ಗುಜರಾತ್:ವಿಚಿತ್ರ ಘಟನೆಯ ವಿಡಿಯೋವೊಂದು ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ. ಯಾರೇ ಆಗಲಿ, ದೇವಸ್ಥಾನಕ್ಕೆ ಆಗಮಿಸಿದಾಗ ಭಕ್ತಿಯಿಂದ ನಮಿಸಿ ತೆರಳಬೇಕಾದ್ದು ಕರ್ತವ್ಯ. ಬೇಜವಾಬ್ದಾರಿ ಸಾಹಸ ಮಾಡಲು ದೇವಾಲಯದ ಪರಿಸರದಲ್ಲಿ ಅವಕಾಶವಿರುವುದಿಲ್ಲ. ಹೀಗಿದ್ದೂ ಇಲ್ಲೊಬ್ಬ ವ್ಯಕ್ತಿ ಅಧಿಕಪ್ರಸಂಗಿತನ ಮಾಡಿದ್ದಾನೆ.
ವರದಿಯ ಪ್ರಕಾರ ಈ ಘಟನೆ ಗುಜರಾತಿನಲ್ಲಿ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಆನೆಯ ಕಲ್ಲಿನ ಪ್ರತಿಮೆಯೊಂದಿತ್ತು. ಏನೋ ಸಾಹಸ ಮಾಡಲು ಹೋಗಿ ಈ ವ್ಯಕ್ತಿ ಅದರೊಳಗೆ ಸಿಲುಕಿ ಹಾಕಿಕೊಂಡಿದ್ದಾನೆ. ಕೊನೆಗೆ ಇದರಿಂದ ಹೊರ ಬರಲು ಸಾಧ್ಯವಾಗದೆ ಪರದಾಡಿದ್ದಾನೆ.
ಸಣ್ಣ ಸಣ್ಣ ಸಂಧಿಗಳಲ್ಲಿ, ಮನೆಯ ಗೇಟು, ಕಿಟಕಿ ಮುಂತಾದ ಇಕ್ಕಟ್ಟಿನ ಜಾಗಗಳಲ್ಲಿ ಏನೂ ಅರಿಯದ ಮಕ್ಕಳು ಸಿಲುಕಿ ಹಾಕಿಕೊಳ್ಳುವ ಘಟನೆ ನಡೆಯುತ್ತದೆ. ಆದರೆ ಈತ ಹೇಗೆ ಸಿಲುಕಿಕೊಂಡ ಎಂದು ಇದೀಗ ಎಲ್ಲರೂ ಯೋಚಿಸುವಂತಾಗಿದೆ.
Any kind of excessive bhakti is injurious to health 😮pic.twitter.com/mqQ7IQwcij— ηᎥ†Ꭵղ (@nkk_123)December 4, 2022
Any kind of excessive bhakti is injurious to health 😮pic.twitter.com/mqQ7IQwcij
ನಿತಿನ್ ಎಂಬಾತ ತನ್ನ ಟ್ವಿಟರ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈಗಾಗಲೇ ಇದನ್ನು 2 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಜತೆಗೆ ಅತಿಯಾದ ಭಕ್ತಿ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಆನೆಯ ಪ್ರತಿಮೆಯ ಕೆಳಗೆ ಸಿಲುಕಿಕೊಂಡು, ಹೊರ ಬರಲು ಒದ್ದಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಕೆಲವರು ಸಹಾಯಕ್ಕೆ ಬಂದಿದ್ದು, ಈತನನ್ನು ಹೊರತೆಗೆಯಲು ಪ್ರಯತ್ನ ಪಟ್ಟಿದ್ದಾರೆ. ಸಾಕಷ್ಟು ಒದ್ದಾಟದ ನಂತರ ವ್ಯಕ್ತಿ ಹೊರಬಂದರು ಎಂದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 18 =
Remember me
