ಗುಜರಾತ್​ನ ಕೆವಾಡಿಯಾದಿಂದ 3.5 ಕಿಮೀ ದೂರದಲ್ಲಿ ನರ್ಮದಾ ನದಿ ತೀರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರ 182 ಮೀ ಎತ್ತರದ ಏಕತಾ ಮೂರ್ತಿಗೆ ಆಗಸ್ಟ್​ 25ರಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್​)ಯ ಸಿಬ್ಬಂದಿ ಕಾವಲು ಕಾಯಲಿದ್ದಾರೆ.
ಗೃಹ ಸಚಿವಾಲಯದ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ ಸಿಐಎಸ್​ಎಫ್​ನ 272 ಸಿಬ್ಬಂದಿಯನ್ನು ಏಕತಾ ಮೂರ್ತಿ ಕಾವಲಿಗೆ ನಿಯೋಜಿಸಲಾಗುವುದು ಎಂದು ಸಿಐಎಸ್​ಎಫ್​ ಡಿಜಿ ರಾಜೇಶ್​ ರಂಜನ್​ ತಿಳಿಸಿದ್ದಾರೆ.ಇದನ್ನೂ ಓದಿ:ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿಬಿದ್ದ ಯುವತಿ: ಮುಂದೇನಾಯ್ತು?
ಕರೊನಾ ಕಾರಣದಿಂದ ಏಕತಾ ಮೂರ್ತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಮತ್ತೆ ಇಲ್ಲಿ ಪ್ರವಾಸೋದ್ಯಮ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಪ್ಟೆಂಬರ್​ 2ರಿಂದ ಪ್ರವಾಸಿಗರು ಏಕತಾ ಮೂರ್ತಿ ವೀಕ್ಷಣೆಗೆ ಆಗಮಿಸಲು ಅವಕಾಶ ಕೊಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.ಈ ಏಕತಾ ಮೂರ್ತಿಯನ್ನು 2018ರ ಅಕ್ಟೋಬರ್​ 31ರಂದು, ಸರ್ದಾರ್​ ವಲ್ಲಭಭಾಯಿ ಅವರ 143ನೇ ಜನ್ಮದಿನದಂದು ಲೋಕಾರ್ಪಣೆ ಮಾಡಿದ್ದಾರೆ. 3,050 ಕೋಟಿ ರೂ.ವೆಚ್ಚದಲ್ಲಿ ಏಕತಾ ಮೂರ್ತಿಯನ್ನು ನಿರ್ಮಿಸಲಾಗಿದೆ. (ಏಜೆನ್ಸೀಸ್​)
ಲಾಕ್​ಡೌನ್​ನಲ್ಲಿ ಕ್ರಿಕೆಟ್​ ಆಡುವುದೇ ಮರೆತುಹೋಗುತ್ತೆ ಎಂದು ಹೆದರಿದ್ದ ಕೆಎಲ್​ ರಾಹುಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
