ಅಹಮದಾಬಾದ್​:ವಿಧಾನಸಭೆ ಚುನಾವಣೆ ಹಾಗೂ ಮತಗಳ ಎಣಿಕೆಯ ಸಂದರ್ಭದಲ್ಲಿ ಭಾರಿ ಭ್ರಷ್ಟಾಚಾರ ಎಸಗಿದ್ದಲ್ಲದೆ, ಚುನಾವಣೆ ಆಯೋಗ ನಿಗದಿಪಡಿಸಿದ್ದ ಹಲವು ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಗುಜರಾತ್​ನ ಶಿಕ್ಷಣ, ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಭೂಪೇಂದ್ರ ಸಿನ್ಹಾ ಚೂಡಸ್ಮಾ ಅವರ ಆಯ್ಕೆಯನ್ನು ಗುಜರಾತ್​ ಹೈಕೋರ್ಟ್​ ಅಸಿಂಧುಗೊಳಿಸಿದೆ.
2017ರ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಚೂಡಸ್ಮಾ ವಿರುದ್ಧ ಸೆಣೆಸಿದ್ದ ಕಾಂಗ್ರೆಸ್​ನ ಅಶ್ವಿನ್​ ರಾಥೋಡ್​ ಅವರು ಚೂಡಸ್ಮಾ ಅವರ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಕಾಶ್​ ಉಪಾಧ್ಯಾಯ ಅವರು ಚೂಡಸ್ಮಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದರು. ಇದು ವಿಜಯ್​ ರೂಪಾನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭಾರಿ ಆಘಾತ ಹಾಗೂ ಹಿನ್ನಡೆಯನ್ನುಂಟು ಮಾಡಿದೆ.
ಇದನ್ನೂ ಓದಿ:ಚೀನಾದಲ್ಲಿನ ಶೇ.20 ಉತ್ಪಾದನಾ ಸಾಮರ್ಥ್ಯ ಭಾರತಕ್ಕೆ ಸ್ಥಳಾಂತರಿಸುತ್ತಾ ಆ್ಯಪಲ್​?2017ರ ವಿಧಾನಸಭೆ ಚುನಾವಣೆಯಲ್ಲಿ ಢೋಲ್ಕಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪರ ಚೂಡಸ್ಮಾ ಕಣಕ್ಕಿಳಿದಿದ್ದರು. ರಾಥೋಡ್​ ಕಾಂಗ್ರೆಸ್​ನಿಂದ ಇವರಿಗೆ ತುರುಸಿನ ಪೈಪೋಟಿ ನೀಡಿದ್ದರು. ಮತಗಳ ಎಣಿಕೆಯ ವೇಳೆ ಚೂಡಸ್ಮಾ ಕೇವಲ 327 ಮತಗಳ ಅಂತರದಿಂದ ಗೆಲುವು ದಾಖಲಿಸಿರುವುದಾಗಿ ಗುಜರಾತ್​ ಚುನಾವಣಾ ಆಯೋಗ ಪ್ರಕಟಿಸಿತ್ತು.
ಆದರೆ ಅವರ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದ ರಾಥೋಡ್​, ಚುನಾವಣೆ ಪ್ರಚಾರದ ವೇಳೆ ಮತದಾರರಿಗೆ ಹಣ, ಹೆಂಡ ಹಂಚಿದ್ದರು. ಅಲ್ಲದೆ ಮತಎಣಿಕೆಯ ಸಂದರ್ಭದಲ್ಲಿ ಭಾರಿ ಭ್ರಷ್ಟಾಚಾರ ಎಸಗಿರುವುದಾಗಿಯೂ, ಚುನಾವಣಾ ಆಯೋಗ ನಿಗದಿಪಡಿಸಿದ್ದ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾಗಿ ಆರೋಪಿಸಿದ್ದರು. ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿದ್ದರು ಎನ್ನಲಾಗಿದೆ.
ಎಟಿಎಂ ಒಳಗೆ ಹಾವಿದೆ… ಜೋಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
