ಸೂರತ್:ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ 23 ವರ್ಷದ ಯುವಕನಿಗೆ ಗುಜರಾತ್‌ನ ಸೂರತ್ ನಗರದ ನ್ಯಾಯಾಲಯ ಬುಧವಾರ ಮರಣದಂಡನೆ ವಿಧಿಸಿದೆ.ಇದನ್ನೂ ಓದಿ:ಗಣೇಶನನ್ನೇ ಹೋಲುವ ಶಿಶು ಜನನ: ಸೊಂಡಿಲು, ಕಿವಿ ನೋಡಿ ಆಶ್ಚರ್ಯಚಕಿತರಾದ ಆಸ್ಪತ್ರೆ ಸಿಬ್ಬಂದಿ..!
ಯೂಸುಫ್ ಇಸ್ಮಾಯಿಲ್‌ ಎಂಬಾತ ಸೂರತ್‌ನ ಸಚಿನ್ ಇಂಡಸ್ಟ್ರಿಯಲ್ ಏರಿಯಾ ಸಮೀಪದ ಕಪ್ಲೇತಾ ಗ್ರಾಮದಲ್ಲಿ ಫೆ.27ರಂದು ತನ್ನ ಸ್ನೇಹಿತನ ಮಗಳಿಗೆ ತಿಂಡಿ ಕೊಡಿಸುವುದಾಗಿ ಹೇಳಿ ಸಮೀಪದ ಅಂಗಡಿಗೆ ಕರೆದೊಯ್ದಿದ್ದ. ಬಳಿಕ ಮಗುವಿನ ಮೇಲೆ ಅತ್ಯಾಚಾರವೆಸಗಿ, ಚಾಕುವಿನಿಂದ ಕೊಂದಿದ್ದಾನೆ. ನಂತರ ಸ್ಥಳದಿಂದ ಶವವನ್ನು ತೆರೆದ ಮೈದಾನದಲ್ಲಿ ಎಸೆದು ಪರಾರಿಯಾಗಿದ್ದ. ಈ ಕುರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರಿಗೆ ಮರುದಿನವೇ ಆರೋಪಿಯು ಸಿಕ್ಕಿ ಬಿದ್ದಿದ್ದನು.ಕೊನೆಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೊಂದು ಅಪರೂಪದ ಪ್ರಕರಣ ಎಂದು ಆರೋಪಿಸಿ ಪ್ರಾಸಿಕ್ಯೂಷನ್ ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿತ್ತು. ಎರಡು ಕಡೆಯ ವಾದವನ್ನು ಆಲಿಸಿದ ನಂತರ ಆರೋಪಿಯಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 (ಕೊಲೆ) ಮತ್ತು 376 (ಅತ್ಯಾಚಾರ), ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ.ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶಕುಂತಲಾ ಸೋಲಂಕಿ ಅವರು, ಆರೋಪಿ ಯೂಸುಫ್ ಇಸ್ಮಾಯಿಲ್‌ಗೆ ಮರಣದಂಡನೆ ವಿಧಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 11 =
Remember me
