ಅಹಮದಾಬಾದ್:ಗಂಡಸರು ತಮ್ಮ ಹೆಂಡತಿಯರನ್ನು ಮೆಚ್ಚಿಸಲು ಏನಾದರೂ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲೊಬ್ಬ ಪತಿ ತನ್ನ ಪತ್ನಿಯನ್ನು ಮೆಚ್ಚಿಸಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.ಇದನ್ನೂ ಓದಿ:ಜಗಳದ ವೇಳೆ ಪತ್ನಿಯ ಬೆರಳನ್ನು ಕಚ್ಚಿ ಕಚ್ಚಿ ತಿಂದ ಪತಿರಾಯ..!ಗುಂಜನ್ ಕಾಂಟಿಯಾ ಎಂಬಾತ ತಾನೊಬ್ಬ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿ ಎಂದು ಹೆಂಡತಿಯ ಮುಂದೆ ಪೋಸ್​ ನೀಡುತ್ತಿದ್ದ, ಆದರೆ ಹೆಂಡತಿ ಈತನನ್ನು ನಂಬಿರಲಿಲ್ಲ. ಕೊನೆಗೆ ಗುಂಜನ್​ ಮಂಗಳವಾರ ಸಂಜೆ ಅಹಮದಾಬಾದ್​ನ ಎಸ್‌ಪಿ ರಸ್ತೆಯ ಜಗತ್‌ಪುರದ ರಾಷ್ಟ್ರೀಯ ತನಿಖಾ ಸಂಸ್ಥೆ ಕಚೇರಿ ಮುಂದೆ ಗಾಡಿ ನಿಲ್ಲಿಸಿದ್ದಾನೆ.ತಾನೊಬ್ಬನೆ ಕಛೇರಿಯ ಒಳಗೆ ಹೋಗಿ ಅವಳ ಸಂದೇಹಗಳನ್ನು ನಿವಾರಿಸಿ, ತಾನು ನಿಜವಾಗಿಯೂ ಎನ್​ಐಎ ಅಧಿಕಾರಿ ಎಂದು ಸಾಬೀತುಪಡಿಸುವುದು ಆತನ ಯೋಜನೆಯಾಗಿತ್ತು. ಈತ ಒಳಹೋಗುತ್ತಿದ್ದಂತೆ ಅವರು ತಕ್ಷಣವೇ ಈತನ ಐಡಿ ನಕಲಿ ಎಂದು ಗುರುತಿಸಿ ಗುಜರಾತ್ ಆಂಟಿ-ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ಪ್ರಧಾನ ಕಛೇರಿಗೆ() ಹಾಜರುಪಡಿಸಿದ್ದಾರೆ. ನಿಜವಾದ ಅಧಿಕಾರಿಗಳ ಸಾಮರ್ಥ್ಯ ಮತ್ತು ತೀಕ್ಷ್ಣತೆಯನ್ನು ಕಂಡು ಗುಂಜನ್​ ಬೆರಗಾಗಿದ್ದಾನೆ.ಕೊನೆಗೆ ಗುಂಜನ್​​ನನ್ನು ಎಟಿಎಸ್‌ಗೆ ಕರೆತಂದ ಎನ್‌ಐಎ ಅಧಿಕಾರಿಗಳು ಆತನ ನಿಜವಾದ ಗುರುತನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲಿ ಆತನ ಬಗ್ಗೆ ತನಿಖೆ ನಡೆಸಲಾಗಿದ್ದು, ಎನ್‌ಐಎ ಜೊತೆ ಕೆಲಸ ಮಾಡುವ ಹೇಳಿಕೆಯಿಂದ ಕಾಂತಿಯಾ ಅವರ ಪತ್ನಿಗೆ ಮನವರಿಕೆಯಾಗಲಿಲ್ಲ. ಹಾಗಾಗಿಯೇ ಆತ NIA ಕಛೇರಿಯ ಪ್ರವೇಶಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಎಂದು ಸೋಲಾ ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ:VIDEO| ಬೀದಿ ನಾಯಿಗೆ ಆಹಾರ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೃದ್ಧ: ಮುಂದೆ ನಡೆದದ್ದು..?ಹೆಂಡತಿ ಮೆಚ್ಚಿಸಲು ಹೋದ ಗಂಡನ ಈ ಕೃತ್ಯದಿಂದಾಗಿ ಆತನ ಮೇಳೆ ಎಫ್​ಐಆರ್​ ದಾಖಲಾಗಿದ್ದು, ಸುಮಾರು ನಾಲ್ಕು ವರ್ಷಗಳಿಂದ ಗುಂಜನ್​ ಕಾರ್ಡ್ ಬಳಸುತ್ತಿದ್ದ. ಅದರಲ್ಲಿ ಆತ ಸಬ್ ಇನ್ಸ್‌ಪೆಕ್ಟರ್ ಎಂದು ಉಲ್ಲೇಖಿಸಲಾಗಿದೆ. ಆದರೆ ಆತ ಗಾಂಧಿನಗರದ ಮಾನ್ಸಾ ತಾಲೂಕಿನ ಅಲ್ಲೋವಾ ಗ್ರಾಮದ ನಿವಾಸಿಯಾಗಿದ್ದು, ಮಾನ್ಸಾದಲ್ಲಿ ವೀಸಾ ಸಲಹಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 5 =
Remember me
