓದಿ:ಈ ದೇಶದ ಶಾಲೆಗಳಲ್ಲೇ ಇದೆ ಕಾಂಡೋಮ್​ ವಿತರಣಾ ಮಷಿನ್​! 29 ವರ್ಷಗಳ ಹಿಂದೆಯೇ ಅಳವಡಿಕೆ!
ಆದರೆ, ಇದೀಗ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಈ ತರಕಾರಿಯನ್ನು ಬೆಳೆಯುವ ಸಾಹಸಕ್ಕೆ ರೈತರೊಬ್ಬರು ಕೈಹಾಕಿದ್ದಾರೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಕರಮನಿಧ್ ಗ್ರಾಮದ ನಿವಾಸಿ, 38 ವರ್ಷದ ಅಮರೇಶ್ ಸಿಂಗ್ ಎಂಬುವರೇ ಈ ರೈತ. ಈ ದುಬಾರಿ ತರಕಾರಿಯ ಸಸಿಗಳನ್ನು ವಾರಣಾಸಿಯ ಇಂಡಿಯನ್ ವೆಜಿಟೆಬಲ್ ರಿಸರ್ಚ್​ ಇನ್ಸ್​ಟಿಟ್ಯೂಟ್​ನಿಂದ ಖರೀದಿಸಿ ತಂದು ತಮ್ಮ ತೋಟದಲ್ಲಿ ಬೆಳೆಸುತ್ತಿದ್ದಾರೆ. ಇದಕ್ಕಾಗಿ ಅವರು ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
https://twitter.com/supriyasahuias/status/1377111139914444809?s=20
ಐಎಎಸ್​ ಅಧಿಕಾರಿ ಸುಪ್ರಿಯ ಸಾಹು ಈ ತರಕಾರಿ ಬಗ್ಗೆ ತಿಳಿಸುತ್ತಾ, ತಾವು ಬೆಳೆಯೋ ಬೆಳೆಗೆ ಸರಿಯಾಗಿ ಬೆಲೆ ಸಿಗುವುದಿಲ್ಲ ಅಂತ ಪೇಚಾಡುವ ಭಾರತೀಯ ರೈತರಿಗೆ ಇದು ‘ಗೇಮ್​ ಚೇಂಜರ್’ ಆಗಬಹುದು ಎಂದು ಟ್ವೀಟ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದಕ್ಕೆ ಸದ್ಯ ಕೆಜಿಗೆ ಸುಮಾರು ರೂ. 85,000 ದಿಂದ ರೂ. 1 ಲಕ್ಷದವರೆಗೆ ಬೆಲೆ ಇದೆ.
ಹಾಪ್ಸ್​ ಒಂದು ಹೂವಿನ ಗಿಡ. ಇದರ ವೈಜ್ನಾನಿಕ ಹೆಸರು ಹುಮುಲಸ್ ಲುಪುಲಸ್. ಈ ಗಿಡದ ಪ್ರತಿಯೊಂದು ಭಾಗಕ್ಕೂ ಹಲವಾರು ಉಪಯೋಗಗಳಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳು ಹೇರಳವಾಗಿದ್ದು, ಕ್ಯಾನ್ಸರ್ ಮತ್ತು ಕ್ಷಯರೋಗದ ಚಿಕಿತ್ಸೆಯಲ್ಲಿ ಇದರ ಸೇವನೆ ಪರಿಣಾಮಕಾರಿ ಎನ್ನಲಾಗಿದೆ. ಬಿಯರ್ ಉತ್ಪಾದನೆಯಲ್ಲೂ ಇದರ ಉಪಯೋಗವಿದೆ. ಒಳ್ಳೆಯ ತ್ವಚೆ ನೀಡುವುದಲ್ಲದೆ ಒತ್ತಡ, ನಿದ್ರಾಹೀನತೆ ಮತ್ತು ಖಿನ್ನತೆಯಂಥ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾ ಕಟ್ಟೆಚ್ಚರದಲ್ಲಿ ಕುಂಭ ಮೇಳ : ಹರಿದ್ವಾರದಲ್ಲಿ ಇಂದಿನಿಂದ ಆರಂಭ

ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 13 =
Remember me
