ಗಾಂಧಿನಗರ:ಗುಜರಾತ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ವಡೋದರಾದಲ್ಲಿ 10 ರಿಂದ 12 ಅಡಿ ಪ್ರವಾಹದ ನೀರು ನಿಂತಿದೆ. ಈ ನೀರಿನಲ್ಲಿ ಬಂದ ಮೊಸಳೆಯೊಂದು ಅಕೋಟಾ ಸ್ಟೇಡಿಯಂ ಬಳಿಯ ಮನೆಯೊಂದರ ಮೇಲೆ ಏರಿ ಕುಳಿತಿದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಜಿಯೋ ಮತ್ತೆ ಶಾಕ್.. ರೀಚಾರ್ಜ್ ಪ್ಲಾನ್ 300ರೂ.ಗೆ ಹೆಚ್ಚಳ!
ವೈರಲ್​ ಆಗಿರುವ ವೀಡಿಯೋದಲ್ಲಿ ಮೊಸಳೆ ಹೆಂಚು ಮತ್ತು ಸಿಮೆಂಟ್​ ಶೀಟ್​ ಹಾಕಿ ಕಟ್ಟಿರುವ ಮನೆ ಮೇಲೆ ಯಾರ ಭಯವೂ ಇಲ್ಲದೆ ಮೊಸಳೆ ನಿದ್ರಿಸುತ್ತಿರುವುದನ್ನು ಕಾಣಬಹುದಾಗಿದೆ.
ಮಳೆ ಎಡೆ ಬಿಡದೆ ಸುರಿಯುತ್ತಿದ್ದು, ವಡೋದರಾ ಪ್ರವಾಹದ ನೀರಿನಲ್ಲಿ ಮುಳುಗಿದೆ. ಬಹುಷಃ ಮನೆ ಮುಳಿಗಿದ್ದು, ಮನೆಮಂದಿ ಬೇರೆಡೆ ಸ್ಥಳಾಂತರಗೊಂಡಿರಬಹುದು. ಹೀಗಾಗಿಯೇ ಮೊಸಳೆ ಯಾವುದೇ ಭಯವಿಲ್ಲದೆ ವಿರಮಿಸುತ್ತಿದೆ.
ಇನ್ನು ಗುಜರಾತ್​ನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 35 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಸಾವಿರಾರು ಜನರು ನಿರಾಶ್ರಿತರಾದರು. ಅವರೆಲ್ಲರೂ ಮನೆಯ ಛಾವಣಿಯನ್ನು ಹತ್ತಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಇವರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಟಿಆರ್‌ಎಫ್, ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆ ಫೀಲ್ಡ್‌ ಮಾಡಿದೆ. ಈಗಾಗಲೇ ಸುಮಾರು 20 ಸಾವಿರ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
‘ತಮನ್ನಾ ಜೊತೆ ತೆಗೆದ 5 ಸಾವಿರ ಫೋಟೋಗಳು ನನ್ನ ಬಳಿ ಇವೆ, ಆದರೆ..’ : ವಿಜಯ್ ವರ್ಮಾ ಇಂಟ್ರೆಸ್ಟಿಂಗ್​ ಕಾಮೆಂಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 13 =
Remember me
