ನವದೆಹಲಿ: ರೇಷ್ಮೆ, ಸಿಲ್ಕ್, ಕಾಟನ್ ಶರ್ಟ್​​​ ನೋಡಿರುವ ನಿಮಗೆ ಇಂದು ನಾವು ಸಂಪೂರ್ಣವಾಗಿ 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಲಾದ ಚಿನ್ನದ ಶರ್ಟ್ ಇದೆ ಎಂದ್ರೆ ನಂಬಲು ಕಷ್ಟ ಆದ್ರೂ ಇದು ಸತ್ಯವಾಗಿದೆ.
ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರು 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಲಾದ ವಿಶ್ವದ ಅತ್ಯಂತ ದುಬಾರಿ ಶರ್ಟ್ ಹೊಂದಿರುವ ವ್ಯಕ್ತಿ.
ಶರ್ಟ್ ವಿಶೇಷತೆ? :4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ 1,78,00,000 ಕೋಟಿ ರೂ. ಮೌಲ್ಯದ್ದಾಗಿದೆ ಮತ್ತು ಪರಾಖ್ ಅವರ ಶ್ರೀಮಂತ ಸಂಗ್ರಹದ ಒಂದು ಭಾಗವಾಗಿದೆ.
2014 ರಲ್ಲಿ ಪಂಕಜ್ ಪರಾಖ್ ಅವರ 45 ನೇ ಹುಟ್ಟುಹಬ್ಬಕ್ಕೆ ಈ ದುಬಾರಿ ಶರ್ಟ್ ಅನ್ನು ನಾಸಿಕ್‌ನ ಬಫ್ನಾ ಜ್ಯುವೆಲ್ಲರ್ಸ್‌ನಿಂದ ವಿನ್ಯಾಸಗೊಳಿಸಲಾಗಿತ್ತು. 20 ಆಯ್ದ ಕುಶಲಕರ್ಮಿಗಳ ತಂಡವು ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಶ್ರಮ ವಹಿಸಿ ಈ ಶರ್ಟ್​​​​ ಅನ್ನು ವಿನ್ಯಾಸಗೊಳಿಸಲಾಗಿದೆ. 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಲಾದ ಈ ಶರ್ಟನ್ನು ಒಳಭಾಗದಿಂದ ಆರಾಮದಾಯಕ ಮತ್ತು ದೇಹಕ್ಕೆ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಒಳಭಾಗದಲ್ಲಿ ಬಟ್ಟೆಯನ್ನು ಹೊಂದಿದ್ದು, ಹೊರಭಾಗದಲ್ಲಿ ಚಿನ್ನದಿಂದ ವಿನ್ಯಾಸಗೊಳಿಸಲಾಗಿದೆ. ಇದರ ಹೊರತಾಗಿ ಈ ಶರ್ಟ್ ಅನ್ನು ವಾಶ್​​​ ಮಾಡಬಹುದಾಗಿದೆ. ಇವರ ಈ ದುಬಾರಿ ಶರ್ಟ್​​​ನಿಂದಲೇ 2016 ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − ten =
Remember me
