ದೆಹಲಿ:ಕೇಂದ್ರ ಸರ್ಕಾರದ ಚಿನ್ನದ ನಗದೀಕರಣ ಯೋಜನೆ (Gold Monetization Scheme- GSM) ಅಡಿಯಲ್ಲಿ ಚಿನ್ನವನ್ನು ಠೇವಣಿ ಇಡುವಲ್ಲಿ ಗುಜರಾತ್‌ನ ದೇವಾಲಯಗಳು ಮುಂಚೂಣಿಯಲ್ಲಿದ್ದು, ಅವು ತಮ್ಮಲ್ಲಿರುವ ಸುಮಾರು 200 ಕೆಜಿ ಚಿನ್ನವನ್ನು ಈವರೆಗೆ ಠೇವಣಿ ಮಾಡಿವೆ.ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕರನ್ನು ಹೊಂದಿರುವ ದೇಶವಾಗಿದ್ದು, ಇಲ್ಲಿನ ಜನರು ಚಿನ್ನವನ್ನು ಖರೀದಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಜನರು ತಮ್ಮಲ್ಲಿನ ಚಿನ್ನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಆದರೆ ಜಿಎಂಎಸ್ ಅಡಿಯಲ್ಲಿ ಚಿನ್ನವನ್ನು ಠೇವಣಿ ಇಡಲು ಗುಜರಾತ್‌ನ ದೇವಾಲಯಗಳು ಆಸಕ್ತಿ ತೋರಿಸಿದ್ದು, ಅವುಗಳು ಅಡಯಿಟ್ಟಿರುವ ಚಿನ್ನದ ಮೌಲ್ಯ ಸುಮಾರು 120 ಕೋಟಿ ರೂ. ಆಗಿದೆಇದನ್ನೂ ಓದಿ:ಧರ್ಮಾಚರಣೆಯಿಂದ ಮನಸ್ಸಿಗೆ ನೆಮ್ಮದಿ, ಡಾ.ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನಅಹಮದಾಬಾದ್‌ನ ಇಂಡಿಯನ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿರುವ ಇಂಡಿಯನ್ ಗೋಲ್ಡ್ ಪಾಲಿಸಿ ಸೆಂಟರ್ ನಡೆಸಿದ ಅಧ್ಯಯನದ ಪ್ರಕಾರ, ಈ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಜನರು ತಮ್ಮ ಬಳಿಯಿರುವ ಚಿನ್ನದ ಶೇಕಡಾ 0.22ರಷ್ಟು ಮಾತ್ರ ಠೇವಣಿ ಮಾಡಿದ್ದಾರೆ. ಆದರೆ, ಗುಜರಾತ್​ನ ಅಂಬಾಜಿ ದೇವಾಲಯ ಮತ್ತು ಸೋಮನಾಥ ದೇವಾಲಯವು ಅಲ್ಪಾವಧಿಯ ಕೇಂದ್ರದ ಈ ಯೋಜನೆಯಡಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸುಮಾರು 200 ಕೆಜಿ ಚಿನ್ನವನ್ನು ಠೇವಣಿ ಮಾಡಿ ಬಡ್ಡಿ ರೂಪದಲ್ಲಿ ಹಣ ಗಳಿಸಿವೆ.ದೇವಸ್ಥಾನದ ಟ್ರಸ್ಟ್‌ಗಳ ಪ್ರಕಾರ, ಈ ಯೋಜನೆಯಿಂದ ಬಂದಿರುವ ಹಣವನ್ನು ದಾನ ಕಾರ್ಯಗಳ ಜತೆಗೆ ದೇವಸ್ಥಾನದ ದುರಸ್ತಿ, ನಿರ್ವಹಣೆಗೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:29 ವರ್ಷಗಳ ಹಿಂದಿನ ಅಪಘಾತ ಪ್ರಕರಣ; 83ರ ವೃದ್ಧನಿಗೆ ಕೋರ್ಟ್​ನಿಂದ​ ನೋಟಿಸ್​ಸಾರ್ವಜನಿಕ ವಲಯದ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿದ್ದು, ಗೋಲ್ಡ್ ಮಾನಿಟೈಸ್ ಸ್ಕೀಮ್ (ಜಿಎಂಎಸ್) ಅಡಿಯಲ್ಲಿ ದೇಣಿಗೆಯಾಗಿ ಸಂಗ್ರಹಿಸಿದ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಸರ್ಕಾರವು ದೇವಸ್ಥಾನಗಳನ್ನು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಪ್ರತಯಾಗಿ ವಾರ್ಷಿಕ 2.25% ಬಡ್ಡಿಯನ್ನು ಕೇಂದ್ರವು ನೀಡುತ್ತದೆ. ಮಧ್ಯಮ ಅವಧಿಯ ಠೇವಣಿಗಳ ಮೇಲೆ, ದೀರ್ಘಾವಧಿಯ ಠೇವಣಿಗಳ ಮೇಲೆ ಬಡ್ಡಿಯು ವರ್ಷಕ್ಕೆ 2.5% ವರೆಗೆ ಹೆಚ್ಚಾಗುತ್ತದೆ. ಇದು ದೇವಾಲಯಗಳಿಗೆ ಲಾಭದಾಯಕ ವ್ಯವಹಾರವಾಗಿದೆ ಏಕೆಂದರೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದಲ್ಲಿ ಚಿನ್ನವನ್ನು ಪಡೆದುಕೊಳ್ಳಬಹುದಾಗಿದ್ದು, ಠೇವಣಿಗಳು ಏರುತ್ತಿರುವ ಚಿನ್ನದ ಬೆಲೆಗೆ ಸಮನಾಗಿದ್ದು, ಅವು ಬಡ್ಡಿಯನ್ನು ಸಹ ಗಳಿಸುತ್ತವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 5 =
Remember me
