ಅಹಮದಾಬಾದ್:ಗುಜರಾತ್​ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ವಿುಸಲಾಗಿದ್ದ ಶತಮಾನಗಳಷ್ಟು ಹಳೆಯ ತೂಗುಸೇತುವೆ ಭಾನುವಾರ ಕುಸಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೇರಿದೆ. ಮೃತರಲ್ಲಿ 47 ಮಕ್ಕಳು ಸೇರಿದ್ದಾರೆ. ಈವರೆಗೆ 185 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವು ಮಂದಿ ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ರಕ್ಷಣೆ ಮಾಡಿರುವವರನ್ನು ಮೊರ್ಬಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದಲ್ಲಿ ಬದುಕುಳಿದವರ ಆರೋಗ್ಯ ವಿಚಾರಿಸಲು ಇಂದು ಪ್ರಧಾನಿ ಮೋದಿ ಅವರು ಮೊರ್ಬಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮೊರ್ಬಿ ಆಸ್ಪತ್ರೆಯ ಚಿತ್ರಣವೇ ಬದಲಾಗಿಬಿಟ್ಟಿದೆ. ಹಲವು ಮೂಲಸೌಕರ್ಯವಿಲ್ಲದೆ, ಕಳೆಗುಂದಿದ್ದ ಮೊರ್ಬಿ ಆಸ್ಪತ್ರೆಯನ್ನು ಒಂದೇ ದಿನದಲ್ಲಿ ನವೀಕರಣ ಮಾಡಲಾಗಿದೆ.
ಪ್ರಧಾನಿ ಭೇಟಿಗೂ ಮುನ್ನವೇ ರಾತ್ರೋರಾತ್ರಿ ಆಸ್ಪತ್ರೆಯ ದುರಸ್ತಿ ಕಾರ್ಯವನ್ನು ನಡೆಸಲಾಗಿದ್ದು, ಪ್ರಧಾನಿ ಮುಂದೆ ಮುಖಭಂಗವಾಗ ಆಗಬಾರದು ಅಂತಾ ತಮ್ಮ ಹುಳುಕುಗಳನ್ನು ಸರ್ಕಾರ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದೆ. ಕೆಲವು ಗೋಡೆಗಳು ಮತ್ತು ಸೀಲಿಂಗ್​ಗೆ ಹೊಸದಾಗಿ ಬಣ್ಣ ಬಳಿಯಲಾಗಿದೆ. ಅಲ್ಲದೆ, ಹೊಸ ವಾಟರ್​ ಕೂಲರ್ಸ್​ಗಳನ್ನು ತರಲಾಗಿದೆ. ಸುಮಾರು 13 ಗಾಯಗಳುಗಳು ದಾಖಲಾಗಿರುವ ಎರಡು ವಾರ್ಡಿನ ಬೆಡ್​ಶೀಟ್​ಗಳನ್ನು ಬದಲಾಯಿಸಲಾಗಿದೆ. ಸಾಕಷ್ಟು ಕೆಲಸಗಾರರು ರಾತ್ರಿಯೆಲ್ಲ ಕೆಲಸ ಮಾಡಿದ್ದು, ಆಸ್ಪತ್ರೆಗೆ ಹೊಸ ರೂಪ ನೀಡಿದ್ದಾರೆ. ಆದರೆ, ಹಳೆಯ ವಾಟರ್​ ಕೂಲರ್ಸ್​, ಹಾನಿಯಾದ ಗೋಡೆಗಳು ಮತ್ತು ಸೀಲಿಂಗ್​ನ ಫೋಟೋಗಳು ಆಸ್ಪತ್ರೆಯ ನಿಜವಾದ ಚಿತ್ರಣವನ್ನು ಸಾರುತ್ತಿವೆ.
ಉನ್ನತ ಸರ್ಕಾರಿ ಅಧಿಕಾರಿಗಳು ಭೇಟಿ ನೀಡುವ ಮೊದಲು ಸರ್ಕಾರಿ ಕಟ್ಟಡ, ರಸ್ತೆ, ಶಾಲಾ-ಕಾಲೇಜು ಮತ್ತು ಆಸ್ಪತ್ರೆಗಳ ನವೀಕರಣವು ಸಾಮಾನ್ಯ. ಆದರೆ, ಇದನ್ನೇ ಗುರಿಯಾಗಿಸಿಕೊಂಡಿರುವ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ), ತಮ್ಮ ಟ್ವಿಟರ್​ನಲ್ಲಿ ಮೊರ್ಬಿ ಆಸ್ಪತ್ರೆಯ ನವೀಕರಣ ಮಾಡುತ್ತಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಬಿಜೆಪಿಯು ಪ್ರಧಾನಿಯವರಿಗೆ “ಫೋಟೋಶೂಟ್” ಅನ್ನು ಖಚಿತಪಡಿಸಿಕೊಳ್ಳಲು “ಈವೆಂಟ್ ಮ್ಯಾನೇಜ್‌ಮೆಂಟ್” ನಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ.
ಮೊರ್ಬಿ ಆಸ್ಪತ್ರೆಗೆ ಪ್ರಧಾನಿ ಮೋದಿ ಇಂದು ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಪೇಟಿಂಗ್​ ನಡೆಯುತ್ತಿದೆ. ಹೊಳಪಾದ ಟೈಲ್ಸ್​ಗಳನ್ನು ಅಳವಡಿಸಲಾಗುತ್ತಿದೆ. ಪ್ರಧಾನಿಯವರ ಫೋಟೋಶೂಟ್​ಗೆ ಯಾವುದೇ ಲೋಪವಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ದುರಂತದಿಂದ ಅನೇಕ ಜನರು ಸತ್ತಿದ್ದರೆ, ಇವರು (ಬಿಜೆಪಿ) ಈವೆಂಟ್​ ಮ್ಯಾನೇಜ್​ಮೆಂಟ್​ನಲ್ಲಿ ತೊಡಗಿದ್ದಾರೆ. ನಾಚಿಕೆಯಾಗುವುದಿಲ್ಲವೇ ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಕಿಡಿಕಾರಿದೆ.
त्रासदी का इवेंट
कल PM मोदी मोरबी के सिविल अस्पताल जाएंगे। उससे पहले वहां रंगाई-पुताई का काम चल रहा है। चमचमाती टाइल्स लगाई जा रही हैं।
PM मोदी की तस्वीर में कोई कमी न रहे, इसका सारा प्रबंध हो रहा है।
इन्हें शर्म नहीं आती! इतने लोग मर गए और ये इवेंटबाजी में लगे हैं।pic.twitter.com/MHYAUsfaoC
— Congress (@INCIndia)October 31, 2022

ಈ ವರ್ಷ ನಡೆಯಲಿರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಎದುರಾಳಿಯಾಗಿ ಹೊರಹೊಮ್ಮಲು ಶ್ರಮಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಆಸ್ಪತ್ರೆಯ ನವೀಕರಣದ ಚಿತ್ರಗಳನ್ನು ಟ್ವೀಟ್ ಮಾಡಿದೆ. ಮೊರ್ಬಿ ಸರ್ಕಾರಿ ಆಸ್ಪತ್ರೆಯಲ್ಲಿನ ದೃಶ್ಯಗಳಿವು. ನಾಳೆ ಪ್ರಧಾನಿಯವರ ಫೋಟೋಶೂಟ್‌ನಲ್ಲಿ ಯಾವುದೇ ಲೋಪವಾಗದಂತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿ ಕೆಲಸ ಮಾಡಿದ್ದರೆ, ಮಧ್ಯರಾತ್ರಿಯಲ್ಲಿ ಆಸ್ಪತ್ರೆಯನ್ನು ಅಲಂಕರಿಸುವ ಅಗತ್ಯವಿರಲಿಲ್ಲ ಎಂದು ವ್ಯಂಗ್ಯವಾಡಿದೆ.
Morbi Civil Hospital का दृश्य…
कल प्रधानमंत्री के Photoshoot में कोई कमी ना रह जाए इसलिए अस्पताल की मरम्मत की जा रही है।
अगर भाजपा ने 27 वर्षों में काम किया होता तो आधी रात को अस्पताल को चमकाने की जरूरत न पड़ती।#BJPCheatsGujaratpic.twitter.com/h83iUmPzKA
— AAP (@AamAadmiParty)October 31, 2022

ದಶಕಗಳಿಂದೀಚೆಗೆ ದೇಶದ ಅತ್ಯಂತ ಭೀಕರ ಸೇತುವೆ ದುರಂತಕ್ಕೆ ಮೊರ್ಬಿ ಪಟ್ಟಣವು ಸಾಕ್ಷಿಯಾಗಿರುವ ಈ ಸೂತಕದ ಸಮಯದಲ್ಲಿ ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಆಸ್ಪತ್ರೆಯ ನವೀಕರಣ ಮಾಡುತ್ತಿರುವ ಸರ್ಕಾರದ ನಡೆಯ ವಿರುದ್ಧ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಕಿಡಿಕಾರಿದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಕೆಲವು ಕೆಲಸಗಳನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಮೊರ್ಬಿ ಸೇತುವೆ ಕುಸಿತ ಪ್ರಕರಣ: ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆ, 9 ಜನರ ಬಂಧನ

ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನಿಗೆ ವಿಷವುಣಿಸಿದ ಪ್ರೇಯಸಿ! ಸಾಯೋ ಮುನ್ನ ಯುವಕ ಆಡಿದ ಮಾತು ಮನಕಲಕುವಂತಿದೆ

VIDEO| ದಣಿದ ಮಾವುತನನ್ನು ಸಂತೈಸಿದ ಆನೆ! ಭಾವನಾತ್ಮಕ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 14 =
Remember me
