ನವದೆಹಲಿ:ಗುಜರಾತ್​ ಮತ್ತು ಹಿಮಾಚಲಪ್ರದೇಶದ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ಸದ್ಯದ ಟ್ರೆಂಡ್​ ಪ್ರಕಾರ ಎರಡೂ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಮುನ್ನಡೆ ಸಾಧಿಸಿದ್ದು, ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಿದೆ.
ಬೆಳಗ್ಗೆ 8 ಗಂಟೆಗೆ ಮತಎಣಿಕೆ ಪ್ರಕ್ರಿಯೆ ಆರಂಭವಾಯಿತು. ಮೊದಲಿನಿಂದಲೂ ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸುತ್ತಾ ಬರುತ್ತಿದೆ. ಅದರಲ್ಲೂ ಗುಜರಾತ್​ನಲ್ಲಿ ಅಧಿಕಾರ ರಚನೆಗೆ ಬೇಕಾದ ಮೆಜಾರಿಟಿ ನಂಬರ್​ ಅನ್ನು ದಾಟಿ ದಾಖಲೆಯ ಗೆಲುವಿನತ್ತ ಬಿಜೆಪಿ ಮುನ್ನುಗ್ಗುತ್ತಿದೆ.
ಬೆಳಗ್ಗೆ 9 ಗಂಟೆಯವರೆಗೆ ನಡೆದ ಮತಎಣಿಕೆಯ ಟ್ರೆಂಡ್​ ಪ್ರಕಾರ ಗುಜರಾತ್​ನಲ್ಲಿ ಬಿಜೆಪಿ 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್​ 48 ಹಾಗೂ ಎಎಪಿ 3ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, 10.30ರವರೆಗೆ ನಡೆದ ಮತಎಣಿಕೆಯ ಪ್ರಕಾರ ಬಿಜೆಪಿ ಭಾರಿ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಬಿಜೆಪಿ 156 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್​ 16 ಮತ್ತು ಎಎಪಿ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆರಂಭದಲ್ಲಿ 50 ಸ್ಥಾನಗಳಲ್ಲಿ ಮುಂದಿದ್ದ ಕಾಂಗ್ರೆಸ್​ ದಿಢೀರನೇ ಕುಸಿದಿದ್ದು, ಮತ್ತಮ್ಮೆ ಗುಜರಾತ್​ನಲ್ಲಿ ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಬಿಜೆಪಿ 34 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್​ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಇದೀಗ ಬಂದಿರುವ ಮಾಹಿತಿ ಪ್ರಕಾರ ಸ್ಥಾನ ಬದಲಾವಣೆಯಲ್ಲಿ ಹೆಚ್ಚಿನ ವ್ಯತ್ಯಾಸವೇನು ಕಂಡಿಲ್ಲ. ಆದರೆ, ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್​ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 29 ಸ್ಥಾನ ಹಾಗೂ ಕಾಂಗ್ರೆಸ್​ 34 ಸ್ಥಾನಗಳಲ್ಲಿ ಮುಂದಿದೆ. ಎರಡೂ ಪಕ್ಷಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಒಂದು ವೇಳೆ ಟ್ರೆಂಡ್​ ಹೀಗೆ ಮುಂದುವರಿದರೆ, ಹಿಮಾಚಲ ಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಪಕ್ಷೇತರರು ಅಧಿಕಾರ ರಚಿಸುವಲ್ಲಿ ಎರಡೂ ಪಕ್ಷಗಳಿಗೆ ನಿರ್ಣಾಯಕರಾಗುತ್ತಾರೆ.
ಡಿ.1 ಮತ್ತು 5ರಂದು ಗುಜರಾತ್​ನ 182 ವಿಧಾನಸಭಾ ಸೀಟುಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, 7ನೇ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿ ಬಿಜೆಪಿಯಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂಬ ಕುತೂಹಲ ಗರಿಗೆದರಿದೆ. ಗುಜರಾತ್​ನಲ್ಲಿ ಅಧಿಕಾರ ಹಿಡಿಯಲು 92 ಸ್ಥಾನಗಳ ಬಹುಮತ ಸಾಧಿಸಬೇಕಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ನವಂಬರ್​ 12ರಂದು ಒಂದು ಹಂತದಲ್ಲಿ 68 ಸ್ಥಾನಗಳಿಗೆ ಮತದಾನ ನಡೆದಿದ್ದು, ಅಧಿಕಾರ ರಚನೆಗೆ 35 ಸ್ಥಾನಗಳಲ್ಲಿ ಗೆಲ್ಲುವ ಅವಶ್ಯಕತೆ ಇದೆ.(ಏಜೆನ್ಸೀಸ್​)
LIVE| ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿಗಾಗಿ ನೇರಪ್ರಸಾರ ವೀಕ್ಷಿಸಿ

ಚುನಾವಣಾ ಫಲಿತಾಂಶ: ಗುಜರಾತ್​ನಲ್ಲಿ BJP ಭರ್ಜರಿ ಮುನ್ನಡೆ, ಹಿ. ಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಟಫ್​ ಫೈಟ್​, AAPಗೆ ನಿರಾಸೆ

ಮಹಾರಾಷ್ಟ್ರ ಆಯ್ತು ಈಗ ತಮಿಳುನಾಡಿನಲ್ಲೂ ಕಿರಿಕ್: ಕಿಡಿಗೇಡಿಗಳಿಂದ ಕರ್ನಾಟಕದ ವಾಹನದ ಮೇಲೆ ಕಲ್ಲು ತೂರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
