ನವದೆಹಲಿ:ಅಮರಿಕದಲ್ಲಿ ಸಂತೋಷವಾಗಿ ಬಾಳಬಹುದು ಅಂತ ಭಾರತ ತೊರೆದು ಅನಧಿಕೃತವಾಗಿ ಅಮೆರಿಕ ಪ್ರವೇಶಿಸಲು ಪ್ಲಾನ್​ ಮಾಡಿಕೊಂಡಿದ್ದ ಗುಜರಾತ್​ ಮೂಲದ ಯುವದಂಪತಿ ಇದೀಗ ಭಾರೀ ಅಪಾಯದಲ್ಲಿ ಸಿಲುಕಿದ್ದಾರೆ. ಪಾಕಿಸ್ತಾನ ಏಜೆಂಟ್​ ಕೈಯಲ್ಲಿ ದಂಪತಿ ಸಿಕ್ಕಿಬಿದ್ದಿದ್ದು, ಅವರನ್ನು ಇರಾನ್​ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ.
ಗುಜರಾತಿನ ಅಹಮದಾಬಾದ್​ ನಗರದ ನರೋದಾ ಏರಿಯಾದ ದಂಪತಿ ಇರಾನ್​ನಲ್ಲಿ ಪಾಕ್​ ಏಜೆಂಟ್​ ಕೈಯಲ್ಲಿ ಸಿಲುಕಿದ್ದು, ಈ ಪ್ರಕರಣ ಸಂಬಂಧ ನರೋದಾ ಏರಿಯಾದ ಕೃಷ್ಣನಗರ ಪೊಲೀಸ್​ ಠಾಣೆ ಮತ್ತು ಅಹಮದಾಬಾದ್​ ನಗರದ ಅಪರಾಧ ವಿಭಾಗದಲ್ಲಿ ಎಫ್​ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಡೆಪ್ಯುಟಿ ಕಮಿಷನರ್​ ಆಫ್​ ಪೊಲೀಸ್​ ಚೈತನ್ಯ ಮಂಡಲಿಕ್​ ಅವರು ತಿಳಿಸಿದ್ದಾರೆ. ​
ಈ ಘಟನೆ ದೇಶದಿಂದ ಹೊರಗಡೆ ನಡೆದಿರುವುದರಿಂದ ಅಪರಾಧ ವಿಭಾಗ ಇರಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪೂಣ ಮಾಹಿತಿಯೊಂದಿಗೆ ಸಂಪರ್ಕಿಸಲಿದೆ. ಆದಷ್ಟು ಬೇಗ ದಂಪತಿಯ ಬಿಡುಗಡೆಗೆ ಪ್ರಯತ್ನಿಸುತ್ತೇವೆ ಎಂದು ಚೈತನ್ಯ ಮಂಡಲಿಕ್​ ಹೇಳಿದರು.
ಸಿಕ್ಕಿಬಿದ್ದಿರುವ ದಂಪತಿಯನ್ನು ಪಂಕಜ್​ ಪಟೇಲ್​ ಮತ್ತು ಪತ್ನಿ ನಿಶಾ ಪಟೇಲ್​ ಎಂದು ಗುರುತಿಸಲಾಗಿದೆ. ಇಬ್ಬರು ವಯಸ್ಸು 29. ಅಮೆರಿಕದಲ್ಲಿ ಸಂತೋಷವಾಗಿ ಬದುಕುಬಹುದು ಅಂತ ಅಕ್ರಮವಾಗಿ ಅಮೆರಿಕ ಪ್ರವೇಶ ಮಾಡಲು ದಂಪತಿ ಬಯಸಿದ್ದರು. ಬಳಿಕ ಹೈದರಾಬಾದ್​ ಮೂಲದ ಏಜೆಂಟ್​ ಅನ್ನು ಸಂಪರ್ಕಿಸಿದ್ದರು. ಆತ ಇಬ್ಬರಿಗೂ ವಿಮಾನ ಟಿಕೆಟ್​ ವ್ಯವಸ್ಥೆ ಮಾಡಿಕೊಟ್ಟಿದ್ದನು.
ಏಜೆಂಟ್​ ಯೋಜನೆಯ ಪ್ರಕಾರ, ದಂಪತಿ ಇರಾನ್‌ನ ಟೆಹ್ರಾನ್‌ಗೆ ಬಂದಿಳಿಯಬೇಕಿತ್ತು. ನಂತರ ಆತನ ಸೂಚನೆಗಳ ಪ್ರಕಾರ ಮುಂದುವರಿಯಬೇಕಿತ್ತು. ಆದಾಗ್ಯೂ ಕೆಲವು ದಿನಗಳ ಹಿಂದೆ ತೆಹ್ರಾನ್​ನಲ್ಲಿ ಲ್ಯಾಂಡ್​ ಆದ ಬಳಿಕ, ಓರ್ವ ಪಾಕಿಸ್ತಾನಿ ಏಜೆಂಟ್​ ಬಂದು ಅವರಿಬ್ಬರನ್ನು ಹೋಟೆಲ್​ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನಿ ಏಜೆಂಟ್ ಮತ್ತು ಅವನ ಸಹಚರರು ಪಂಕಜ್ ಪಟೇಲ್ ಅವರನ್ನು ಥಳಿಸಿದ್ದಾರೆ ಮತ್ತು ಅವರ ಸಂಬಂಧಿಕರಿಗೆ ವೀಡಿಯೊವನ್ನು ಕಳುಹಿಸಿದ್ದಾರೆ. ದಂಪತಿಯನ್ನು ಬಿಡುಗಡೆ ಮಾಡಲು ಅವರು ದೊಡ್ಡ ಮೊತ್ತದ ಹಣವನ್ನೇ ಕೇಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಸಂಕಷ್ಟದಲ್ಲಿ ಸಿಲುಕಿರುವ ದಂಪತಿಯನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ವ ಪ್ರಯತ್ನ ನಡೆಯುತ್ತಿದೆ.(ಏಜೆನ್ಸೀಸ್​)
ನಿಮ್ಮ ಉಚಿತ ಖಚಿತ ನಿಶ್ಚಿತ ಬಟಾಬಯಲಾಗಿದೆ: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: 8 ದಿನದಲ್ಲಿ 3.63 ಕೋಟಿಗೂ ಅಧಿಕ ಮಹಿಳೆಯರ ಪ್ರಯಾಣ, ಖರ್ಚಾಗಿದ್ದೆಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
