ಅಹಮಾದಾಬಾದ್​:ಹದಿನೈದು ವರ್ಷದ ಅಪ್ರಾಪ್ತ ಬಾಲಕನ ಮೇಲೆ 45 ವರ್ಷದ ಟ್ಯೂಷನ್​ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆತಂಕಕಾರಿ ಘಟನೆ ಗುಜರಾತ್​ ರಾಜಧಾನಿ ಅಹಮದಾಬಾದ್​ನ ಚಾಂದ್​ಖೀದ್​ ಏರಿಯಾದಲ್ಲಿ ನಡೆದಿದೆ.
ಆರೋಪಿಯನ್ನು ಗೋವಿಂದ್​ ಪಟೇಲ್​ ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕ 10ನೇ ತರಗತಿ ವಿದ್ಯಾರ್ಥಿ. ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಅಪ್ರಾಪ್ತ ಬಾಲಕನ ಜೊತೆ ಅಶ್ಲೀಲವಾಗಿ ವರ್ತಿಸುವುದು ಸಾಮಾನ್ಯವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಾಲಕ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಟ್ಯೂಷನ್ ಟೀಚರ್​, ಬಾಲಕನಿಗೆ ಕರೆ ಮಾಡಿ ಕೊಳಕು ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಬಾಲಕನ ಜೊತೆ ಶಿಕ್ಷಕ ಸಲಿಂಗಕಾಮ ನಡೆಸಿರುವ ಬಗ್ಗೆ ದೂರಿನಲ್ಲಿ ತಿಳಿಸಿಲ್ಲ. ಆದರೆ, ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಆರೋಪಿ ಪಟೇಲ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಎಸ್‌ಸಿ-ಎಸ್‌ಟಿ ಸೆಲ್‌ಗೆ ವರ್ಗಾಯಿಸಲಾಗುವುದು ಎಂದು ವರದಿಯಾಗಿದೆ. ಅಟ್ರಾಸಿಟಿ ಕಾಯ್ದೆಯಡಿ ದೂರು ಒಳಗೊಂಡಿರುವ ಕಾರಣ ಇದೀಗ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಕರಣದ ತನಿಖೆ ನಡೆಯಲಿದೆ. ಟ್ಯೂಷನ್ ಸೆಂಟರ್‌ನ ಇತರ ವಿದ್ಯಾರ್ಥಿಗಳ ಮೇಲೂ ಆರೋಪಿ ಪಟೇಲ್, ಇದೇ ರೀತಿ ವರ್ತಿಸಿದ್ದಾರೆಯೇ ಎಂದು ತನಿಖೆ ನಡೆಸಲಿದ್ದಾರೆ.(ಏಜೆನ್ಸೀಸ್​)
ತಮಗೆ ತಾವೇ ದುಬಾರಿ ಕಾರು ಗಿಫ್ಟ್​ ಕೊಟ್ಟುಕೊಂಡ MBA ಚಾಯ್​ವಾಲಾ: ಅಮೆರಿಕದಲ್ಲಿ ಟೀ ಉದ್ಯಮ ಸ್ಥಾಪನೆಗೆ ಸಜ್ಜು

ಮೆಟ್ಟಿಲುಗಳ ಸಹಾಯವಿಲ್ಲದೆ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಏರಿದ ಕೋತಿ ರಾಜ್!

ಆಸ್ತಿ ಕೊಡಲ್ಲ, ಮದುವೆ ಮಾಡಿಸಲ್ಲ ಎಂದು ಮನನೊಂದು ಪ್ರಾಣ ತ್ಯಾಗ ಮಾಡಿದ ಯುವಕ ಸಾವಿನಲ್ಲೂ ಶಾಲಾ ಪ್ರೇಮ ಮೆರೆದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 11 =
Remember me
