ಭರೂಚ್:ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನರು ಮೃತಪಟ್ಟಿರುವ ಘಟನೆ ಗುಜರಾತ್​ನ ಭರೂಚ್ ಜಿಲ್ಲೆಯ ವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಹತ್ತಿರ ನಡೆದಿದೆ. ವಿಹಾರಕ್ಕೆಂದು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್​ ಇಬ್ಬರು ಬದುಕುಳಿದಿದ್ದಾರೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಆಕ್ರೋಶ…!
ಮೃತಪಟ್ಟವರನ್ನು ಗೋಹಿಲ್ ಕುಟುಂಬದ ರಾಜೇಶ್(33), ಯೋಗೇಶ್(19), ತುಳಸಿಬೆನ್(20), ಜಾನ್ವಿ(3), ಆರ್ಯ(2) ಮತ್ತು ರಿಂಕಲ್(15) ಎಂದು ಗುರುತಿಸಲಾಗಿದೆ. ವಾಯುವಿಹಾರಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದ ಗೋಹಿಲ್​ ಕುಟುಂಬದ ಮಕ್ಕಳು ದಡದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಸಮುದ್ರದ ನೀರು ಏಕಾಏಕಿ ಹೆಚ್ಚಾದ ಪರಿಣಾಮ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸಲು ಉಳಿದ ಕುಟುಂಬ ಸದಸ್ಯರು ಪ್ರಯತ್ನಿಸಿದ್ದು, ಇದೇ ವೇಳೆ ನೀರಿನಲ್ಲಿ ಮುಳುಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಒಟ್ಟು 8 ಮಂದಿ ನೀರಿನಲ್ಲಿ ಮುಳುಗಿದ್ದಾರೆ. ಈ ಪೈಕಿ 6 ಮಂದಿ ನೀರು ಪಾಲಾಗಿದ್ದು, ಬದುಕುಳಿದ ಇನ್ನಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
