ಅಹಮದಾಬಾದ್‌:17 ವರ್ಷದ ಬಾಲಕಿಯ ಕೈ ಹಿಡಿದು ಚುಡಾಯಿಸಿ ಯುವಕನಿಗೆ ಅಕ್ಕ ಮತ್ತು ತಂಗಿ ಸೇರಿಕೊಂಡು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಗುಜರಾತ್​ನ ಅಹಮದಾಬಾದ್‌ನಲ್ಲಿ ನಡೆದಿದೆ.
ವಿಜಯ್​(19) ಎಂಬಾತನೇ ಚುಡಾಯಿಸಿದ ಆರೋಪಿಯಾಗಿದ್ದು, ನಿರುದ್ಯೋಗಿಯಾಗಿದ್ದಾನೆ. ಈತನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಕ್ಕ-ತಂಗಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಲಿದ್ಯಾ ಅಕ್ಕಿ ರಾಜಕೀಯ?; ಕಾಂಗ್ರೆಸ್​ಗೆ ಮುನಿರತ್ನ ಸವಾಲು!
ಕಳೆದ ಗುರುವಾರ ಕಿರಿಯ ಸಹೋದರಿ ಬೆಳಿಗ್ಗೆ 6.45 ಗಂಟೆಗೆ ತನ್ನ ಬೈಸಿಕಲ್‌ನಲ್ಲಿ ಶಾಲೆಗೆ ಹೋಗುತ್ತಿದ್ದಾಗ, ವಿಜಯ್‌ ಸರ್ಕಾಟೆ ಬಲವಂತವಾಗಿ ಆಕೆಯ ಕೈ ಹಿಡಿದು ಉಡುಗೊರೆ ನೀಡಲು ಪ್ರಯತ್ನಿಸಿದ್ದನು. ಆಕೆ ಅದನ್ನು ಸ್ವೀಕರಿಸಲು ನಿರಾಕರಿಸಿದಾಗ, ಉಡುಗೊರೆಯನ್ನು ಆಕೆಯ ಬ್ಯಾಗ್‌ನಲ್ಲಿ ಇಟ್ಟು ಬಲವಂತವಾಗಿ ಚುಂಬಿಸಿ ಕಿರುಕುಳ ನೀಡಿದ್ದಾನೆ.
ಅದೇ ಸಂಜೆ ಕಿರಿಯ ಸಹೋದರಿ ಮನೆಗೆ ಹಿಂತಿರುಗಿ ಅಳುತ್ತಾ ನಡೆದ ಘಟನೆ ಬಗ್ಗೆ ತನ್ನ ತಾಯಿಯ ಮುಂದೆ ಹೇಳಿದ್ದಳು. ಆಗ ಅವನಿಗೆ ತಕ್ಕ ಪಾಠ ಕಲಿಸಿ ಎಂದು ತನ್ನ ಹೆಣ್ಣುಮಕ್ಕಳಿಗೆ ಅವರ ತಾಯಿ ಹೇಳಿದ್ದಳು. ಶುಕ್ರವಾರ ಬೆಳಗ್ಗೆ ಮತ್ತೆ ವಿಜಯ್​ ಬಂದು ಕಿರಿಯ ಸಹೋದರಿಯ ದಾರಿಯನ್ನು ತಡೆದು ಆಕೆಯ ಕೈ ಹಿಡಿದಿದ್ದಾನೆ.
ಇದನ್ನೂ ಓದಿ:ಬುಕಿಂಗ್​ ನಂತರ ನಿಗದಿತ ಸಮಯಕ್ಕೆ ಸ್ಕೂಟರ್​ ಒದಗಿಸದ ಕಂಪನಿ: 2.05ಲಕ್ಷ ರೂ. ಜತೆಗೆ ಸ್ಕೂಟಿ ನೀಡುವಂತೆ ಆದೇಶ
ಈ ವೇಳೆ ಪಕ್ಕದಲ್ಲಿಯೇ ಕಾಯುತ್ತಿದ್ದ ಆಕೆಯ ಹಿರಿಯ ಸಹೋದರಿ ಬಂದು ವಿಜಯ್​ನನ್ನು ಬೆಲ್ಟ್​ನಿಂದ ಹೊಡೆಯ ತೊಡಗಿದ್ದಾಳೆ. ಆಗ ಶಾಲೆಯ ಇತರ ವಿದ್ಯಾರ್ಥಿಗಳು ಮತ್ತು ಕೆಲವು ದಾರಿಹೋಕರು ಇವರೊಂದಿಗೆ ಸೇರಿ ವಿಜಯ್​ಗೆ ಥಳಿಸಿದ್ದಾರೆ. ಈ ವಿಷಯವನ್ನು ತಿಳಿದ ಪಾಲಕರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದ್ದು, ಆತನ​ ವಿರುದ್ಧ ಪೋಕ್ಸ್‌ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 4 =
Remember me
