ಭೋಪಾಲ್​:ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣ ದೇವ ಕೃಪೆ ತೋರಿದ್ದು, ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಆದರೆ, ಕೆಲವು ಕಡೆ ಇನ್ನೂ ಮಳೆಯಾಗದ ಕಾರಣ ಜನ ದೇವರ ಮೊರೆ ಹೋಗುತ್ತಿದ್ದು, ವಿವಿಧ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.
ಮಳೆ ಬರೆಸಲು ಜನರು ನಡೆಸುವ ವಿವಿಧ ಆಚರಣೆಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವುದು ಕೂಡ ಸೇರಿದೆ. ಮಳೆಗಾಲ ಆರಂಭವಾಗಿ ಒಂದು ಹನಿ ನೀರು ಆಕಾಶದಿಂದ ಭೂಮಿಗೆ ಬೀಳದೆ ಇದ್ದಾಗ ಜನರು ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಕತ್ತೆಗಳಿಗೆ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬುದು ಜನರ ನಂಬಿಕೆಯಾಗಿದೆ. ಆದರೆ, ಇಲ್ಲೊಂದು ಜಾಗದಲ್ಲಿ ಕತ್ತೆಗಳಿಗೆ ಮೊದಲ ಮದುವೆಯಾದ ಖುಷಿಗೆ ಕತ್ತೆಗಳಿಗೆ ಗುಲಾಬ್​ ಜಾಮೂನನ್ನು ತಿನ್ನಿಸಲಾಗುತ್ತೆ ಎಂದರೆ ನೀವು ನಂಬುತ್ತೀರ. ಹೌದು ವಿಚಿತ್ರ ಎನಿಸಿದರೂ ಇದು ನಿಜ.
This video is from Mandsaur in Madhya Pradesh where donkeys were fed Gulab Jamun after the wish for rain was fulfilled.According to the belief, donkeys were made to plough the crematorium with the wish for good rain.Height of stupidity and blind faith.pic.twitter.com/QPRHZ3Kimb
ಇದನ್ನೂ ಓದಿ:ಇದೆಲ್ಲಾ ಒಂದು ಕಾರಣನಾ… ಬಿಸಿಸಿಐ ನಡೆಗೆ ಕಿಡಿಕಾರಿದ ಪಾಕ್​ ಮಾಜಿ ನಾಯಕ
ಮಧ್ಯಪ್ರದೇಶದ ಮಂಡ್​ಸೌರ್​ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆ ಆರಂಭವಾಗದ ಕಾರಣ ಜನರು ಬರಗಾಲ ಬಾರದೇ ಇರಲು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಇದಾದ ಕೆಲ ದಿನಗಳಿಗೆ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದೊಂದು ವಿಶಿಷ್ಟ ಸಂಪ್ರದಾಯವಾಗಿದ್ದು, ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಜನರು ಆಶ್ಚರ್ಯಚಕಿತರಾಗಿ ಕಮೆಂಟ್​ ಮಾಡುತ್ತಿದ್ದಾರೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕತ್ತೆಗಳಿಗೆ ಸ್ನಾನ ಮಾಡಿಸುವ ಜನ ಬಳಿಕ ಅದಕ್ಕೆ ಹೂವಿನ ಹಾರಗಳನ್ನು ಹಾಕಿ ಪೂಜೆ ಮಾಡುತ್ತಾರೆ. ಇದಾದ ಬಳಿಕ ಅವುಗಳಿಗೆ ನೈವೇದ್ಯವಾಗಿ ಗುಲಾಬ್​ ಜಾಮೂನ್​ಗಳನ್ನು ತಿನ್ನಿಸುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
