ನವದೆಹಲಿ:ಡಿಸೆಂಬರ್ 1 ಮತ್ತು 5ರಂದು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಗುರುವಾರ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 182 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. 38 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಹಾಲಿ ಶಾಸಕರಲ್ಲಿ 69 ಮಂದಿ ಮತ್ತೆ ಟಿಕೆಟ್ ಪಡೆವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಳೆದ 27 ವರ್ಷಗಳಿಂದ ಅಧಿಕಾರದಲ್ಲಿದ್ದು, ಸಹಜ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಮುಖಗಳಿಗೆ ವರಿಷ್ಠರು ಆದ್ಯತೆ ನೀಡಿದ್ದಾರೆ. ಮಾಜಿ ಸಿಎಂ ವಿಜಯ್ ರೂಪಾಣಿ, ಹಿರಿಯ ನಾಯಕ ನಿತಿನ್ ಪಟೇಲ್​ಗೆ ಟಿಕೆಟ್ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಇಬ್ಬರು ನಾಯಕರು ಮೊದಲೇ ಬಹಿರಂಗಪಡಿಸಿದ್ದರು. ಅದೇ ರೀತಿ, ಮಾಜಿ ಸಚಿವ ಆರ್​ಸಿ ಫಾಲ್ದು, ಹಿರಿಯ ನಾಯಕ ಪ್ರದೀಪ್ ಸಿನ್ಹ ಜಡೇಜಾಗೂ ಟಿಕೆಟ್ ತಪ್ಪಿದೆ. ಬುಧವಾರ ರಾತ್ರಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಬಳಿಕ ಪಟ್ಟಿ ಅಂತಿಮಗೊಂಡಿದ್ದು, ಗುರುವಾರ ಬೆಳಗ್ಗೆ ಇದನ್ನು ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಮನಸುಖ್ ಮಾಂಡವೀಯ ದೆಹಲಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮೊದಲ ಪಟ್ಟಿಯಲ್ಲಿ 14 ಮಹಿಳೆಯರು, ಪರಿಶಿಷ್ಟ ಜಾತಿಯ 13 ಮತ್ತು ಪರಿಶಿಷ್ಟ ಪಂಗಡದ 24 ಮಂದಿಗೆ ಟಿಕೆಟ್ ನೀಡಲಾಗಿದೆ.
ಲಹರ್ ಸಿಂಗ್ ಟ್ವೀಟ್ ಸಂಚಲನ
ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರದ ಹಿತಾಸಕ್ತಿಯಿಂದ ರಾಜ್ಯದ ಹಿರಿಯ ನಾಯಕರು ಕಿರಿಯರಿಗೆ ದಾರಿ ಮಾಡಿಕೊಡಬೇಕೆಂದು ರಾಜ್ಯಸಭಾ ಸದಸ್ಯ ಲಹರ್​ಸಿಂಗ್ ಸಿರೋಯಾ ಮಾಡಿರುವ ಟ್ವೀಟ್ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಗುಜರಾತ್​ನಲ್ಲಿ ಬಿಜೆಪಿಯ ಹಿರಿಯರು ಚುನಾವಣೆಗೆ ಸ್ಪರ್ಧಿಸದಿರುವ ನಿರ್ಧಾರ ಕರ್ನಾಟಕದಲ್ಲಿನ ನಾಯಕರಿಗೂ ಮಾದರಿಯಾಗಲಿ ಎಂದು ಲಹರ್​ಸಿಂಗ್ ಹೇಳಿದ್ದಾರೆ. ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾಣಿ, ಮಾಜಿ ಡಿಸಿಎಂ ನಿತಿನ್ ಪಟೇಲ್ ಹಾಗೂ ಮಾಜಿ ಸಚಿವರಾದ ಭೂಪೇಂದ್ರ ಸಿನ್ಹ ಮತ್ತು ಪ್ರದೀಪ್ ಸಿನ್ಹ ಜಡೇಜಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಮುಂದಿನ ಪೀಳಿಗೆಯ ಬದಲಾವಣೆಗೆ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಶ್ಲಾಘನೀಯ. ಇನ್ನು ಕೆಲ ತಿಂಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಇದು ರಾಜ್ಯಕ್ಕೂ ಮಾದರಿಯಾಗಬೇಕು ಎಂದಿದ್ದಾರೆ.
ಜಡೇಜಾ ಪತ್ನಿಗೆ ಟಿಕೆಟ್
ಭಾರತ ಕ್ರಿಕೆಟ್ ತಂಡದ ಆಲ್​ರೌಂಡರ್, ಗುಜರಾತಿನ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಜಾಮ್ಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಘೊಷಿಸಿದೆ. ಟಿಕೆಟ್ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ರವೀಂದ್ರ ಜಡೇಜಾ, ಪತ್ನಿಯ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ ಜನಸೇವೆಗೆ ಅವಕಾಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾಗೆ ಧನ್ಯವಾದ. ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಪತ್ನಿಗೂ ಅಭಿನಂದನೆಗಳು ಎಂದು ಶುಭಹಾರೈಸಿದ್ದಾರೆ. ರಿವಾಬಾ ಜಡೇಜಾ ಎಂಜಿನಿಯರ್ ಪದವಿ ಪಡೆದಿದ್ದು, 2016ರಂದು ರವೀಂದ್ರ ಜಡೇಜಾರನ್ನು ಮದುವೆಯಾದರು.
ಮಾವನ ಕ್ಷೇತ್ರಕ್ಕೆ ಸೊಸೆ ಅಭ್ಯರ್ಥಿ
ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾಗಿದ್ದ ಮೈನ್​ಪುರಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮುಲಾಯಂ ಸೊಸೆ ಡಿಂಪಲ್ ಯಾದವ್ ಹೆಸರನ್ನು ಘೊಷಿಸಲಾಗಿದೆ. ಕ್ಷೇತ್ರಕ್ಕೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ಕನೌಜ್ ಲೋಕಸಭೆ ಕ್ಷೇತ್ರದಿಂದ 2 ಬಾರಿ ಸಂಸದೆಯಾಗಿದ್ದ ಅಖಿಲೇಶ್ ಯಾದವ್ ಪತ್ನಿ ಡಿಂಪಲ್, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸುಬ್ರತ್ ಪಾಠಕ್ ವಿರುದ್ಧ 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.
ಜನ ರಕ್ಷಕನಿಗೆ ಮನ್ನಣೆ
ರಾಜ್ಯದ ಮೊರ್ಬಿ ಜಿಲ್ಲೆಯ ತೂಗು ಸೇತುವೆ ಕುಸಿದ ಬಳಿಕ ಮಚ್ಚು ನದಿಯಲ್ಲಿ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ಅನೇಕರನ್ನು ಕಾಪಾಡಿದ್ದ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್​ನ ಉಡುಗೊರೆ ನೀಡಿದೆ. ಇಲ್ಲಿನ ಹಾಲಿ ಶಾಸಕ, ಪಂಚಾಯತ್ ಮತ್ತು ಕಾರ್ವಿುಕ ಸಚಿವ ಬೃಜೇಶ್ ಮೆರ್ಜಾಗೆ ಟಿಕೆಟ್ ತಪ್ಪಿದೆ. ದುರಂತ ಸ್ಥಳಕ್ಕೆ ತೆರಳಿ ಕೊನೆಯವರೆಗೂ ಅಲ್ಲಿಯೇ ಇದ್ದ ಕಾಂತಿಲಾಲ್, ಅನೇಕ ಜೀವಗಳನ್ನು ಉಳಿಸಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − fourteen =
Remember me
