ಥಾಣೆ:ಪತಂಜಲಿ ಯೋಗ ಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿಯು ಥಾಣೆಯ ಹೈಲ್ಯಾಂಡ್ ಪ್ರದೇಶದಲ್ಲಿ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯನ್ನು ಶುಕ್ರವಾರ ಆಯೋಜಿಸಿತ್ತು. ಈ ಸಭೆಯಲ್ಲಿ ದೇವೇಂದ್ರ ಫಡ್ನವೀಸ್​ ಪತ್ನಿ ಅಮೃತಾ ಫಡ್ನವಿಸ್ ಉಪಸ್ಥಿತರಿದ್ದರು. ಆಗ ಬಾಬಾ ರಾಮದೇವ್ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ಸಂದರ್ಭ ಬಾಬಾ ರಾಮ್​ದೇವ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಹಿಳೆಯರ ಕುರಿತಾದ ವಿವಾದಾತ್ಮಕ ಹೇಳಿಕೆಗಳಿಂದ ಆಕ್ರೋಶದ ಅಲೆ ಎದ್ದಿದೆ. ಈಗ ಅದೇ ಸಾಲಿಗೆ ಯೋಗ ಗುರು ಬಾಬಾ ರಾಮದೇವ್​ರ ಮಹಿಳೆಯರ ಉಡುಪುಗಳ ಕುರಿತಾದ ವಿವಾದಾತ್ಮಕ ಹೇಳಿಕೆ ಸೇರಿದೆ. ಏಕನಾಥ್ ಶಿಂಧೆ ಗುಂಪಿನ ಅಬ್ದುಲ್ ಸತ್ತಾರ್ ಎನ್‌ಸಿಪಿಯ ಸುಪ್ರಿಯಾ ಸುಳೆ ಬಗ್ಗೆ ನೀಡಿದ್ದ ಹೇಳಿಕೆ ಪ್ರಕರಣ ಇನ್ನೂ ಹಸಿಯಾಗಿರುವಾಗವ ರಾಮ್‌ದೇವ್ ಬಾಬಾ ಹೊಸ ವಿವಾದವನ್ನು ಶುರು ಮಾಡಿದ್ದಾರೆ.
ಥಾಣೆಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಾಬಾ ರಾಮ್​ದೇವ್ ಬಾಯ್ತಪ್ಪಿ ಈ ಹೇಳಿಕೆ ನೀಡಿದ್ದರು. ‘ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್ ಸೂಟ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ಪ್ರಕಾರ ಅವರು ಏನನ್ನೂ ಧರಿಸದಿದ್ದಾಗ ಕೂಡ ಚೆನ್ನಾಗಿ ಕಾಣುತ್ತಾರೆ’ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಅವರ ಪುತ್ರ ಸಂಸದ ಶ್ರೀಕಾಂತ್ ಶಿಂಧೆ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ಹೇಳಿಕೆ ವಿವಾದ ಮತ್ತಷ್ಟು ಬಿಸಿಯಾಗಲಿದೆ ಎಂದು ಹೇಳಲಾಗುತ್ತಿದೆ.
Sign in to your account
Please enter an answer in digits:eighteen + seven =
Remember me
