ಅಹಮದಾಬಾದ್​:ಏನಾದರೂ ವಸ್ತುವನ್ನು ಉಚಿತವಾಗಿ ಕೊಡುತ್ತೇವೆಂದರೆ ಯಾರು ಬೇಡೆವೆನ್ನುತ್ತಾರೆ ಹೇಳಿ? ಅದೇ ರೀತಿ ಉಚಿತವಾಗಿ ಒಳಬಟ್ಟೆಗಳನ್ನು (ಇನ್ನರ್​ವೇರ್​) ಕೊಡುತ್ತೇವೆ ಎಂದು ಬರುತ್ತಿದ್ದ ಜಾಹೀರಾತನ್ನು ನಂಬಿದ ಯುವತಿ ನಂತರ ಪೇಚಿಗೆ ಸಿಲುಕಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಪೊಲೀಸ್​ ಪಯಣದ ಅನುಭವದ ಬುತ್ತಿ ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ 18ರಂದು ಬಿಡುಗಡೆ
ಅಹಮದಾಬಾದ್​ನ ಯುವತಿಯ ಮೊಬೈಲ್​ಗೆ ಡಿಸೆಂಬರ್​ 3ರಂದು ಒಂದು ಜಾಹೀರಾತಿನ ಸಂದೇಶ ಬಂದಿತ್ತಂತೆ. ನೀವು ಈ ಲಿಂಕ್​ನಲ್ಲಿ ನೋಂದಣಿಯಾದರೆ ನಿಮಗೆ ಉಚಿತವಾಗಿ ಇನ್ನರ್​ವೇರ್​ಗಳನ್ನು ಕಳುಹಿಸಿಕೊಡಲಾಗುತ್ತದೆ ಎಂದು ಅದರಲ್ಲಿ ತಿಳಿಸಲಾಗಿತ್ತು. ಅದರ ಆಸೆಗೆ ಬಿದ್ದ ಯುವತಿ ಲಿಂಕ್​ ತೆರೆದು, ಮೊಬೈಲ್ ಸಂಖ್ಯೆ ಕೊಟ್ಟು ನೋಂದಣಿ ಮಾಡಿಕೊಂಡಿದ್ದಾಳೆ. ಅದಾದ ಕೆಲ ದಿನಗಳ ನಂತರ ಆಕೆಗೆ ಯಾವುದೋ ಒಂದು ನಂಬರ್​ ಇಂದ ಮೆಸೇಜ್​ ಬಂದಿದೆ. ನೀವು ನಿಮ್ಮ ಫೋಟೋವನ್ನು ಕಳುಹಿಸಿದರೆ ನಿಮಗೆ ಉಚಿತ ಇನ್ನರ್​ವೇರ್​ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ. ಅದರಂತೆ ಆಕೆ ಫೋಟೋ ಕಳುಹಿಸಿದ್ದಾಳೆ ಕೂಡ.
ಈ ಎಲ್ಲ ಘಟನೆಯಾಗಿ ಒಂದು ವಾರವಾದ ಮೇಲೆ ಮತ್ತೊಂದು ಸಂದೇಶ ಬಂದಿದೆ. ನಿಮ್ಮ ನಗ್ನ ಫೋಟೋಗಳನ್ನು ಕಳುಹಿಸಿಕೊಡಿ. ನಂತರ ನಿಮಗೆ ಉಚಿತ ಇನ್ನರ್​​ವೇರ್​ ಕಳುಹಿಸಿಕೊಡಲಾಗುವುದು ಎಂದು ಮೆಸೇಜ್​ ಮಾಡಲಾಗಿದೆ. ಈ ಸಂದೇಶವನ್ನು ಕಂಡು ಶಾಕ್​ ಆದ ಯುವತಿ ಅದು ಸಾಧ್ಯವಿಲ್ಲ ಎಂದು ವಾಪಾಸು ಮೆಸೇಜ್​ ಮಾಡಿದ್ದಾಳೆ. ನಂತರ ಅತ್ಯಂತ ಅಸಭ್ಯವಾಗಿ ಆ ನಂಬರ್​ನಿಂದ ಮೆಸೇಜ್​ಗಳು ಬರಲಾರಂಭಿಸಿವೆ. ಇದರಿಂದ ಸಿಟ್ಟಿಗೆದ್ದ ಯುವತಿ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ:ಚಿಕನ್​, ಮೊಟ್ಟೆ ಮಾರಾಟ ನಿಷೇಧ! ರೆಸ್ಟೋರೆಂಟ್​ ಖಾದ್ಯಗಳ ಮೇಲೂ ನಿರ್ಬಂಧ
ಉಚಿತ ಇನ್ನರ್​ವೇರ್​ ಕೊಡುವುದಾಗಿ ಹೇಳಿ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಸಿಕೊಳ್ಳಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಮಧ್ಯರಾತ್ರಿ ಮಹಿಳೆಯ ಬರ್ಬರ ಹತ್ಯೆ: ಫೋನ್​ ಕರೆ ಸ್ವೀಕರಿಸಿದ ಮೃತಳ ಭಾವನಿಗೆ ಕಾದಿತ್ತು ಶಾಕ್​!

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − two =
Remember me
