ಅಹಮದಾಬಾದ್​ (ಗುಜರಾತ್​):ಕರೊನಾ ಸೋಂಕಿತರೊಬ್ಬರು ಮೃತದೇಹವು ಅಹಮದಾಬಾದ್​ನ ದಾನಿಲಿಮ್ದಾ ಏರಿಯಾದ ಬಸ್​​ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದಕ್ಕೆಲ್ಲಾ ಕಾರಣ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೊಲೀಸರು ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.
ಮೃತದೇಹ ಬಸ್​ ನಿಲ್ದಾಣದಲ್ಲಿ ಕಂಡುಬಂದಿದ್ದು ಹೇಗೆ ಎಂಬುದರ ತನಿಖೆಗೆ ಗುಜರಾತ್​ ಸರ್ಕಾರ ಆದೇಶಿಸಿದ್ದು, ಸಿಎಂ ವಿಜಯ್​ ರೂಪಾಣಿ ಅವರು ಮಾಜಿ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಜೆ.ಪಿ. ಗುಪ್ತಾ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಿದ್ದು, 24 ಗಂಟೆಯೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ:ಸೌದೆ ತರಲು ಹೋಗಿದ್ದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್​ ಮಾಡಿದ ಕಾಮುಕರು
ಛಾಗನ್​ ಮಕ್ವಾನ (67) ಎಂಬಾತ ಅಹಮದಾಬದ್​ ಜಿಲ್ಲೆಯ ಕೋವಿಡ್​-19 ಆಸ್ಪತ್ರೆಗೆ ಕರೊನಾ ಪಾಸಿಟಿವ್​ ಹಿನ್ನೆಲೆಯಲ್ಲಿ ಮೇ 13ರಂದು ದಾಖಲಾಗಿದ್ದರು. ಅವರ ಕುಟುಂಬವನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು.
ಇದೀಗ ಮಕ್ವಾನ ಅವರ ಮೃತದೇಹ ಬಿಆರ್​ಟಿಎಸ್​ ಬಸ್​ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಭದ್ರತಾ ಸಿಬ್ಬಂದಿ ಮೃತದೇಹ ಕಂಡು ಪೊಲೀಸರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮೃತದೇಹವನ್ನು ಪರೀಕ್ಷೆಗಾಗಿ ಪೊಲೀಸರು ಬೇರೋಂದು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮೃತನ ಪ್ಯಾಕೆಟ್​ನಲ್ಲಿದ್ದ ನಂಬರ್​ ಮೂಲಕ ಕುಟುಂಬದವರನ್ನು ಸಂಪರ್ಕಿಸಿದರು. ಆ ಬಳಿಕವೇ ಶವಪರೀಕ್ಷೆ ನಡೆಸಲಾಯಿತು ಎಂದು ಮಕ್ವಾನಾ ಸಹೋದರ ಗೋವಿಂದ ಅವರು ತಿಳಿಸಿದ್ದಾರೆ.
ಮಕ್ವಾನ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಆಸ್ಪತ್ರೆ ಸಿಬ್ಬಂದಿ ವಿಫಲವಾದರು. ಪೊಲೀಸರು ಕೂಡ ವಿಚಾರಣೆ ನಡೆಸಲಿಲ್ಲ. ಎಸ್​ಐಟಿ ತನಿಖೆಗೆ ನೀಡಲು ಪತ್ರ ಬರೆದಿದ್ದೇವೆ ಎಂದು ಬಿಜೆಪಿ ಶಾಸಕ ಗಿರೀಶ್​ ಪಾರ್ಮರ್​ ಸಹ ಆರೋಪಿಸಿದ್ದಾರೆ.
ಇದನ್ನೂ ಓದಿ:ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?
ಮಕ್ವಾನ್​ ಅವರನ್ನು ಹೋಮ್​ ಕ್ವಾರಂಟೈನ್​ನಲ್ಲಿ ಇಡುವುದು ಸೂಕ್ತ ಎನಿಸಿತು. ಆತನಿಗೆ ಎಲ್ಲವನ್ನು ತಿಳಿಸಿ ಮನೆಗೆ ಹೋಗಲು ಹೇಳಿದ್ದೆವು. ಆದರೆ, ಆತನ ಜೀವನ ಹೇಗೆ ಕೊನೆಯಾಯಿತು ಎಂದು ನಮಗೆ ತಿಳಿದಿಲ್ಲ ಎಂದು ವೈದ್ಯರೊಬ್ಬ ಸ್ಪಷ್ಟನೆ ನೀಡಿದ್ದಾರೆ.(ಏಜೆನ್ಸೀಸ್​)
ಕರೊನಾ ವಿಚಾರದಲ್ಲಿ ಅಧಿಕಾರಿಗಳಿಬ್ಬರ ಟಾಕ್​ ಫೈಟ್​​ ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fifteen =
Remember me
