ಮಹಾರಾಷ್ಟ್ರ:ಮದುವೆ ಎಂದರೆ ಸಡಗರ, ಸಂಭ್ರಮದ ದಿನ. ಪ್ರತಿಯೊಬ್ಬರು ತಮ್ಮ ಮದುವೆಯ ಕುರಿತಾಗಿ ಕನಸು ಕಂಡಿರುತ್ತಾರೆ. ಮದುವೆ ಹೀಗೆ ಆಗಬೇಕು ಎಂದು ಕೆಲವು ಪ್ಲ್ಯಾನ್​​ ಕೂಡಾ ಮಾಡಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಹೀಗೆ ವಿಚಿತ್ರವಾದ ಪ್ಲ್ಯಾನ್​​ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ವರದಿಯಾಗಿರುವ ವಿಡಿಯೋದಲ್ಲಿ ವಧು-ವರರು ತಮ್ಮ ಮದುವೆಯ ದಿನ ಮಂಟಪದಲ್ಲಿ ಬೆಂಕಿ ಉಗುಳುವ ಗನ್‌ (ಸ್ಪಾರ್ಕಲ್ ಗನ್​) ಗಳೊಂದಿಗೆ ಪೋಸ್ ನೀಡುತ್ತಿದ್ದಾರೆ. ಪರಸ್ಪರ ಪಕ್ಕದಲ್ಲಿ ಪೋಸ್ ಕೊಡುತ್ತಾ, ಬಂದೂಕು ಹಿಡಿದುಕೊಂಡು ಕ್ಯಾಮರಾಗೆ ನಗುತ್ತಾರೆ. ದಂಪತಿ ನಂತರ ತಮ್ಮ ಬಂದೂಕುಗಳನ್ನು ಹಾರಿಸುತ್ತಾರೆ. ಈ ವೇಳೆ ಅವಘಡ ಸಂಭವಿಸಿದೆ.
ಇದನ್ನೂ ಓದಿ:ಭೀಕರ ಅಪಘಾತ; ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತ್ಯುವಧು ಹಿಡಿದಿದ್ದ ಗನ್ ಸ್ಫೋಟಗೊಂಡು ಆಕೆಯ ಮುಖಕ್ಕೆ ಹೊಡೆಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಭಯಭೀತಳಾದ ಅವಳು ಬೇಗನೆ ಗನ್​​ ಬಿಳಿಸಿ ಸುರಕ್ಷತೆಗಾಗಿ ಹರಸಾಹಸ ಮಾಡುತ್ತಿದ್ದಳು, ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಭಯದಿಂದ ತನ್ನ ಕೊರಳಲಿದ್ದ ಮಾಲೆಯನ್ನು ತೆಗೆದುಹಾಕಿದಳು. ಸ್ಥಳದಲ್ಲಿದ್ದವರು ಆಕೆಯ ಸಹಾಯಕ್ಕೆ ಮುಂದಾಗುತ್ತಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್​ ಮೂಲಕವಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಇಂಥಹ ಸಾಹಸಕ್ಕೆ ಕೈ ಹಾಕದಿರಿ ಎಂದು ನವ ದಂಪತಿಯಲ್ಲಿ ಮನವಿ ಮಾಡುತ್ತಿದ್ದಾರೆ.
Idk what's wrong with people these days they are treating wedding days more like parties and this is how they ruin their perfect day. 🤷‍♀️pic.twitter.com/5o626gUTxY
— Aditi. (@Sassy_Soul_)March 31, 2023

ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ 34 ಕುರಿಗಳು ದುರಂತ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
