ಸೂರತ್:ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ ಹಾಗೂ ಎಂಟು ಅಭ್ಯರ್ಥಿಗಳು ಚುನಾವಣಾ ಅಖಾಡದಿಂದ ಹಿಂದೆ ಸರಿದ ಕಾರಣದಿಂದ ಗುಜರಾತ್​ನ ಸೂರತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಕೇಶ್​ ದಲಾಲ್​ ಅವರು ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಅಕ್ರಮ ಗೋ ಸಾಗಾಟ ಮಾಡ್ತಿದ್ದ ಲಾರಿ ಚಾಲಕ, ಕ್ಲೀನರ್​ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!
ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಿದೆ.
#WATCH| Gujarat: Mukesh Dalal, BJP's candidate from the Surat Lok Sabha seat collects his winning certificate after he was elected unopposed
The Congress candidate's form was rejected by the Returning Officer, the other eight candidates for the seat withdrew their nominations.…pic.twitter.com/Uzslcbj8aD
— ANI (@ANI)April 22, 2024

ಈ ಕುರಿತು ಬಿಜೆಪಿ ಗುಜರಾತ್​ ರಾಜ್ಯ ಘಟಕದ ಅಧ್ಯಕ್ಷ ಪಕ್ಷದ ಗುಜರಾತ್ ಘಟಕದ ಮುಖ್ಯಸ್ಥ ಸಿಆರ್ ಪಾಟೀಲ್ ಅವರು ಸೋಮವಾರ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಮೊದಲ ಕಮಲವನ್ನು ಉಡುಗೊರೆಯಾಗಿ ಸೂರತ್ ನೀಡಿದೆ. ಅವಿರೋಧವಾಗಿ ಆಯ್ಕೆಯಾದ ನಮ್ಮ ಪಕ್ಷದ ಅಭ್ಯರ್ಥಿ ಮುಕೇಶ್ ಅವರಿಗೆ ಅಭಿನಂದನೆಗಳು ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿಯ ದಲಾಲ್ ಮತ್ತು ಕಾಂಗ್ರೆಸ್ಸಿನ ಕುಂಭಾನಿ ಹೊರತುಪಡಿಸಿ, ಸೂರತ್ ಲೋಕಸಭಾ ಸ್ಥಾನಕ್ಕೆ ಇನ್ನೂ ಎಂಟು ಮಂದಿ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದರು. ಬಹುಜನ ಸಮಾಜ ಪಾರ್ಟಿಯ ಪ್ಯಾರೇಲಾಲ್ ಭಾರತಿ ಕಣದಿಂದ ಹಿಂದಕ್ಕೆ ಸರಿದರು. ಇದರ ಜೊತೆಗೆ, ಏಳು ಇತರರು ಮತ್ತು ಪಕ್ಷೇತರರು ಕೂಡಾ ನಾಮಪತ್ರ ಹಿಂದಕ್ಕೆ ಪಡೆದ ನಾಟಕೀಯ ಬೆಳವಣಿಗೆ ನಡೆದಿದೆ.
ಇದು ದೇಶದ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸಂಸದರಾಗಿ ಆಯ್ಕೆಯಾದ ಕ್ಷೇತ್ರವಾಗಿದೆ. 1989ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಅಂದರೆ ಒಮ್ಮೆಯೂ ಕಾಂಗ್ರೆಸ್​ ಗೆದ್ದ ಇತಿಹಾಸವೇ ಇಲ್ಲ. ಬಿಜೆಪಿಯ ಅಭ್ಯರ್ಥಿ ಮುಕೇಶ್ ದಲಾಲ್ ಗೆಲುವಿನ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಕೇಂದ್ರ ಚುನಾವಣಾಧಿಕಾರಿಗಳು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಹಿಂದೂ ಹುಡುಗಿಯರನ್ನು ಲವ್ ​ಯಾಕೆ ಮಾಡ್ತೀರಿ..? ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ: ಪ್ರಥಮ್​ ಆಕ್ರೋಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
