ವಡೋದರಾ: ಟಿಕ್​ಟಾಕ್ ವಿಡಿಯೋ ಕ್ರೇಜ್​ ಸಮಾಜದ ಬಹುತೇಕ ಜನರನ್ನಾವರಿಸಿದೆ. ಏನೋ ಮಾಡಿ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿಬಿಡಬೇಕೆಂಬ ಹಂಬಲ, ಬಯಕೆ. ಹೀಗೆ ಬಯಸಿದ್ದ ಇಬ್ಬರು ಸೂಕ್ಷ್ಮ ಮರೆತು ಮಾಡಿದ ಅವಾಂತರಕ್ಕೆ ಈಗ ಪ್ರತಿಫಲ ಉಣ್ಣುತ್ತಿದ್ದಾರೆ. ಅಂತಹ ಅವಾಂತರ ಅವರೇನು ಮಾಡಿದ್ರು ಅಂತೀರಾ?
ಇದನ್ನೂ ಓದಿ:ಜೂನ್ 12ರಂದು ನಡೆಯಲಿದೆ ಜಿಎಸ್​ಟಿ ಕೌನ್ಸಿಲ್ ಸಭೆ: ಚರ್ಚೆಯಾಗಲಿವೆ ಮಹತ್ವದ ವಿಚಾರಗಳು
ಆರೋಪಿಗಳ ಹೆಸರು ಸಲ್ಮಾನ್ ಪಠಾಣ್​ ಮತ್ತು ಆರೀಫ್ ಶೇಖ್​. ಲಾಕ್​ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಇಬ್ಬರನ್ನೂ ಸಯಾಜಿಗಂಜ್​ ಪೊಲೀಸರು ಬಂಧಿಸಿ ಸೆರೆಗೆ ದಬ್ಬಿದ್ದರು. ಇದಾಗಿದ್ದು ಏಪ್ರಿಲ್​ 16ರಂದು. ಅಂದೇ ಅವರ ಪರ ವಕೀಲರು ಜಾಮೀನು ತಂದು ಬಿಡಿಸಿಕೊಂಡು ಹೋಗಿದ್ದರು. ಅದೇ ದಿನ ಈ ಆರೋಪಿಗಳು ಪೊಲೀಸ್ ಠಾಣೆಯಿಂದ ಬಿಡುಗಡೆ ಹೊಂದುವ ಸಮಯದಲ್ಲಿ ಠಾಣೆಯ ಒಳಾಂಗಣದ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡಿದ್ದರು. ಈ ಚಿತ್ರೀಕರಣ ನಡೆಸುವುದಕ್ಕೆ ಅವರು ಯಾರ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಸಬ್​ ಇನ್​ಸ್ಪೆಕ್ಟರ್​ ಎಸ್​ಜಿ ಸೋಲಂಕಿ ಹೇಳಿದ್ದಾರೆ.
ಇದನ್ನೂ ಓದಿ:ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ
ಈ ವಿಡಿಯೋವನ್ನು ಬಳಸಿಕೊಂಡ ಆರೋಪಿಗಳು ಅದಕ್ಕೆ ಪೊಲೀಸ್ ಸೈರನ್ ಸೇರಿಸಿ ಎಡಿಟ್ ಮಾಡಿಕೊಂಡು ಟಿಕ್​ಟಾಕ್​ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಆರೋಪಿಗಳಲ್ಲೊಬ್ಬ ಠಾಣೆಯೊಳಗೆ ಸ್ಟೇರ್​ಕೇಸ್​ ಮೇಲೆ ಕುಳಿತು ಶೂಗಳನ್ನು ಧರಿಸುತ್ತಿರುವ ದೃಶ್ಯವಿದೆ. ಜಾಮೀನು ಪಡೆದು ಠಾಣೆಯಿಂದ ಹೊರಗೆ ಹೋಗುವ ಮುನ್ನ ಚಿತ್ರೀಕರಿಸಿದ ದೃಶ್ಯವಿದು. ಇದನ್ನು ಫಿಲ್ಮಿ ಸ್ಟೈಲ್​ನಲ್ಲಿ ಎಡಿಟ್ ಮಾಡಿಕೊಂಡು ನಂತರ ಟಿಕ್​ಟಾಕ್​ಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂತು.
ಇದನ್ನೂ ಓದಿ:ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!
ಟಿಕ್​ಟಾಕ್ ವಿಡಿಯೋ ಅಪ್ಲೋಡ್ ಮಾಡಿದ ಈ ಆರೋಪಿಗಳ ವಿರುದ್ಧ ಅನುಮತಿ ಪಡೆಯದೇ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯ ಸೆಕ್ಷನ್​ 66(ಇ) ಪ್ರಕಾರ ಉಲ್ಲಂಘನೆಯ ಪ್ರಕರಣವನ್ನು ಪೊಲೀಸರು ಕೂಡಲೇ ದಾಖಲಿಸಿದ್ದಾರೆ. ಇದಲ್ಲದೆ, ಐಪಿಸಿ ಸೆಕ್ಷನ್​ 269, 270ರ ಪ್ರಕಾರವೂ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
VIDEO: ನಿಮ್ಮಂಥ ಚೆಲುವೆ ಮಾರ್ಕೆಟ್​ಗೆ ಬರಬಾರದು ಎಂದ ಸರ್ಕಾರಿ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one × one =
Remember me
