ಅಹಮದಾಬಾದ್​:ಕಳೆದ ವರ್ಷ ಅಮೆರಿಕದ ಟೆಕ್ಸಾಸ್​ನಲ್ಲಿ ನಡೆದ ಅದ್ಧೂರಿ “ಹೌಡಿ ಮೋದಿ” ಕಾರ್ಯಕ್ರಮದ ರೀತಿಯಲ್ಲೇ ಗುಜರಾತಿನ ಅಹಮದಾಬಾದ್​ನಲ್ಲಿ “ನಮಸ್ತೆ ಟ್ರಂಪ್​” ವೈಭಯುತ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಹಲವು ತಿಂಗಳುಗಳ ಬಳಿಕ ಮತ್ತೊಮ್ಮೆ ದಿಗ್ಗಜ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಕುತೂಹಲ ಗರಿಗೆದರಿದೆ.
ಫೆ. 24ರಂದು ಪತ್ನಿ ಮೆಲೆನಿಯಾ ಟ್ರಂಪ್​ ಜತೆ ಡೊನಾಲ್ಡ್​ ಟ್ರಂಪ್ ಭಾರತಕ್ಕೆ ಬಂದಿಳಿಯಲಿದ್ದಾರೆ. ಗುಜರಾತಿನ ಅಹಮದಾಬಾದ್ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಟ್ರಂಪ್​ ದಂಪತಿಯನ್ನು ಮೊಟೇರಾದಲ್ಲಿ ನಿರ್ಮಾಣವಾಗಿರುವ ವಿಶ್ವದ ಬಹುದೊಡ್ಡ ಕ್ರಿಕೆಟ್​ ಕ್ರೀಡಾಂಗಣದ ಉದ್ಘಾಟನೆಗೆ ಅದ್ಧೂರಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಅಂದಾಜು ನೂರು ಕೋಟಿ ರೂ. ಖರ್ಚಾಗಲಿದೆ ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದು, ಸಮಾರಂಭವನ್ನು ಸ್ಮರಣೀಯವಾಗಿಸಲು ಸಾಕಷ್ಟು ಸಿದ್ಧತೆಯನ್ನು ಅಹಮದಾಬಾದ್​ನಲ್ಲಿ ಮಾಡಿಕೊಳ್ಳಲಾಗುತ್ತಿದೆ.
ಮೊಟೇರಾ ಕ್ರೀಡಾಂಗಣದ ಎದುರಿಗಿರುವ ಗೋಡೆಯ ಮೇಲೆ ಪ್ರಧಾನಿ ಮೋದಿ-ಅಧ್ಯಕ್ಷ ಟ್ರಂಪ್​ ಚಿತ್ರವನ್ನು ಬಿಡಿಸಲಾಗಿದೆ. ಅಲ್ಲದೆ, ಅಮೆರಿಕ-ಇಂಡಿಯಾ ಕುರಿತಾದ ಕೆಲ ಘೋಷಣೆಗಳನ್ನು ವರ್ಣಮಯವಾಗಿ ಬರೆಯಲಾಗಿದೆ. ಇಷ್ಟೇ ಅಲ್ಲದೆ ಮೋದಿ, ಟ್ರಂಪ್​ ಹಾಗೂ ಮೆಲೆನಿಯಾ ಟ್ರಂಪ್​ ಪೋಸ್ಟರ್​ಗಳನ್ನು ಅಳವಡಿಸಲಾಗಿದೆ. ಪೋಸ್ಟರ್​ನಲ್ಲಿ ಉತ್ತಮ ಭವಿಷ್ಯಕ್ಕಾಗಿ ಪ್ರಬಲವಾದ ಸ್ನೇಹ ಎಂದು ಬರೆಯಲಾಗಿದೆ. ಹೀಗೆ ಅಹಮದಾಬಾದ್​ನಗರ ನಮಸ್ತೆ ಟ್ರಂಪ್​ ಕಾರ್ಯಕ್ರಮಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಅದರ ಝಲಕ್​ ಈ ಕೆಳಕಂಡಂತಿದೆ.(ಏಜೆನ್ಸೀಸ್​)ಫೋ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 4 =
Remember me
