ಬೆಂಗಳೂರು:ರಾಜ್ಯದಲ್ಲಿ ಕರೊನಾ ಹಾವಳಿ ಕಡಿಮೆಯಾಗದಿದ್ದರೂ ನಿರ್ಬಂಧ ಮಾತ್ರ ಸಡಿಲವಾಗುತ್ತಿದೆ. ಇದೀಗ ಕೇಂದ್ರಾಡಳಿತ ಪ್ರದೇಶವೂ ಒಳಗೊಂಡು ಇತರ ರಾಜ್ಯಗಳ ಪ್ರಯಾಣಿಕರಿಗೆ ಮುಕ್ತ ಅವಕಾಶ ಕಲ್ಪಿಸಿ, ಹಿಂದಿನ ಹಲವಾರು ನಿರ್ಬಂಧಗಳನ್ನು ರದ್ದುಪಡಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪರಿಷ್ಕೃತ ಶಿಷ್ಟಾಚಾರದ ಸುತ್ತೋಲೆಯನ್ನು ಸೋಮವಾರ ಹೊರಡಿಸಿದ್ದು, ಕೇಂದ್ರ ಸರ್ಕಾರದ ಅನ್​ಲಾಕ್-3 ಮಾರ್ಗಸೂಚಿಯನ್ನು ಯಥಾವತ್ ಅನುಪಾಲನೆ ಮಾಡಿದ್ದಾರೆ. ಹೊರ ರಾಜ್ಯಗಳ ಪ್ರಯಾಣಿಕರಿಗೆ ರಾಜ್ಯ ಪ್ರವೇಶ ಮುಕ್ತಗೊಳಿಸಿದ್ದು, ಸಹಜ ದಿನಗಳಂತೆ ಎಷ್ಟು ದಿನ ಬೇಕಾದರೂ ಇರಬಹುದು, ಉದ್ದೇಶವನ್ನೂ ತಿಳಿಸಬೇಕಾಗಿಲ್ಲ. ಆದರೆ ಈ ಪ್ರಯಾಣಿಕರ ಸ್ವಯಂ ಹೊಣೆಗಾರಿಕೆ ಹೆಚ್ಚಿಸಲಾಗಿದೆ.
ವ್ಯಾಪಾರಿಗಳು, ವಿದ್ಯಾರ್ಥಿಗಳು, ಕಾರ್ವಿುಕರು, ಸಾರಿಗೆ ಮಧ್ಯಂತರ ಪ್ರಯಾಣಿಕರು ಇತರರಿಗೆ ಇದು ಅನ್ವಯಿಸಲಿದ್ದು, ಪರಿಷ್ಕೃತ ಶಿಷ್ಟಾಚಾರದ ಸುತ್ತೋಲೆ ಯಥಾವತ್ ಜಾರಿಗೆ ತರಬೇಕು ಎಂದು ಜಿಲ್ಲಾ ಆಡಳಿತ ಮತ್ತು ಬಿಬಿಎಂಪಿ ಆಯುಕ್ತರಿಗೆ ಸರ್ಕಾರ ಸೂಚಿಸಿದೆ.
ಯಾವುದೆಲ್ಲ ರದ್ದು?:
ಪಂಚಾಯಿತಿ/ ವಾರ್ಡ್ ಮಟ್ಟದ ತಂಡಗಳಿಂದ ಮೇಲ್ವಿಚಾರಣೆ, ಫ್ಲೈಯಿಂಗ್ ಸ್ಕಾ್ವಡ್, ಐವಿಆರ್​ಎಸ್ ಕಾಲ್ ಸೆಂಟರ್​ಗೆ ಹೋಗುವ ಕರೆಗಳು, ಕ್ವಾರಂಟೈನ್ ವಾಚ್ ಅಪ್ಲಿಕೇಷನ್ ಮುಖೇನ ನಿಗಾ ಸೇರಿ ಮನೆ ಸಂಪರ್ಕ ತಡೆ.
ಹೊರ ರಾಜ್ಯಗಳ ಪ್ರಯಾಣಿಕರ ಜವಾಬ್ದಾರಿ:
ನಾಲ್ವರಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್:ಬೆಳಗಾವಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಿಯವಾಗಿ ಸಿದ್ಧಪಡಿಸಿರುವ ‘ಕೋವ್ಯಾಕ್ಸಿನ್’ನ ಮಾನವರ ಮೇಲಿನ ಪ್ರಯೋಗವು ನಗರದ ಜೀವನ ರೇಖಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ನಾಲ್ವರು ಆರೋಗ್ಯವಂತ ವ್ಯಕ್ತಿಗಳಿಗೆ ಕೋವ್ಯಾಕ್ಸಿನ್ 2ನೇ ಡೋಸ್ ನೀಡಲಾಗಿದೆ. ಲಸಿಕೆ ನೀಡಿರುವ ನಾಲ್ವರು ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಎಲ್ಲರೂ ಅವರವರ ಮನೆಗಳಲ್ಲೇ ಇದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಯೋಗಕ್ಕೊಳಗಾಗಿರುವ ನಾಲ್ವರು ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ಪರಿಶೀಲನೆ ಮಾಡಲಾಗುವುದು ಎಂದು ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾತೆ ತಿಳಿಸಿದ್ದಾರೆ.
ಸಾಮಾಜಿಕ ಕ್ಲಬ್​ಗಳಿಗೆ ಅನುಮತಿ:ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲೆಂದು ಕ್ರೀಡಾ ಸಮುಚ್ಚಯ ಮತ್ತು ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಕೇಂದ್ರದ ನಿರ್ದೇಶನ, ರಾಜ್ಯ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿ ಪಾಲನೆ ಷರತ್ತಿಗೆ ಒಳಪಟ್ಟು ಸಾಮಾಜಿಕ ಕ್ಲಬ್​ಗಳಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಹಾಗೂ ಮೇಜಿನ ಮೇಲೆ ಆಹಾರ ವ್ಯವಸ್ಥೆ ಕಲ್ಪಿಸಲು ಅನುಮತಿ ನೀಡಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅಂಜುಂ ಪರ್ವೆಜ್ ಸ್ಪಷ್ಟಪಡಿಸಿದ್ದಾರೆ. ಚಿತ್ರಮಂದಿರಗಳು, ಈಜುಗೊಳ, ಉದ್ಯಾನವನ, ಬಾರ್​ಗಳು, ಸಭಾಂಗಣಗಳು, ಅಸೆಂಬ್ಲಿ ಹಾಲ್, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ವಿುಕ ಸಭೆ-ಸಮಾರಂಭಗಳು ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twenty − seven =
Remember me
