ಅಹಮದಾಬಾದ್​:ಅತಿವೇಗದಲ್ಲಿದ್ದ ಜಾಗ್ವಾರ್​ ಕಾರೊಂದು ನಿಯಂತ್ರಣ ಕಳೆದುಕೊಂಡು ಜನರತ್ತ ನುಗಿದ್ದ ಪರಿಣಾಮ ಸ್ಥಳದಲ್ಲೇ 9 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಗುಜರಾತಿನ ಅಹಮದಾಬಾದ್​-ಎಸ್​ಜಿ ಹೆದ್ದಾರಿಯಲ್ಲಿ ನಡೆದಿದೆ.
ಎಸ್​ಜಿ ಹೆದ್ದಾರಿಯ ಇಸ್ಕಾನ್​ ಸೇತುವೆ ಮೇಲೆ ದುರ್ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ 1.15ರ ಸುಮಾರಿಗೆ ಟ್ರಕ್​ ಮತ್ತು ಎಸ್​ಯುವಿ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಇದನ್ನು ನೋಡಲು ಕೆಲ ಜನರು ಅಲ್ಲಿ ಸೇರಿದ್ದರು. ಈ ವೇಳೆ ವೇಗವಾಗಿ ಬಂದು ಐಷಾರಾಮಿ ಜಾಗ್ವರ್​ ಕಾರು ಜನರತ್ತ ನುಗ್ಗಿದ್ದರಿಂದ ಓರ್ವ ಪೊಲೀಸ್​ ಸಿಬ್ಬಂದಿ ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಕಣ್ಣೀರಿಟ್ಟು ಬೇಡಿಕೊಂಡರು ಬಿಡದೆ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ದುಷ್ಟರು: ಗ್ಯಾಂಗ್​ರೇಪ್ ಆರೋಪ​
ಈ ಅಪಘಾತದಲ್ಲಿ 13 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಗ್ವರ್​ ಡಿಕ್ಕಿಯ ರಭಸಕ್ಕೆ ಅನೇಕ ಮಂದಿ ಸುಮಾರು 20 ರಿಂದ 25 ಅಡಿಗಳಷ್ಟು ದೂರ ಹಾರಿ ನೆಲಕ್ಕೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಾಗ್ವಾರ್​ ಕಾರು ಗಂಟೆಗೆ 120 ಕಿ.ಮೀ. ವೇಗದಲ್ಲಿತ್ತು. ಜಾಗ್ವಾರ್​ ಕಾರು ಚಾಲಕನಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯ ಬೆನ್ನಲ್ಲೇ ಟ್ರಕ್​ ಚಾಲಕನು ಕೂಡ ಎಸ್ಕೇಪ್​ ಆಗಿದ್ದಾನೆ.(ಏಜೆನ್ಸೀಸ್​)
अहमदाबाद में रफ़्तार ने ली 9 लोगों की जान SG HIGHWAY पर देर रात बहुत बड़ा हादसा
अहमदाबाद के SG HIGHWAY पर बने इस्कॉन ब्रिज पर ये दुर्घटना हुई है जिसमे एक जैगुआर गाडी ने ब्रिज पर खड़े लोगों को रोंध डाला … जिसमे 9 लोगों की मौके पर ही मौत हो गयी (जिनमे एक पुलिस कॉन्स्टेबल और और…pic.twitter.com/rBZVehmycW
— Nirnay Kapoor (@nirnaykapoor)July 20, 2023

ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ

ಸದನಕ್ಕೆ ಶೋಭೆಯಲ್ಲ: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಶಾಸಕರ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 9 =
Remember me
