ನವದೆಹಲಿ:ಲಾಕ್ ಡೌನ್ ಅವಧಿಯಲ್ಲಿ 1,027 ಶ್ರಮಿಕ್ ವಿಶೇಷ ರೈಲುಗಳಲ್ಲಿ 15 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಗುಜರಾತ್ ಸರ್ಕಾರ ಭಾರತೀಯ ರೈಲ್ವೆಗೆ ಅತಿ ಹೆಚ್ಚು ಶುಲ್ಕ ಅಂದರೆ 102 ಕೋಟಿ ರೂ. ಪಾವತಿಸಿದೆ.ಅಧಿಕೃತ ದತ್ತಾಂಶಗಳ ಪ್ರಕಾರ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಲು ಶ್ರಮಿಕ್ ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ 2,142 ಕೋಟಿ ರೂ. ಖರ್ಚು ಮಾಡಿದೆ. ಆದರೆ ಕೇವಲ 429 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.ಗುಜರಾತ್ ನಂತರ ಮಹಾರಾಷ್ಟ್ರ 844 ರೈಲುಗಳಲ್ಲಿ 12 ಲಕ್ಷ ಕಾರ್ಮಿಕರನ್ನು ಸಾಗಿಸಲು ಭಾರತೀಯ ರೈಲ್ವೆಗೆ 85 ಕೋಟಿ ರೂ. ಪಾವತಿಸಿದರೆ, ತಮಿಳುನಾಡು 271 ರೈಲುಗಳಲ್ಲಿ ಅಂದಾಜು ನಾಲ್ಕು ಲಕ್ಷ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಸಾಗಿಸಲು 34 ಕೋಟಿ ರೂ. ಶುಲ್ಕ ಪಾವತಿಸಿದೆ.
ಇದನ್ನೂ ಓದಿ:ಅಪಘಾತದಲ್ಲಿ ಜಖಂಗೊಂಡಿದ್ದ ವಾಹನವನ್ನು ಹೊಕ್ಕರು, ಇಹಲೋಕವನ್ನೇ ತ್ಯಜಿಸಿದರು!
ಸಾಮಾನ್ಯವಾಗಿ ವಲಸೆ ಕಾರ್ಮಿಕರ ಮೂಲ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿರುವ ರಾಜ್ಯಗಳು ಅಂದರೆ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ವಲಸಿಗರನ್ನು ಸಾಗಿಸಲು ಕ್ರಮವಾಗಿ 21 ಕೋಟಿ, 8 ಕೋಟಿ, ಮತ್ತು 64 ಲಕ್ಷ ರೂ. ಪಾವತಿಸಿವೆ.‘ಆರ್‌ಟಿಐ ಅರ್ಜಿಯ ಮೂಲಕ ಸ್ವೀಕರಿಸಿದ ದಿನಾಂಕದ ಮಾಹಿತಿ ಪ್ರಕಾರ, ರೈಲ್ವೆ ಜೂನ್ 29 ರವರೆಗೆ 428 ಕೋಟಿ ರೂ. ಗಳಿಸಿದ್ದು, ಭಾರತೀಯ ರೈಲ್ವೆ 4,615 ಶ್ರಮಿಕ್ ರೈಲುಗಳನ್ನು ವ್ಯವಸ್ಥೆ ಗೊಳಿಸಿತ್ತು..ಆರ್‌ಟಿಐ ಉತ್ತರದಲ್ಲಿ, ರೈಲ್ವೆ ತನ್ನ ಖರ್ಚಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ, ಇದು ಶ್ರಮಿಕ್ ವಿಶೇಷ ರೈಲು ಸಂಚಾರಕ್ಕೆ ಪ್ರತಿ ಪ್ರಯಾಣಿಕರಿಗೆ 3,400 ರೂ. ಖರ್ಚು ಮಾಡಿದ್ದು,,ಒಟ್ಟು 63 ಲಕ್ಷ ವಲಸೆ ಕಾರ್ಮಿಕರಿಗೆ 2,142 ಕೋಟಿ ರೂ. ವ್ಯಯಿಸಿದೆ ಎಂದು ತೋರಿಸುತ್ತದೆ.ರೈಲ್ವೆ ಸಾರಿಗೆ ವೆಚ್ಚವನ್ನು ರಾಜ್ಯ ಸರ್ಕಾರಗಳು ಶೇ. 15 ಹಾಗೂ ಕೇಂದ್ರ ಸರ್ಕಾರ ಶೇ. 85 ಭರಿಸಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಗಲ್ವಾನ್​ ಘರ್ಷಣೆ ಸ್ಥಳದಿಂದ ಹಿಂದಕ್ಕೆ ಮರಳುತ್ತಿರುವ ಭಾರತೀಯ ಯೋಧರು
ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 600 ರೂ. ಆದರೆ, ಪ್ರತಿ ಪ್ರಯಾಣಿಕರಿಗೆ 3,400 ರೂ. ಖರ್ಚು ಮಾಡಿದ್ದು, ಒಟ್ಟು 2,142 ಕೋಟಿ ರೂ. ಖರ್ಚಾಗಿದೆ. ಮತ್ತು ಮೇ 1 ರಿಂದ 63 ಲಕ್ಷ ವಲಸೆ ಕಾರ್ಮಿಕರನ್ನು ಊರು ತಲುಪಿಸಿದ್ದು, 429 ಕೋಟಿ ರೂ. ಮಾತ್ರ ಆದಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೋವಿಡ್ 19 ಸಮಯದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕೊಡುಗೆ ನೀಡುವ ಒಂದು ಏಕೀಕೃತ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೆ ಕೆಲಸ ಮಾಡಿದೆ. ಲಾಭ ಮತ್ತು ನಷ್ಟದ ದೃಷ್ಟಿಯಿಂದ ಇದನ್ನು ನೋಡಬಾರದು ಎಂದು ಅಧಿಕಾರಿ ಹೇಳಿದರು.
ನೆರೆಮನೆಯಾಕೆ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿ 2 ವರ್ಷದಿಂದ ನಿರಂತರ ಅತ್ಯಾಚಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
