ಅಹಮದಾಬಾದ್:ಹಿಂದೂ ಹುಡುಗಿಯರ ತಂಟೆಗೆ ಬರದಂತೆ ಹಾಗೆಯೇ ಗೋ ಹತ್ಯೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್ ವೈಷ್ಣೋದೇವಿ ವೃತ್ತದ ಬಳಿ ಮಾಲಧಾರಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಹುಡುಗಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸುವ ಹಾಗೂ ಅವರೊಂದಿಗೆ ಓಡಿಹೋಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಗೋ ಹತ್ಯೆ ಮಾಡುವವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಸರ್ಕಾರವು ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಗುಜರಾತ್​ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ 2021ನ್ನು ಏಪ್ರಿಲ್​ ತಿಂಗಳಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಹಾಗೇ, ಜೂನ್​ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದರ ಅನ್ವಯ ಮದುವೆ ಅಥವಾ ಇನ್ಯಾವುದೇ ವಿಧಾನದ ಮೂಲಕ ಬಲವಂತದ ಮತಾಂತರ ಕ್ರಿಯೆ ನಡೆಸಿದರೆ, ಕಠಿಣ ಶಿಕ್ಷೆಯಿದೆ. ಆದರೆ ಈ ಕಾನೂನಿನಲ್ಲಿರುವ ಕೆಲವು ವಿವಾದಾತ್ಮಕ ಅಂಶಗಳಿಗೆ ಕಳೆದ ತಿಂಗಳು ಗುಜರಾತ್ ಹೈಕೋರ್ಟ್ ತಡೆ ನೀಡಿದೆ.
ಹಬ್ಬದ ದಿನವೇ ದುರಂತ: ಜವರಾಯನಾಗಿ ಬಂದ ಲಾರಿಗೆ, ಇಬ್ಬರು ಬೈಕ್ ಸವಾರರು ಬಲಿ

ಹೆದ್ದಾರಿಯಲ್ಲೇ ಇಳಿದ ವಾಯುಪಡೆ ವಿಮಾನ!; ಪಾಕ್​ ಗಡಿ ಸಮೀಪ ಯಶಸ್ವಿ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
