ಗಾಂಧಿನಗರ:ಗುಜರಾತಿನ 14ನೇ ಸಿಎಂ ಆಗಿದ್ದ ವಿಜಯ್​ ರೂಪಾನಿ ಅವರು ತಮ್ಮ ಅಧಿಕಾರಾವಧಿ ಪೂರೈಸುವುದಕ್ಕೆ ಒಂದು ವರ್ಷ ಮೊದಲೇ ರಾಜೀನಾಮೆ ನೀಡಿದ್ದಾರೆ. 2022 ರ ಡಿಸೆಂಬರ್​ನಲ್ಲಿ ನಡೆಯಬೇಕಾದ ಮುಂದಿನ ವಿಧಾನಸಭಾ ಚುನಾವಣೆಗೆ 15 ತಿಂಗಳ ಮುಂಚೆ, ಬಿಜೆಪಿ ವರಿಷ್ಠರು, ಈ ಬದಲಾವಣೆಗೆ ಮುಂದಾಗಿದ್ದಾರೆ.
ಕರ್ನಾಟಕದಲ್ಲಿ 78 ವರ್ಷ ತುಂಬಿದ್ದ ಬಿ.ಎಸ್​.ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿ, ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಗಾದಿ ನೀಡಿದ ರೀತಿಯಲ್ಲೇ, ಮುಂದಿನ ಚುನಾವಣಾ ಹಿತದೃಷ್ಟಿಯಿಂದ ಗುಜರಾತಿನಲ್ಲೂ ಯುವ ನಾಯಕತ್ವಕ್ಕೆ ದಾರಿ ಮಾಡುವ ಪ್ರಯತ್ನವನ್ನು ಬಿಜೆಪಿ ಹೈಕಮ್ಯಾಂಡ್​ ಮಾಡುತ್ತಿರುವ ಹಾಗಿದೆ.
ಇದನ್ನೂ ಓದಿ:ಬೆಸ್ಕಾಂನಲ್ಲಿ ವಿಚಾರಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜೀನಾಮೆ ನೀಡುತ್ತಾ, 65 ವರ್ಷದ ರೂಪಾನಿ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೊಸ ಉತ್ಸಾಹ ಮತ್ತು ಹೊಸ ಶಕ್ತಿಯೊಂದಿಗೆ ಗುಜರಾತಿನ ಅಭಿವೃದ್ಧಿಯ ಪ್ರಯಾಣ ಮುಂದುವರಿಯಲಿದೆ ಎಂದು ಆಶಿಸುತ್ತೇನೆ” ಎಂದಿದ್ದಾರೆ. ಯಡಿಯೂರಪ್ಪ ಅವರಂತೆಯೇ ಪಕ್ಷ ನಿರ್ಮಾಣ ಕಾರ್ಯದಲ್ಲಿ ವರಿಷ್ಠರು ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಮುಂದುವರಿಯುವುದಾಗಿ ಹೇಳಿದ್ದಾರೆ.
ಈಗ ಮೂಡಿರುವ ಪ್ರಶ್ನೆ, ಗುಜರಾತಿನ ಮುಂದಿನ ಸಿಎಂ ಯಾರು ಎಂಬುದು. ಕೇಂದ್ರ ಆರೋಗ್ಯ ಸಚಿವ ಮನಸೂಖ್​ ಮಾಂಡವೀಯ, ಗುಜರಾತ್​ ಡೆಪ್ಯುಟಿ ಸಿಎಂ ನಿತಿನ್​ ಪಟೇಲ್​, ಗುಜರಾತ್​ ಬಿಜೆಪಿ ಅಧ್ಯಕ್ಷ ಸಿ.ಆರ್​.ಪಾಟೀಲ್ ಪ್ರಮುಖ ಸಿಎಂ ಅಭ್ಯರ್ಥಿಗಳಾಗಿದ್ದಾರೆ. ಜೊತೆಗೆ, ಬಿಜೆಪಿ ಉಪಾಧ್ಯಕ್ಷ ಗೋರ್ಧನ್​ ಜಡಾಫಿಯ ಮತ್ತು ರಾಜ್ಯಸಭಾ ಸದಸ್ಯ ಪರ್ಸೋತ್ತಮ್​ ರೂಪಾಲ ಅವರ ಹೆಸರುಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್​ ರಾಜೀನಾಮೆ! ಅವಧಿಗೂ ಮೊದಲೇ ರಾಜೀನಾಮೆ ಕೊಟ್ಟಿದ್ದೇಕೆ?
ರಾಜ್ಯದಲ್ಲಿ ಶೀಘ್ರವಾಗಿ ಹೊಸ ಸಿಎಂ ಆಯ್ಕೆ ನಡೆಯಲಿದ್ದು, ಇದಕ್ಕಾಗಿ ಇಂದು ರಾತ್ರಿಯೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಹೀಗಾಗಿ ಎಲ್ಲಾ ಶಾಸಕರೂ ಅಹಮದಾಬಾದ್​ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಬೆಂಗಳೂರಿಗರೇ, ಎಚ್ಚರ! 3 ತಿಂಗಳಲ್ಲಿ 6 ಪಟ್ಟು ಹೆಚ್ಚಿದೆ ಡೆಂಘೆ ಜ್ವರ

ಕಾಮುಕನಿಂದ ಕ್ರೂರ ಹಿಂಸೆ ಅನುಭವಿಸಿದ ಮುಂಬೈ ಮಹಿಳೆ ಸಾವು

ಹರಿಯಾಣ: ರೈತರ ಪ್ರತಿಭಟನೆ ಅಂತ್ಯ; ಲಾಠಿಚಾರ್ಜ್​ ಪ್ರಕರಣದ ತನಿಖೆ ಆದೇಶಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 19 =
Remember me
