ಗುಜರಾತ್​:ನೈಸರ್ಗಿಕ ವಿಕೋಪಗಳ ನಂತರ ಮಕ್ಕಳಿಗೆ ಹೆಸರಿಡುವ ವಿಲಕ್ಷಣ ಪ್ರವೃತ್ತಿಗೆ ಅನುಗುಣವಾಗಿ, ಗುಜರಾತ್​ನ ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಮಗುವಿಗೆ ಚಂಡಮಾರುತದ ಹೆಸರಿಟ್ಟಿದ್ದಾರೆ.
ಕಚ್ ಜಿಲ್ಲೆಯ ಜಖೌನಲ್ಲಿರುವ ತಾತ್ಕಾಲಿಕ ಆಶ್ರಯದಲ್ಲಿ ವಾಸಿಸುತ್ತಿರುವ ಕುಟುಂಬವು ಒಂದು ತಿಂಗಳ ಹಿಂದೆ ಹುಟ್ಟಿದ ಮಗುವಿಗೆ ಏನು ಹೆಸರು ಇಡಬೇಕು ಎಂದು ಯೋಚಿಸಿ, ಕೊನೆಗೆ ಬಿಪರ್​ಜಾಯ್​ ಎಂದು ನಾಮಕರಣ ಮಾಡಿದೆ. ಬಿಪರ್​ಜಾಯ್​ ಎಂಬ ಹೆಸರನ್ನು 2020ರಲ್ಲಿ ವಿಶ್ವ ಹವಾಮಾನ ಸಂಸ್ಥೆಯ (WMO) ರಾಷ್ಟ್ರಗಳು ಅನುಮೋದನೆ ನೀಡಿವೆ.
ಇದನ್ನೂ ಓದಿ:ಒಳನುಸುಳುವ ಯತ್ನ: ಜಮ್ಮು ಕಾಶ್ಮೀರದಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಬಿಪರ್​ಜಾಯ್​ ಎಂದರೆ “ಅಕ್ಷರಶಃ ವಿಪತ್ತು” ಎಂದರ್ಥವಾಗಿದೆ. ಈ ಪದವನ್ನು ಬೆಂಗಾಲಿಯಲ್ಲಿ ಭಾಷೆಯಿಂದ ಪಡೆಯಲಾಗಿದ್ದು, ವಿಶ್ವ ಹವಾಮಾನ ಸಂಸ್ಥೆಯು ಚಂಡಮಾರುತಗಳ ಹೆಸರನ್ನು ಶಿಫಾರಸ್ಸು ಮಾಡುತ್ತದೆ. ಈ ಹಿಂದೆಯೂ ಹಲವಾರು ಕುಟುಂಬಗಳು ಚಂಡಮಾರುತದ ಹೆಸರುಗಳನ್ನು ಮಕ್ಕಳಿಗೆ ಇಟ್ಟಿದ್ದಾರೆ. ತಿತ್ಲಿ, ಫನಿ ಮತ್ತು ಗುಲಾಬ್ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಭೂಕಂಪಗಳು ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ನಂತರ ಮಕ್ಕಳಿಗೆ ಹೆಸರಿಡುವ ವಿಚಿತ್ರ ಪ್ರವೃತ್ತಿ ಹೊಸದಲ್ಲ. ಈ ಹಿಂದೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಹುಟ್ಟಿದ ನವಜಾತ ಹೆಣ್ಣು ಮಗುವಿಗೆ ಕರೋನಾ ಎಂದು ಹೆಸರಿಟ್ಟಿದ್ದರು.
ಇದನ್ನೂ ಓದಿ:ವಿವಾಹಕ್ಕೂ ಮುನ್ನವೇ ಪ್ರಾಣಬಿಟ್ಟ ವರ: ಮದುವೆ ಮನೆಯಲ್ಲಿ ಶೋಕ
ಮುಂಬೈ-ಉತ್ತರ ಪ್ರದೇಶ ರೈಲಿನಲ್ಲಿ ಜನಿಸಿದ ಮಗುವಿಗೆ ಹಾಗೂ ಲಾಕ್​ಡೌನ್​ ವೇಳೆ ತ್ರಿಪುರಾದಲ್ಲಿ ಸಿಲುಕಿದ್ದ ರಾಜಸ್ಥಾನದ ದಂಪತಿ ತಮ್ಮ ನವಜಾತ ಗಂಡು ಮಗುವಿಗೆ ಲಾಕ್‌ಡೌನ್ ಎಂದು ಹೆಸರಿಟ್ಟಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
