ಅಹಮದಾಬಾದ್​:ಯಾರಾದರೂ ಅಪರಿಚಿತ ಮಹಿಳೆ ಕರೆ ಮಾಡಿ ಮಾತನಾಡಿದರೆ ತುಂಬಾ ಎಚ್ಚರ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಮೋಹದ ಬಲೆಯಲ್ಲಿ ಬೀಳಿಸಿ ಹಣ ದೋಚುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ವಲ್ಪ ಯಾಮಾರಿದರೂ ಹಣದ ಜೊತೆಗೆ ಮಾನ ಮರ್ಯಾದೆಯು ಹರಾಜು ಆಗಿಬಿಡುತ್ತದೆ ಎಂಬುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ.
ಗುಜರಾತ್​ ಮೂಲದ ಉದ್ಯಮಿಯೊಬ್ಬ, ಮಹಿಳೆಯ ಮೋಹದ ಬಲೆಯಲ್ಲಿ ಸಿಲುಕಿ ಬರೋಬ್ಬರಿ 2.69 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ನಡೆದಿದ್ದು ಕಳೆದ ವರ್ಷ ಆಗಸ್ಟ್​ 8ರಂದು. ನನ್ನ ಹೆಸರು ರಿಯಾ ಶರ್ಮಾ, ಮೋರ್ಬಿ ಮೂಲದವಳು ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಉದ್ಯಮಿಗೆ ಕರೆ ಮಾಡುತ್ತಾಳೆ. ಸಂತ್ರಸ್ತ ಉದ್ಯಮಿಯು ನವೀಕರಿಸಬಹುದಾದ ಶಕ್ತಿಯ ಮೂಲಗಳ ಉದ್ಯಮದಲ್ಲಿ ಪರಿಣತಿ ಹೊಂದಿದ್ದಾರೆ.
ವಿಡಿಯೋ ಕರೆ ಮಾಡುವ ಮಹಿಳೆ, ಉದ್ಯಮಿಯ ಮನವೊಲಿಸಿ, ತನ್ನ ಮೋಹದ ಬಲೆಯಲ್ಲಿ ಬೀಳಿಸಿಕೊಂಡು ಬೆತ್ತಲಾಗುವಂತೆ ಹೇಳುತ್ತಾಳೆ. ಇದನ್ನು ನಂಬಿದ ಉದ್ಯಮಿ ಆಕೆಯ ಮುಂದೆ ಮೊಬೈಲ್​ನಲ್ಲಿ ಬೆತ್ತಲಾಗುತ್ತಾನೆ. ಆಕೆ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದಾಳೆ ಎಂಬ ಅರಿವು ಕೂಡ ಉದ್ಯಮಿಗೆ ಇರುವುದಿಲ್ಲ. ಈ ವೇಳೆ ಅರ್ಧದಲ್ಲೇ ವಿಡಿಯೋ ಕರೆ ಕಡಿತಗೊಳಿಸುತ್ತಾಳೆ. ಬಳಿಕ ಉದ್ಯಮಿಗೆ ಕರೆ ಮಾಡಿ 50 ಸಾವಿರ ಹಣ ಕೊಡುವಂತೆ ಬೇಡಿಕೆ ಇಡುತ್ತಾಳೆ. ಕೊಡದಿದ್ದರೆ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಾಳೆ.
ಮಹಿಳೆಯ ಬ್ಲಾಕ್​ಮೇಲ್​ಗೆ ಹೆದರಿದ ಉದ್ಯಮಿ ಅವಳು ಕೇಳಿದಷ್ಟು ಹಣ ಕೊಡುತ್ತಾನೆ. ಇದಾದ ಕೆಲವು ದಿನಗಳ ಬಳಿಕ ದೆಹಲಿ ಪೊಲೀಸ್​ ಇನ್ಸ್​ಪೆಕ್ಟರ್​ ಗುದ್ದು ಶರ್ಮಾ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಉದ್ಯಮಿಗೆ ಕರೆ ಮಾಡಿ, ನಿಮ್ಮ ಬೆತ್ತಲೆ ವಿಡಿಯೋ ಕ್ಲಿಪ್​ ನನ್ನ ಬಳಿ ಇದೆ. ಈ ಕೂಡಲೇ 3 ಲಕ್ಷ ರೂ. ಹಣ ಕೊಡು ಎಂದು ಬೇಡಿಕೆ ಇಟ್ಟು ಹಣ ಪಡೆಯುತ್ತಾನೆ.
ದೆಹಲಿ ಪೊಲೀಸ್ ಸೈಬರ್ ಸೆಲ್‌ನ ಸದಸ್ಯ ಎಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿ ಕಳೆದ ಆಗಸ್ಟ್ 14 ರಂದು ಉದ್ಯಮಿಗೆ ಕರೆ ಮಾಡಿ 80.97 ಲಕ್ಷ ರೂ.ಗೆ ಬೇಡಿಕೆ ಇಡುತ್ತಾನೆ. ನಿಮ್ಮಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಮತ್ತು ಸಂತ್ರಸ್ತ ಮಹಿಳೆಯ ತಾಯಿ ಕೇಂದ್ರ ತನಿಖಾ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಎಂದು ಬೆದರಿಸಿದ ಬಳಿಕ ಉದ್ಯಮಿ ಮತ್ತೆ ಹಣ ನೀಡಿದ್ದಾರೆ. ಹೀಗೆ ಹಂತ ಹಂತವಾಗಿ ಉದ್ಯಮಿಯಿಂದ 2.69 ಕೋಟಿ ರೂ. ವಸೂಲಿ ಮಾಡಲಾಗಿದೆ.
ಇದೀಗ ಉದ್ಯಮಿ ಪೊಲೀಸ್​ ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಗಾಂಜಾ ಕೇಸ್ ದಾಖಲಿಸುವುದಾಗಿ ಬೆದರಿಸಿ ಪೊಲೀಸರಿಂದ ಹಣ ವಸೂಲಿ? ಕಮಿಷನರ್‌ಗೆ ದೂರು ನೀಡಿದ ಯುವಕ

ಗಂಗಾ ವಿಲಾಸ ಐಷಾರಾಮಿ ನೌಕೆಗೆ ಇಂದು ಪ್ರಧಾನಿ ಚಾಲನೆ; ದೇಶದ ಅತಿ ದೀರ್ಘ ಒಳನಾಡು ಪ್ರಯಾಣ ಶುರು | 3,200 ಕಿ.ಮೀ. ಉದ್ದದ ಮಾರ್ಗ

ವರ್ಚಸ್ಸು ಹೆಚ್ಚಿಸಲು ಬಿಜೆಪಿ ವರಿಷ್ಠರ ಯತ್ನ; ಬೊಮ್ಮಾಯಿಗೆ ರಾಷ್ಟ್ರೀಯ ನಾಯಕರ ಸೂಚನೆ | ಸಚಿವರಿಗೆ ಪತ್ರ ಬರೆದು ಸಲಹೆ ನೀಡಿದ ಸಿಎಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 9 =
Remember me
