ನವದೆಹಲಿ:ಗುಜರಾತ್​ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ನ ಅಂದಿನ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಹಾಗೂ ಸರ್ಕಾರದ 62 ಹಿರಿಯ ಅಧಿಕಾರಿಗಳು ದೋಷಮುಕ್ತರು ಎಂಬ ಎಸ್​ಐಟಿ ವರದಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
2002ರ ಫೆ. 28ರಂದು ನಡೆದ ಗುಜರಾತ್ ಗಲಭೆ ಪ್ರಕರಣದಲ್ಲಿ ಸಾವಿಗೀಡಾಗಿದ್ದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿಯ ಪತ್ನಿ ಝಾಕಿಯಾ ಜಾಫ್ರಿ (83) ಅವರು, ಈ ಪ್ರಕರಣದ ಕುರಿತಂತೆ ಸಲ್ಲಿಕೆಯಾಗಿದ್ದ ವಿಶೇಷ ತನಿಖಾ ದಳದ ವರದಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಗೋಧ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ಹಿಂದುಗಳಿಗೆ ಸೇಡು ತೀರಿಸಿಕೊಳ್ಳಲು ಅನುಕೂಲವಾಗುವಂತೆ ಗುಜರಾತ್​ನ ರಾಜಕಾರಣಿಗಳು ಹುನ್ನಾರ ನಡೆಸಿದ್ದರು ಎಂದು ಝಾಕಿಯಾ ಮನವಿ ಸಲ್ಲಿಸಿದ್ದರು. ಎಹ್ಸಾನ್ ಜಾಫ್ರಿ ಸಾವಿಗೂ ಹಿಂದಿನ ದಿನ ಸಬರಮತಿ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಸಂಘಟನೆಗೆ ಸೇರಿದ್ದ 59 ಮಂದಿಯನ್ನು ಬೆಂಕಿ ಹಾಕಿ ಸಾಯಿಸಲಾಗಿತ್ತು. ಆರೋಪಿಗಳು ಯಾರು ಎನ್ನುವ ಕುರಿತು ವಿವಾದವಿದ್ದರೂ ಈ ಘಟನೆ ಹಿಂದಿದ್ದದ್ದು ಮುಸ್ಲಿಮರ ಗುಂಪು ಎಂದು ಶಂಕಿಸಲಾಗಿತ್ತು. ಹಿಂದೂಗಳ ಹತ್ಯೆಗೆ ಪ್ರತೀಕಾರವಾಗಿ ಮರುದಿನ ಗಲಭೆ ಸಂಭವಿಸಿದ್ದು, ಇದರಲ್ಲಿ 1,180 ಮಂದಿ ಹತ್ಯೆಗೀಡಾಗಿದ್ದರು.
ಸರ್ಕಾರಿ ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು: ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ?

ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 9 =
Remember me
